IPL 2023: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ನೀಡಿದ ಬೆನ್ ಸ್ಟೋಕ್ಸ್: ಪ್ರಮುಖ ಪಂದ್ಯಗಳಿಗೆ ಅಲಭ್ಯ!

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಲವು ಆಘಾತ ಎದುರಾಗುತ್ತಿವೆ. ಈ ಮೊದಲು ತಂಡದ ಪ್ರಮುಖ ವೇಗಿ ಕೈಲ್ ಜೇಮಿಸನ್ ಗಾಯದಿಂದ ಐಪಿಎಲ್‌ನಿಂದಲೇ ಹೊರಬಿದ್ದಿದ್ದರು, ಇದರ ಬೆನ್ನಲ್ಲೇ ತಂಡದ ಪ್ರಮುಖ ಆಲ್‌ರೌಂಡರ್, ಬೆನ್‌ಸ್ಟೋಕ್ಸ್ ಕೂಡ ಶಾಕ್ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಂದು ವೇಳೆ ಪ್ಲೇ ಆಫ್ ಪ್ರವೇಶಿಸಿದರೆ, ಬೆನ್ ಸ್ಟೋಕ್ಸ್ ಸೇವೆಯನ್ನು ಕಳೆದುಕೊಳ್ಳಲಿದೆ. ಪ್ರಮುಖ ಪಂದ್ಯಗಳಿಗೆ ತಾವು ಲಭ್ಯವಿಲ್ಲ ಎಂದು ಸ್ಟೋಕ್ಸ್ ಹೇಳಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿರುವ ಬೆನ್ ಸ್ಟೋಕ್ಸ್ ಎಲ್ಲಾ ಲೀಗ್‌ಗಳಿಗಿಂತ ಮುಖ್ಯವಾಗಿ ದೇಶಕ್ಕಾಗಿ ಆಡಲು ಬಯಸುತ್ತಾರೆ. ಜೂನ್‌ನಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಮತ್ತು ಆಶಸ್ ಸರಣಿಗೆ ಮುನ್ನ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದು. ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಿದ್ದಂತೆ ತವರಿಗೆ ವಾಪಸ್ ತೆರಳಲು ನಿರ್ಧರಿಸಿದ್ದಾರೆ.
ಬಿಸಿಸಿಐ ಈಗಾಗಲೇ ಐಪಿಎಲ್ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ, ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದ ಕೊನೆ ಪಂದ್ಯವನ್ನು ಮೇ 20 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಬೆನ್ ಸ್ಟೋಕ್ಸ್ 2023ರ ಐಪಿಎಲ್‌ನಲ್ಲಿ ಆಡುವ ಕೊನೆಯ ಪಂದ್ಯ ಇದಾಗಿದೆ.

ಸಿಎಸ್‌ಕೆ ತಂಡಕ್ಕೆ ಭಾರಿ ಹಿನ್ನಡೆ
2023ರ ಐಪಿಎಲ್ ಆವೃತ್ತಿಯ ಬಳಿಕ ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್‌ನಿಂದ ನಿವೃತ್ತಿಯಾಗುವುದು ಖಚಿತವಾಗಿದೆ. ಧೋನಿ ನಂತರ ತಂಡದ ನಾಯಕತ್ವ ವಹಿಸಿಕೊಳ್ಳುವ ಆಟಗಾರರಲ್ಲಿ ಬೆನ್‌ಸ್ಟೋಕ್ಸ್ ಹೆಸರು ಕೂಡ ಕೇಳಿ ಬಂದಿದೆ, ಆದರೆ ಸ್ಟೋಕ್ಸ್ ಹೀಗೆ ಟೂರ್ನಿಯ ಮಧ್ಯದಲ್ಲೇ ಹೋದರೆ ಮುಂದೇನು ಎನ್ನುವ ಚಿಂತೆ ಸಿಎಸ್‌ಕೆ ಫ್ರಾಂಚೈಸಿಗೆ ಎದುರಾಗಿದೆ.
ಧೋನಿ ನಿವೃತ್ತಿಯನ್ನು ಸ್ಮರಣೀಯವಾಗಿಸಲು ಈ ಬಾರಿ ಕಪ್ ಗೆಲ್ಲಬೇಕೆನ್ನುವ ಉತ್ಸಾಹದಲ್ಲಿದ್ದ ಸಿಎಸ್‌ಕೆ ತಂಡಕ್ಕೆ ಪ್ರಮುಖ ಆಲ್‌ರೌಂಡರ್ ಅಲಭ್ಯವಾಗುತ್ತಿರುವುದು ದೊಡ್ಡ ಹಿನ್ನಡೆಯಾಗಿದೆ. ಐಪಿಎಲ್ 2023 ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು.

ವಿಶ್ರಾಂತಿ ಪಡೆಯಬೇಕು ಎಂದ ಸ್ಟೋಕ್ಸ್
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯಕ್ಕೆ ಮುನ್ನ ಮಾತನಾಡಿರುವ ಬೆನ್ ಸ್ಟೋಕ್ಸ್, "ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಆಡುತ್ತೇನೆ. ಇಂಗ್ಲೆಂಡ್‌ಗೆ ವಾಪಸಾಗಲು ಮತ್ತು ಐರ್ಲೆಂಡ್ ವಿರುದ್ಧ ಟೆಸ್ಟ್‌ಗೆ ಮುನ್ನ ಸಾಕಷ್ಟು ವಿಶ್ರಾಂತಿ ಪಡೆಯುತ್ತೇನೆ" ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಏಕೈಕ ಟೆಸ್ಟ್ ಪಂದ್ಯ ಜೂನ್ 1ರಿಂದ ಆರಂಭವಾಗಲಿದೆ. ಅದಾದ ಬಳಿಕ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿ ಜೂನ್ 16ರಿಂದ ಆರಂಭವಾಗಲಿದೆ.

ಪ್ರಮುಖ ಆಟಗಾರರು ಅಲಭ್ಯತೆ
ಬೆನ್ ಸ್ಟೋಕ್ಸ್ ಮಾತ್ರವಲ್ಲದೆ ಇಂಗ್ಲೆಂಡ್‌ನ ಹಲವು ಆಟಗಾರರು ಐಪಿಎಲ್‌ನ ಪ್ಲೇ ಆಪ್ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಸ್ಯಾಮ್ ಕರನ್, ಜೋ ರೂಟ್, ಜೋಸ್ ಬಟ್ಲರ್, ಫಿಲಿಪ್ ಸಾಲ್ಟ್, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್, ರೀಸ್ ಟೋಪ್ಲಿ, ಹ್ಯಾರಿ ಬ್ರೂಕ್ ಏನಾದರೂ ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾದರೆ, ಪ್ಲೇ ಆಫ್ ಪಂದ್ಯಗಳನ್ನು ಆಡುವುದು ಅನುಮಾನವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್‌ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಸಿಂಘೀರ್, ಮುಖೇಶ್ ಪಜೀತ್‌ಹೋವ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಿಂಧು, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications