IPL 2023: ಈ ರೀತಿಯ ಫಲಿತಾಂಶ ಬಂದ್ರೆ ಚೆನ್ನೈ ಟಾಪ್ 2 ಅಲ್ಲ, ಪ್ಲೇಆಫ್‌ಗೂ ಬರಲ್ಲ!

ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭಗೊಂಡ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೀಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ.
ಟೂರ್ನಿಯ 65 ಲೀಗ್ ಹಂತದ ಪಂದ್ಯಗಳು ನಿನ್ನೆ ( ಮೇ 18 ) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯಗೊಂಡಿದ್ದು, ಇಂದಿನಿಂದ ( ಮೇ 19 ) ಕಣಕ್ಕಿಳಿದಿರುವ ಎಲ್ಲಾ 10 ತಂಡಗಳು ತಮ್ಮ ಕೊನೆಯ ಪಂದ್ಯಗಳನ್ನು ಆಡಲಿವೆ.
ಇಂದು ಧರ್ಮಶಾಲಾದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಟೂರ್ನಿಯಲ್ಲಿನ ತಮ್ಮ ಕೊನೆಯ ಪಂದ್ಯವನ್ನಾಡಲಿವೆ. ಇನ್ನು ಇತ್ತಂಡಗಳೂ ತಲಾ 12 ಅಂಕಗಳನ್ನು ಮಾತ್ರ ಪಡೆದಿರುವುದರಿಂದ ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇಆಫ್ ಪ್ರವೇಶಿಸುವ ಅವಕಾಶ ಇಲ್ಲದೇ ಇದ್ದು, ಈ ಪಂದ್ಯದ ಬಳಿಕ ನಡೆಯಲಿರುವ ಪಂದ್ಯಗಳು ಯಾವ ಯಾವ ತಂಡಗಳು ಪ್ಲೇಆಫ್ ಪ್ರವೇಶಿಸಲಿವೆ ಎಂಬುದನ್ನು ನಿರ್ಧರಿಸಲಿವೆ.
ಹೌದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಈಗಾಗಲೇ ಪ್ಲೇಫ್ ಸುತ್ತಿನ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಉಳಿದ ಮೂರು ಸ್ಥಾನಗಳನ್ನು ಯಾವ ತಂಡಗಳು ಪಡೆದುಕೊಳ್ಳಲಿವೆ ಎಂಬ ಕುತೂಹಲ ಹೆಚ್ಚಾಗಿದೆ. ಪ್ಲೇಆಫ್ ರೇಸ್‌ನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪೈಪೋಟಿಗೆ ಬಿದ್ದಿವೆ.
ಹೀಗೆ ಟೂರ್ನಿಯ ಕೊನೆಯ ನಾಲ್ಕು ಪಂದ್ಯಗಳು ಬಾಕಿ ಇರುವ ಸಮಯ ಬಂದರೂ ಪ್ಲೇಆಫ್ ಅರ್ಹತೆಯನ್ನು ಕೇವಲ ಒಂದು ತಂಡ ಮಾತ್ರ ಪಡೆದುಕೊಂಡಿದ್ದು, ಉಳಿದ ತಂಡಗಳು ಸ್ವಲ್ಪ ಎಡವಿದರೂ ಸಹ ಪ್ಲೇಆಫ್ ಪ್ರವೇಶ ಪಡೆದುಕೊಳ್ಳುವುದನ್ನು ಕೈತಪ್ಪಿಸಿಕೊಳ್ಳಲಿವೆ.
ಇನ್ನು ಸದ್ಯ ಅಂಕಪಟ್ಟಿಯಲ್ಲಿ 15 ಅಂಕಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿರುವ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಸಹ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ತಂಡ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಸಹ ತನ್ನ ಕೊನೆಯ ಪಂದ್ಯವನ್ನೇನಾದರೂ ಸೋತರೆ ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿ ಮನೆಗೆ ಹೋಗಲಿದೆ.
ಹೌದು, ಮುಂದಿನ ಪಂದ್ಯಗಳ ಫಲಿತಾಂಶ ಈ ಕೆಳಕಂಡಂತೆ ಬಂದರೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಪ್ರವೇಶಿಸಲು ಅರ್ಹತೆ ಗಿಟ್ಟಿಸಿಕೊಳ್ಳಲಾಗದೇ ಟೂರ್ನಿಯಿಂದ ಹೊರಬೀಳಲಿದೆ.
* ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಚೆನ್ನೈ ಸೋತರೆ 15 ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸಲಿದೆ.
* ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಚೆನ್ನೈನಷ್ಟೇ ಅಂಕಗಳನ್ನು ಹೊಂದಿರುವ ಲಕ್ನೋ ಗೆದ್ದು, ಡೆಲ್ಲಿ ವಿರುದ್ಧ ಚೆನ್ನೈ ಸೋತರೆ ಲಕ್ನೋ ಹೆಚ್ಚಿನ ಅಂಕ ಪಡೆದುಕೊಂಡು ಎರಡನೇ ಸ್ಥಾನಕ್ಕೆ ಏರಿಕೆ ಕಾಣಲಿದೆ.
* ಡೆಲ್ಲಿ ವಿರುದ್ಧ ಚೆನ್ನೈ ಸೋತು, ಕೊಲ್ಕತ್ತಾ ವಿರುದ್ಧ ಲಕ್ನೋ ಗೆದ್ದು ಮಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ಗೆದ್ದರೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಟಾಪ್ 4 ಸ್ಥಾನ ಸಿಗದೇ ಟೂರ್ನಿಯಿಂದ ಹೊರಬೀಳಲಿದೆ.
ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಯಾವುದೇ ತಲೆ ನೋವಿಲ್ಲದೇ ಪ್ಲೇಆಫ್ ಪ್ರವೇಶಿಸಬೇಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications