Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಚೆನ್ನೈ vs ಲಕ್ನೋ ಪಂದ್ಯ ಮಳೆಗೆ ಆಹುತಿ; ಅಂಕ ಹಂಚಿಕೆ ಹೇಗೆ?

IPL 2023: Chennai Super Kings vs Lucknow Super Giants match washed out due to rain

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ( ಮೇ 3 ) ಎರಡು ಪಂದ್ಯಗಳು ಜರುಗುತ್ತಿವೆ. ಮಧ್ಯಾಹ್ನ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡುತ್ತಿವೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಆರಂಭಗೊಂಡು ಮೊದಲ ಇನ್ನಿಂಗ್ಸ್‌ನ 19.2 ಓವರ್ ಪಂದ್ಯ ಮುಕ್ತಾಯಗೊಂಡ ಬಳಿಕ ಮಳೆಗೆ ಆಹುತಿಯಾಗಿದೆ. ಹೌದು, ಲಕ್ನೋ ನಗರದಲ್ಲಿ ವಿಪರೀತ ಮಳೆಯಾದ ಕಾರಣ ಪಂದ್ಯ ಅರ್ಧಕ್ಕೆ ಮೊಟಕುಗೊಂಡಿದೆ. ಈ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಳೆಯಿಂದಾಗಿ ರದ್ದಾದ ಮೊದಲ ಪಂದ್ಯ ಎನಿಸಿಕೊಂಡಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 19.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು. ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಯುಷ್ ಬದೋನಿ ಆಸರೆಯಾಗಿದ್ದಾರೆ. 44 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ಪರ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಯುಷ್ ಬದೋನಿ 33 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 59 ರನ್ ಬಾರಿಸಿ ಅಜೇಯರಾಗಿ ಉಳಿದು ತಂಡವನ್ನು ಹೀನಾಯ ಮೊತ್ತ ಗಳಿಸುವುದರಿಂದ ಕಾಪಾಡಿದರು.

ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕ ಆಟಗಾರರಾಗಿ ಮನನ್ ವೊಹ್ರಾ ಹಾಗೂ ಕೈಲ್ ಮೇಯರ್ಸ್ ಕಣಕ್ಕಿಳಿದರು. ಮನನ್ ವೊಹ್ರಾ 10 ರನ್ ಗಳಿಸಿ ಔಟ್ ಆದರೆ, ಕೈಲ್ ಮೇಯರ್ಸ್ 14 ರನ್ ಗಳಿಸಿದರು. ಇನ್ನುಳಿದಂತೆ ಕರ್ನ್ ಶರ್ಮಾ 9, ನಾಯಕ ಕೃನಾಲ್ ಪಾಂಡ್ಯ ಗೋಲ್ಡನ್ ಡಕ್ ಔಟ್, ಮಾರ್ಕಸ್ ಸ್ಟಾಯಿನಿಸ್ 6, ನಿಕೋಲಸ್ ಪೂರನ್ 20 ಹಾಗೂ ಕೃಷ್ಣಪ್ಪ ಗೌತಮ್ 1 ರನ್ ಗಳಿಸಿದರು.

ಹೀಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಲೆಹಾಕಿದ ಒಟ್ಟು 127 ರನ್‌ಗಳಲ್ಲಿ 6 ರನ್ ಎಕ್ಸ್ಟ್ರಾ ಮೂಲಕ ಬಂದರೆ, ಆಯುಷ್ ಬದೋನಿ ಹೊರತುಪಡಿಸಿ ಉಳಿದ ಆಟಗಾರರೆಲ್ಲಾ ಸೇರಿ 83 ಎಸೆತಗಳಲ್ಲಿ 60 ರನ್ ಗಳಿಸಿದರೆ, ಆಯುಷ್ ಬದೋನಿ ಒಬ್ಬರೇ 33 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಮೊಯಿನ್ ಅಲಿ, ಮಹೀಶ್ ತೀಕ್ಷಣ ಹಾಗೂ ಮಥೀಶ್ ಪತಿರಣ ತಲಾ ಎರಡು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.

ಇನ್ನು ಪಂದ್ಯದಲ್ಲಿ ಫಲಿತಾಂಶ ಬಾರದ ಕಾರಣ ಎರಡೂ ತಂಡಗಳಿಗೂ ಒಂದೊಂದು ಅಂಕ ಲಭಿಸಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಎರಡೂ ತಂಡಗಳು ತಲಾ 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 5 ಪಂದ್ಯಗಳಲ್ಲಿ ಗೆದ್ದಿವೆ, 4 ಪಂದ್ಯಗಳಲ್ಲಿ ಸೋತಿವೆ. ಇಂದಿನ ಡ್ರಾ ಅಂಕವೂ ಸೇರಿದಂಗೆ ಎರಡೂ ತಂಡಗಳು ತಲಾ 11 ಅಂಕಗಳನ್ನು ಪಡೆದುಕೊಂಡಿವೆ. ಲಕ್ನೋ ಸೂಪರ್ ಜೈಂಟ್ಸ್ ಹೆಚ್ಚು ನೆಟ್ ರನ್ ರೇಟ್ ಹೊಂದಿರುವ ಕಾರಣ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದೆ.

Story first published: Wednesday, May 3, 2023, 20:02 [IST]
Other articles published on May 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+