For Quick Alerts
ALLOW NOTIFICATIONS  
For Daily Alerts
 

IPL 2023: ಟಿ20 ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ; ಯಾವ ತಂಡ ಯಾವ ಗುಂಪಿನಲ್ಲಿ? ಯಾವ ತಂಡಕ್ಕೆ ಯಾರು ನಾಯಕ?

IPL 2023: Countdown To 16th IPL Season, Teams, Groups, Captains And Venues

ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವಿಗೆ ಕ್ಷಣಗಣನೆ ಆರಂಭವಾಗಿದ್ದು, ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ಈ ಟೂರ್ನಿಯನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಕ್ರೀಡಾಹಬ್ಬದಂತೆ ನೋಡಲಿದ್ದಾರೆ.

ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳ ನಡುವೆ ಉದ್ಘಾಟನಾ ಪಂದ್ಯದ ಮೂಲಕ ಐಪಿಎಲ್‌ನ 16ನೇ ಋತುವಿಗೆ ಚಾಲನೆ ಸಿಗಲಿದೆ.

ಕಳೆದ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ತಮ್ಮ ಚೊಚ್ಚಲ ಪಂದ್ಯಾವಳಿಯಲ್ಲಿಯೇ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವನ್ನು ಫೈನಲ್‌ನಲ್ಲಿ ಮಣಿಸಿ ಟ್ರೋಫಿ ಎತ್ತಿ ಹಿಡಿದಿತ್ತು.

2019ರ ನಂತರ ಇದೇ ಮೊದಲ ಬಾರಿಗೆ ತವರಿನ ಮತ್ತು ಎದುರಾಳಿ ನೆಲದಲ್ಲಿ ಆಡುವ ಸ್ವರೂಪಕ್ಕೆ ಹಿಂದಿರುಗಿರುವ ಐಪಿಎಲ್ ಪಂದ್ಯಾವಳಿಯನ್ನು ವೀಕ್ಷಿಸಲು ಮತ್ತು ಪ್ರೋತ್ಸಾಹಿಸಲು ಎಲ್ಲಾ ಹತ್ತು ತಂಡಗಳ ಅಭಿಮಾನಿಗಳ ಕಾತರರಾಗಿದ್ದಾರೆ.

IPL 2023: Countdown To 16th IPL Season, Teams, Groups, Captains And Venues

ಈ ಬಾರಿಯೂ ಹತ್ತು ತಂಡಗಳು ಐಪಿಎಲ್ ಪ್ರಶಸ್ತಿಗಾಗಿ ಸೆಣಸಾಡಲಿದ್ದು, 52 ದಿನಗಳ ಅವಧಿಯಲ್ಲಿ 12 ಮೈದಾನಗಳಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ. ನಂತರ ಎರಡು ಕ್ವಾಲಿಫೈಯರ್, ಒಂದು ಎಲಿಮಿನೇಟರ್ ಮತ್ತು ಒಂದು ಫೈನಲ್ ಪಂದ್ಯ ನಡೆಯಲಿದೆ. ಮೇ 28ರಂದು ನಡೆಯುವ ಅಂತಿಮ ಹಣಾಹಣಿಗೆ ಯಾವ ತಂಡಗಳು ಮುಖಾಮುಖಿಯಾಗಲಿವೆ ಎಂಬುದು ಕುತೂಹಲ ಮೂಡಿಸಿದೆ.

ಐಪಿಎಲ್ 2023 ಗುಂಪುಗಳು:
ಗುಂಪು ಎ: ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್

ಗುಂಪು ಬಿ: ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್

ಹತ್ತು ತಂಡಗಳ ನಾಯಕರ ಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು - ಫಾಫ್ ಡು ಪ್ಲೆಸಿಸ್

ಚೆನ್ನೈ ಸೂಪರ್ ಕಿಂಗ್ಸ್ - ಎಂಎಸ್ ಧೋನಿ

ಮುಂಬೈ ಇಂಡಿಯನ್ಸ್- ರೋಹಿತ್ ಶರ್ಮಾ

ಗುಜರಾತ್ ಟೈಟನ್ಸ್- ಹಾರ್ದಿಕ್ ಪಾಂಡ್ಯ

ರಾಜಸ್ಥಾನ ರಾಯಲ್ಸ್ - ಸಂಜು ಸ್ಯಾಮ್ಸನ್

ಪಂಜಾಬ್ ಕಿಂಗ್ಸ್- ಶಿಖರ್ ಧವನ್

ಲಕ್ನೋ ಸೂಪರ್ ಜೈಂಟ್ಸ್- ಕೆಎಲ್ ರಾಹುಲ್

ಡೆಲ್ಲಿ ಕ್ಯಾಪಿಟಲ್ಸ್- ಡೇವಿಡ್ ವಾರ್ನರ್

ಕೋಲ್ಕತ್ತಾ ನೈಟ್ ರೈಡರ್ಸ್- ನಿತೀಶ್ ರಾಣಾ

ಸನ್‌ರೈಸರ್ಸ್ ಹೈದರಾಬಾದ್ - ಏಡೆನ್ ಮಾರ್ಕ್ರಾಮ್

IPL 2023: Countdown To 16th IPL Season, Teams, Groups, Captains And Venues

ಐಪಿಎಲ್ 2023 ನಡೆಯುವ ಕ್ರೀಡಾಂಗಣಗಳು
ಎಂಎ ಚಿದಂಬರಂ ಸ್ಟೇಡಿಯಂ- ಚೆನ್ನೈ

ಅರುಣ್ ಜೇಟ್ಲಿ ಕ್ರೀಡಾಂಗಣ - ನವದೆಹಲಿ

ಎಂ ಚಿನ್ನಸ್ವಾಮಿ ಕ್ರೀಡಾಂಗಣ - ಬೆಂಗಳೂರು

ನರೇಂದ್ರ ಮೋದಿ ಸ್ಟೇಡಿಯಂ - ಅಹಮದಾಬಾದ್‌

ವಾಂಖೆಡೆ ಸ್ಟೇಡಿಯಂ- ಮುಂಬೈ

ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ - ಮೊಹಾಲಿ

ಸವಾಯಿ ಮಾನ್ಸಿಂಗ್ ಕ್ರೀಡಾಂಗಣ - ಜೈಪುರ

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ - ಹೈದರಾಬಾದ್

ಈಡನ್ ಗಾರ್ಡನ್ ಸ್ಟೇಡಿಯಂ - ಕೋಲ್ಕತ್ತಾ

ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ - ಲಕ್ನೋ

ಅಸ್ಸಾಂ ಕ್ರಿಕೆಟ್ ಸ್ಟೇಡಿಯಂ - ಗುವಾಹಟಿಯವರು

ಹಿಮಾಚಲಪ್ರದೇಶ ಕ್ರಿಕೆಟ್ ಸ್ಟೇಡಿಯಂ - ಧರ್ಮಶಾಲಾ

Story first published: Wednesday, March 29, 2023, 8:26 [IST]
Other articles published on Mar 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+