IPL 2023 : ಸಿಎಸ್‌ಕೆ ತಂಡಕ್ಕೆ ಡ್ವೇನ್ ಬ್ರಾವೋ ಸ್ಥಾನವನ್ನು ಬೆನ್ ಸ್ಟೋಕ್ಸ್ ತುಂಬಲು ಸಾಧ್ಯವಿಲ್ಲ ಎಂದ ಆಕಾಶ್ ಚೋಪ್ರಾ

ಚೆನ್ನೈ ಸೂಪರ್ ಕಿಂಗ್ಸ್ 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ರನ್ನು 16.25 ಕೋಟಿ ರುಪಾಯಿಗೆ ಖರೀದಿ ಮಾಡಿತು. ಈ ಮೂಲಕ ಸಿಎಸ್‌ಕೆ ತಂಡ 2023ರಲ್ಲಿ ಬಲಿಷ್ಠ ಆಲ್‌ರೌಂಡರ್ ಗಳೊಂದಿಗೆ ಕಣಕ್ಕಿಳಿಯಲಿದೆ.
2023ರ ಮಿನಿ ಹರಾಜಿಗೆ ಮುನ್ನ ತಂಡದ ಪ್ರಮುಖ ಆಲ್‌ರೌಂಡರ್ ಡ್ವೇನ್ ಬ್ರಾವೋ ಐಪಿಎಲ್‌ಗೆ ವಿದಾಯ ಹೇಳಿದರು. ಅವರು 2023ರ ಐಪಿಎಲ್‌ನಲ್ಲಿ ಕೋಚಿಂಗ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಐಪಿಎಲ್ 2023 ರ ಹರಾಜಿನಲ್ಲಿ ಡ್ವೇನ್ ಬ್ರಾವೋಗೆ ಬದಲಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ಬೆನ್ ಸ್ಟೋಕ್ಸ್ ಅನ್ನು ಖರೀದಿ ಮಾಡಿಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಡ್ವೇನ್ ಬ್ರಾವೋ ಸ್ಥಾನಕ್ಕೆ ಬದಲಿಯಾಗಿ ಬೆನ್ ಸ್ಟೋಕ್ಸ್ ಅವರನ್ನು ಆಯ್ಕೆ ಆಗಿಲ್ಲ ಎಂದು ಚೋಪ್ರಾ ಹೇಳಿದ್ದಾರೆ.
"ಚೆನ್ನೈ ಪಿಚ್ ಬೆನ್ ಸ್ಟೋಕ್ಸ್ ಬೌಲಿಂಗ್‌ಗೆ ಸರಿಹೊಂದುವುದಿಲ್ಲ. ಆದರೆ, ಅವರು ಉತ್ತಮ ಆಟಗಾರ ಎಂದು ಒಪ್ಪುತ್ತೇನೆ. ಆದರೂ, ಡ್ವೇನ್ ಬ್ರಾವೋ ಅವರ ಬದಲೀ ಆಟಗಾರನಾಗಿರಲು ಸಾಧ್ಯವಿಲ್ಲ. ಅವರು ಬ್ರಾವೋ ಸ್ಥಾನವನ್ನು ತುಂಬಲಾರರು" ಎಂದು ಹೇಳಿದ್ದಾರೆ.

ಬ್ರಾವೋ ಲೆಜೆಂಡ್ ಆಟಗಾರ
ಬೆನ್ ಸ್ಟೋಕ್ಸ್ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಬ್ರಾವೋ ಜೊತೆ ಬೌಲರ್ ಆಗಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. "ಡ್ವೇನ್ ಬ್ರಾವೋ ಬೌಲಿಂಗ್ ಮಾಡುವಷ್ಟು ಪರಿಣಾಮಕಾರಿಯಾಗಿ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಡ್ವೇನ್ ಬ್ರಾವೋ ಒಬ್ಬ ದಂತಕಥೆ, ಅವರು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಟಗಾರ. ಬೆನ್ ಸ್ಟೋಕ್ಸ್ ಬೌಲಿಂಗ್ ಬ್ರಾವೋ ಅವರಷ್ಟು ಗುಣಮಟ್ಟ ತಲುಪುವುದಿಲ್ಲ" ಎಂದು ಹೇಳಿದರು.
ಡ್ವೇನ್ ಬ್ರಾವೋ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಸಿಎಸ್‌ಕೆ ತಂಡಕ್ಕಾಗಿ ಆಡಿದ 116 ಪಂದ್ಯಗಳಲ್ಲಿ 8.36 ರ ಎಕಾನಮಿಯಲ್ಲಿ ಒಟ್ಟು 140 ವಿಕೆಟ್ ಪಡೆದಿದ್ದಾರೆ.
2023ರ ಐಪಿಎಲ್ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಬೌಲಿಂಗ್ ಸಾಮರ್ಥ್ಯ ದೀಪಕ್ ಚಹರ್ ಫಿಟ್‌ನೆಸ್ ಮೇಲೆ ಅವಲಂಬಿತರಾಗಿರುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಚಹರ್ ಗಾಯದ ಸಮಸ್ಯೆಯಿಂದಾಗಿ 2022ರ ಐಪಿಎಲ್‌ನಲ್ಲಿ ಆಡಲಿಲ್ಲ.
ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅಂತಿಮ ಓವರ್ ಗಳಲ್ಲಿ ಡ್ವೈನ್ ಪ್ರಿಟೋರಿಯಸ್ ಉತ್ತಮ ಬೌಲರ್ ಆಗಲಿದ್ದಾರೆ. ಕೈಲ್ ಜೇಮಿಸನ್ ಕೂಡ ಅವರ ಬೌಲಿಂಗ್ ಆಯ್ಕೆಯಾಗಬಹುದು ಎಂದು ಹೇಳಿದರು. ಸ್ಪಿನ್ ಬೌಲಿಂಗ್‌ನಲ್ಲಿ ಮೊಯಿನ್ ಅಲಿ, ರವೀಂದ್ರ ಜಡೇಜಾ, ಮಹೇಶ್ ತೀಕ್ಷಣ ಇದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications