Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇದು, ಅದು ಎರಡೂ ಚೆನ್ನೈ ಫ್ಯಾನ್ಸ್ ಫೋಟೊಗಳಲ್ಲ; ಧೋನಿ ಕ್ರೇಜ್ ಹೆಸರಲ್ಲಿ ಹರಿದಾಡ್ತಿವೆ ನಕಲಿ ಪೋಟೊಸ್!

IPL 2023: CSK fans sharing old football fans craze video and claiming it as Dhoni craze

ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭಗೊಂಡಿದ್ದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಸನಿಹಕ್ಕೆ ಬಂದು ತಲುಪಿದೆ. ಎಲ್ಲವೂ ಅಂದುಕೊಂಡಂತೆ ಜರುಗಿದ್ದರೆ ನಿನ್ನೆ ( ಮೇ 28 ) ಈ ಟೂರ್ನಿಯ ಅಂತಿಮ, ಮಹತ್ವದ ಫೈನಲ್ ಪಂದ್ಯ ಜರುಗಬೇಕಿತ್ತು.

ಆದರೆ ಈ ಪಂದ್ಯ ಆಯೋಜನೆಯಾಗಿದ್ದ ಅಹ್ಮದಾಬಾದ್ ನಗರದಲ್ಲಿ ವಿಪರೀತ ಮಳೆಯಾದ ಕಾರಣ ನಿನ್ನೆ ನಡೆಯಬೇಕಿದ್ದ ಪಂದ್ಯ ಇಂದಿಗೆ ಮುಂದೂಡಿಕೆಯಾಗಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಈ ಪಂದ್ಯ ಇಂದು ಸಂಜೆ 7.30ಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ನಡೆಯಲಿದೆ.

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯೇ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಆಡಲಿರುವ ಕೊನೆಯ ಪಂದ್ಯ ಎನ್ನಲಾಗುತ್ತಿದ್ದು, ಅಭಿಮಾನಿಗಳೂ ಸಹ ತಮ್ಮ ನೆಚ್ಚಿನ ಆಟಗಾರನ ಕೊನೆಯ ಐಪಿಎಲ್‌ನ ಪ್ರತಿ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗಳತ್ತ ಬಂದಿದ್ದರು.

ಅತ್ತ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡು ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡಕ್ಕೆ ಮಣ್ಣು ಮುಕ್ಕಿಸಿದ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹತ್ತನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಐದನೇ ಟ್ರೋಫಿ ಎತ್ತಿ ಹಿಡಿಯುವ ತವಕದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇಷ್ಟರ ಮಟ್ಟಕ್ಕೆ ಮುನ್ನಡೆಸಿರುವ ಎಂ ಎಸ್ ಧೋನಿಯ ಕೊನೆಯ ಐಪಿಎಲ್ ಪಂದ್ಯ ಎಂದೇ ಹೇಳಲಾಗುತ್ತಿರುವ ಈ ಬಾರಿಯ ಫೈನಲ್ ಪಂದ್ಯ ವೀಕ್ಷಿಸಲು ಸಾಮಾನ್ಯವಾಗಿ ದೊಡ್ಡ ಸಂಖ್ಯೆಯಲ್ಲಿಯೇ ಮುಗಿ ಬಿದ್ದಿದ್ದಾರೆ.

ಇನ್ನು ಇದೇ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಫೋಟೊಗಳೂ ಸಹ ಹರಿದಾಡುತ್ತಿದ್ದು, ಎಂ ಎಸ್ ಧೋನಿ ಕೊನೆಯ ಐಪಿಎಲ್ ಪಂದ್ಯ ನೋಡಲು ಜನ ಕಿಕ್ಕಿರಿದು ಜಮಾಯಿಸಿದ್ದಾರೆ ಎಂದು ಬರೆದುಕೊಳ್ಳಲಾಗುತ್ತಿದೆ. ಆದರೆ ಸತ್ಯಾಂಶ ಬೇರೆಯದ್ದೇ ಇದೆ. ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಹಾಗೂ ಎಂ ಎಸ್ ಧೋನಿ ಫ್ಯಾನ್ಸ್ ಎಂದು ಹಂಚಿಕೊಳ್ಳಲಾಗುತ್ತಿರುವ ಈ ಫೋಟೊ ಹಾಗೂ ವಿಡಿಯೊಗಳು ನಕಲಿಯಾಗಿವೆ.

ನಿನ್ನೆ ವೈರಲ್ ಆಗಿದ್ದ ಚಿತ್ರ ಇಎಫ್ಇ ಡಿಪೋರ್ಟ್ಸ್ ಎಂಬ ಫುಟ್‌ಬಾಲ್ ಫ್ರಾಂಚೈಸ್ ಮಾಡಿದ ಟ್ವೀಟ್ ಆಗಿದೆ. ಈ ಫೋಟೊವನ್ನು ಹಂಚಿಕೊಳ್ಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಇದು ಎಂಎಸ್ ಧೋನಿ ಕ್ರೇಜ್ ಎಂದಿದ್ದಾರೆ.

ಇನ್ನು ಇಂತಹದ್ದೇ ಮತ್ತೊಂದು ಫೋಟೊ ವೈರಲ್ ಆಗಿದ್ದು, ಸ್ಟೇಡಿಯಂ ಒಳಗೆ ಹಳದಿ ಟಿ ಶರ್ಟ್ ತೊಟ್ಟ ಪ್ರೇಕ್ಷಕರು ಅತಿದೊಡ್ಡ ಸಂಖ್ಯೆಯಲ್ಲಿ ಕಿರುಚಾಡುತ್ತಿರುವ ಫೋಟೊ ಹಾಗೂ ವಿಡಿಯೊ ಇದಾಗಿದೆ. ಇನ್ನು ಇದೂ ಸಹ ನಕಲಿಯಾಗಿದ್ದು, ಬೊರುಸ್ಸಿಯಾದ ಡಾರ್ಟ್‌ಮಂಡ್ ಎಂಬ ಫುಟ್‌ಬಾಲ್ ತಂಡದ ಪಂದ್ಯವೊಂದನ್ನು ವೀಕ್ಷಿಸಲು ಪ್ರೇಕ್ಷಕರು ಸೇರಿದ್ದ ದೊಡ್ಡ ಸಂಖ್ಯೆಯ ಫೋಟೊ ಇದಾಗಿದೆ.

ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಈ ಫೋಟೊಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದರೆ, ಅನೇಕರಿಗೆ ಈ ಫೋಟೊ ಫೇಕ್ ಎಂಬುದೇ ಗೊತ್ತಿಲ್ಲ. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಆತುರದಲ್ಲಿ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವುದು ಸದ್ಯ ಟ್ರೋಲ್‌ಗೆ ಒಳಗಾಗಿದೆ.

Story first published: Monday, May 29, 2023, 15:55 [IST]
Other articles published on May 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+