GT vs CSK Final: 10 ಓವರ್ ಪಂದ್ಯ ನಡೆದರೆ ಚೆನ್ನೈಗೆ 123 ರನ್ ಟಾರ್ಗೆಟ್; 5 ಓವರ್ ಆದರೆ ಎಷ್ಟು?

ಇಂದು ( ಮೇ 29 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಜರುಗುತ್ತಿದ್ದು, ಇಂದೂ ಸಹ ಪಂದ್ಯಕ್ಕೆ ಮಳೆ ಅಡ್ಡಿಯನ್ನು ಉಂಟು ಮಾಡಿದೆ.
ಹೌದು, ನಿನ್ನೆಯೇ ಮುಕ್ತಾಯಗೊಳ್ಳಬೇಕಿದ್ದ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿದ ಕಾರಣ ಇಂದಿಗೆ ಮುಂದೂಡಲ್ಪಟ್ಟಿತ್ತು. ಹೀಗೆ ರಿಸರ್ವ್ ಡೇ ಎಂದು ಮುಂದೂಡಿದ್ದ ಪಂದ್ಯಕ್ಕೆ ಈ ದಿನವೂ ಸಹ ಮಳೆ ಕಂಟಕ ಉಂಟಾಗಿದೆ. ಗುಜರಾತ್ ಟೈಟನ್ಸ್ ತಂಡದ ಇನ್ನಿಂಗ್ಸ್ ಸಂಪೂರ್ಣವಾಗಿ ಮುಗಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಬೆನ್ನಲ್ಲೇ ಮಳೆ ಸುರಿಯಲು ಆರಂಭಿಸಿದೆ.
ಇನ್ನು ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ವೃದ್ಧಿಮಾನ್ ಸಹಾ ಅರ್ಧಶತಕ ಹಾಗೂ ಸಾಯಿ ಸುದರ್ಶನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಗುಜರಾತ್ ಟೈಟನ್ಸ್ ತನ್ನ ಇನ್ನಿಂಗ್ಸ್ ಮುಗಿಸಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಕಠಿಣ ಸವಾಲನ್ನು ನೀಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಬೆನ್ನಲ್ಲೇ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ 3 ಎಸೆತಗಳಲ್ಲಿ 4 ರನ್ ಕಲೆಹಾಕಿದ್ದು, ಪಂದ್ಯ ಮಳೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಪಿಚ್ ತೇವಾಂಶ ಹೆಚ್ಚಾಗಿದ್ದು, ಸರಿಪಡಿಸಲು ಗ್ರೌಂಡ್‌ಮೆನ್ ಹರಸಾಸಹ ಪಡುತ್ತಿದ್ದಾರೆ.
ಹೀಗೆ ಮಳೆಯ ನಿಲ್ಲದೇ ಇರುವುದು ಇದೀಗ ಆತಂಕವನ್ನು ಸೃಷ್ಟಿಸಿದ್ದು, ಡೆಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಎಷ್ಟು ಓವರ್‌ಗಳು ಕಡಿತಗೊಂಡರೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಎಷ್ಟು ರನ್‌ಗಳ ಟಾರ್ಗೆಟ್ ಇರಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
20 ಓವರ್‌ಗಳ ಪಂದ್ಯ ನಡೆದರೆ 215 ರನ್ ಗುರಿ
19 ಓವರ್‌ಗಳ ಪಂದ್ಯ ನಡೆದರೆ 207 ಗುರಿ
18 ಓವರ್‌ಗಳ ಪಂದ್ಯ ನಡೆದರೆ 198 ಗುರಿ
17 ಓವರ್‌ಗಳ ಪಂದ್ಯ ನಡೆದರೆ 190 ಗುರಿ
16 ಓವರ್‌ಗಳ ಪಂದ್ಯ ನಡೆದರೆ 181 ಗುರಿ
15 ಓವರ್‌ಗಳ ಪಂದ್ಯ ನಡೆದರೆ 171 ಗುರಿ
14 ಓವರ್‌ಗಳ ಪಂದ್ಯ ನಡೆದರೆ 162 ಗುರಿ
13 ಓವರ್‌ಗಳ ಪಂದ್ಯ ನಡೆದರೆ 153 ಗುರಿ
12 ಓವರ್‌ಗಳ ಪಂದ್ಯ ನಡೆದರೆ 143 ಗುರಿ
11 ಓವರ್‌ಗಳ ಪಂದ್ಯ ನಡೆದರೆ 133 ಗುರಿ
10 ಓವರ್‌ಗಳ ಪಂದ್ಯ ನಡೆದರೆ 123 ಗುರಿ
9 ಓವರ್‌ಗಳ ಪಂದ್ಯ ನಡೆದರೆ 112 ಗುರಿ
8 ಓವರ್‌ಗಳ ಪಂದ್ಯ ನಡೆದರೆ 101 ಗುರಿ
7 ಓವರ್‌ಗಳ ಪಂದ್ಯ ನಡೆದರೆ 90 ಗುರಿ
6 ಓವರ್‌ಗಳ ಪಂದ್ಯ ನಡೆದರೆ 78 ಗುರಿ
5 ಓವರ್‌ಗಳ ಪಂದ್ಯ ನಡೆದರೆ 66 ಗುರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications