Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs GT Final: ಈ ಸಮಯಕ್ಕೆ ಮಳೆ ನಿಂತರೆ ನಡೆಯಲಿದೆ 15 ಓವರ್ ಪಂದ್ಯ

IPL 2023: CSK vs GT final match to be played for 15 overs if rain stops before 10.30 PM

ಕಳೆದ ಮಾರ್ಚ್ ತಿಂಗಳ ಕೊನೆಯ ದಿನದಂದು ಆರಂಭಗೊಂಡಿದ್ದ ಹದಿನಾರನೇ ಆವೃತ್ತಿಯ ಫೈನಲ್ ಪಂದ್ಯ ಇಂದು ( ಮೇ 28 ) ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯಕ್ಕೆ ಮಳೆ ಕಂಟಕವಾಗಿ ಪರಿಣಮಿಸಿದೆ.

ಹವಾಮಾನ ವರದಿಗಳು ಮೊದಲೇ ಮಳೆಯಾಗುವುದೆಂದು ತಿಳಿಸಿದ್ದವು. ಒಂದಷ್ಟು ಮಳೆ ಬರಬಹುದು ಎಂದು ವರದಿಗಳು ತಿಳಿಸಿದರೆ, ಅದಕ್ಕಿಂತ ಹೆಚ್ಚೇ ಮಳೆಯಾಗಿದೆ. ಪಂದ್ಯದ ಟಾಸ್ ಸಹ ತೀವ್ರ ಮಳೆಯಿಂದಾಗಿ ವಿಳಂಬವಾಗಿದ್ದು ರಾತ್ರಿ ಗಂಟೆಯಾದರೂ ಟಾಸ್ ಆಗಿಲ್ಲ.

ಅನೇಕ ಬಾರಿ ಮಳೆ ನಿಂತು ಪುನಃ ತೀವ್ರವಾಗಿ ಸುರಿದಿದ್ದು, 9.45ರೊಳಗೆ ಪಂದ್ಯ ಆರಂಭವಾಗಿದ್ದರೆ ಸಂಪೂರ್ಣ ಇಪ್ಪತ್ತು ಓವರ್‌ಗಳ ಪಂದ್ಯ ನಡೆಯುತ್ತಿತ್ತು. 10 ಗಂಟೆಯೊಳಗೆ ಮಳೆ ನಿಂತಿದ್ದರೆ 17 ಓವರ್‌ಗಳ ಪಂದ್ಯ ನಡೆಯುತ್ತಿತ್ತು. ಇದೀಗ ಹತ್ತು ಗಂಟೆ ಕಳೆದಿದ್ದು, 10.30 ಗಂಟೆಯೊಳಗೆ ಮಳೆ ನಿಂತರೆ 15 ಓವರ್‌ಗಳ ಪಂದ್ಯ ನಡೆಯಲಿದೆ ಎಂದು ಮಾಹಿತಿ ಹೊರಬಿದ್ದಿದೆ.

ಅಲ್ಲದೇ ಮಳೆ 12.06ರೊಳಗೆ ನಿಂತರೆ 5 ಓವರ್ ಪಂದ್ಯ ನಡೆಸಲು ಅವಕಾಶವಿದ್ದು, 12.06ರ ಬಳಿಕವೂ ಮಳೆ ಮುಂದುವರಿದರೆ ಈ ಅವಕಾಶವೂ ಇಲ್ಲದಂತಾಗುತ್ತದೆ. ಕೊನೆಗೆ ಸೂಪರ್ ಓವರ್ ನಡೆಸಲೂ ಸಹ ಅವಕಾಶವಿಲ್ಲದೇ ಇರುವ ಹಾಗೆ ಮಳೆ ಮುಂದುವರಿದರೆ ಪಂದ್ಯ ಇಂದು ರದ್ದಾಗಲಿದ್ದು, ನಾಳೆ ರಿಸರ್ವ್ ಡೇ ಇರುವುದರಿಂದ ನಾಳೆ ಪಂದ್ಯ ಜರುಗಲಿದೆ.

ಇನ್ನು ಕೆಲವೆಡೆ ಇಂದು ಪಂದ್ಯ ರದ್ದಾದರೆ ಲೀಗ್ ಅಂತ್ಯದ ವೇಳೆ ಅಂಕಪಟ್ಟಿಯಲ್ಲಿ ಟೇಬಲ್ ಟಾಪರ್ಸ್ ಆಗಿದ್ದ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ಸುದ್ದಿ ಹರಿದಾಡುತ್ತಿದ್ದು, ರಿಸರ್ವ್ ಡೇ ಇಲ್ಲ ಎಂದು ಹೇಳಲಾಗ್ತಿದೆ. ಆದರೆ ಇದು ಸುಳ್ಳು ಸುದ್ದಿಯಾಗಿದ್ದು, ಪಂದ್ಯ ನಡೆಯದೇ ಇದ್ದರೆ ನಾಳೆ ಪಂದ್ಯ ನಡೆಯಲಿದೆ.

ತಂಡಗಳು:
ಗುಜರಾತ್ ಟೈಟಾನ್ಸ್ ತಂಡ: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಶ್ರೀಕರ್ ಭರತ್, ಶಿವಂ ಮಾವಿ, ಒಡಿಯನ್ ಸ್ಮಿತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಜಯಂತ್ ಯಾದವ್, ದಾಸುನ್ ಶನಕ, ಅಭಿನವ್ ಮನೋಹರ್, ಅಲ್ಜಾರಿ ಜೋಸೆಫ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ಯಶ್ ದಯಾಳ್

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್, ಡೆವೊನ್ ಕಾನ್ವೇ, ಶಿವಂ ದುಬೆ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಎಂಎಸ್ ಧೋನಿ(ವಿಕೆಟ್ ಕೀಪರ್ ಹಾಗೂ ನಾಯಕ), ರವೀಂದ್ರ ಜಡೇಜಾ, ಮೊಯೀನ್ ಅಲಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮಥೀಶ ಪತಿರಣ, ಮಿಚೆಲ್ ಶಾಂತಾಂತರ್ ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್, ಬೆನ್ ಸ್ಟೋಕ್ಸ್, ಡ್ವೈನ್ ಪ್ರಿಟೋರಿಯಸ್, ಸಿಸಂದಾ ಮಗಲಾ, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ, ನಿಶಾಂತ್ ಸಿಂಧು

Story first published: Sunday, May 28, 2023, 22:18 [IST]
Other articles published on May 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+