ಅಹ್ಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ ತಂಡಕ್ಕೆ ಬೃಹತ್ ಗುರಿ ನಿಗದಿಪಡಿಸಿದೆ. ಅಗ್ತ ಕ್ರಮಾಂಕದ ದಾಂಡಿಗರ ಅಮೋಘ ಬ್ಯಾಟಿಂಗ್‌ನಿಂದಾಗಿ ಗುಜರಾತ್ ಟೈಟನ್ಸ್ ತಂಡ 4 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು. ಶುಬ್ಮನ್ ಗಿಲ್, ವೃದ್ಧಿಮಾನ್ ಸಾಹಾ, ಸಾಯಿ ಸುದರ್ಶನ್ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಸಿಎಸ್‌ಕೆ 5ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಕಠಿಣ ಗುರಿ ನಿಗದಿಪಡಿಸಲಾಗಿದೆ.
ಸಾಯಿ ಸುದರ್ಶನ್ ಅಮೋಘ ಬ್ಯಾಟಿಂಗ್: ಈ ಮಹತ್ವದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ನೆರವಾಗಿದ್ದು ಸಾಯಿ ಸುದರ್ಶನ್ ಅವರ ಭರ್ಜರಿ ಬ್ಯಾಟಿಂಗ್. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊನೆಯ ಹಂತದವರೆಗೂ ಬ್ಯಾಟಿಂಗ್ ನಡೆಸಿದ ಸಾಯಿ ಸುದರ್ಶನ್ ಈ ಫೈನಲ್ ಪಂದ್ಯದಲ್ಲಿ ಶತಕಗಳಿಸುವ ಅದ್ಭುತ ಅವಕಾಶ ಹೊಂದಿದ್ದರು. ಆದರೆ ಕೊನೆಯ ಓವರ್‌ನಲ್ಲಿ ಎಡವಿದ ಯುವ ಆಟಗಾರ 96 ರನ್ ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಸುಂದರ ಇನ್ನಿಂಗ್ಸ್‌ನ್ನು ಅಂತ್ಯಗೊಳಿಸಿದರು.

ದಾಖಲೆ ಬರೆದ ಸಾಯಿ ಸುದರ್ಶನ್: ಇನ್ನು ಈ ಫೈನಲ್ ಪಂದ್ಯದಲ್ಲಿ ಸಾಯಿ ಸುದರ್ಶನ್ ಶತಕ ಗಳಿಸುವ ಅವಕಾಶ ಕಳೆದುಕೊಂಡರಾದರೂ ಐಪಿಎಲ್ ಫೈನಲ್‌ನಲ್ಲಿ ವಿಶೇಷ ದಾಖಳೆಯೊಂದನ್ನು ಬರೆದಿದ್ದಾರೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಅನ್‌ಕ್ಯಾಪ್‌ಡ್ ಆಟಗಾರ ಎಂಬ ದಾಖಲೆ ಈಗ ಸಾಯಿ ಸುದರ್ಶನ್ ಪಾಲಾಗಿದೆ. ಇದಕ್ಕೂ ಮುನ್ನ ಮನೀಶ್ ಪಾಂಡೆ 2014ರ ಫೈನಲ್‌ನಲ್ಲಿ ಸಿಡಿಸಿದ 94 ರನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು.
ಐಪಿಎಲ್ ಫೈನಲ್‌ನಲ್ಲಿ ಅನ್‌ಕ್ಯಾಪ್‌ಡ್ ಆಟಗಾರರ ಹೈಯೆಸ್ಟ ಸ್ಕೋರ್
ಸಾಯಿ ಸುದರ್ಶನ್-96 ರನ್- 2023
ಮನೀಶ್ ಪಾಂಡೆ- 94 ರನ್- 2014
ಮನ್ವಿಂದರ್ ಬಿಸ್ಲಾ- 89 ರನ್- 2012
ಮನನ್ ವೋಹ್ರಾ- 67 - 2014
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ಸಿ & ವಿಕೆ), ದೀಪಕ್ ಚಾಹರ್, ಮತೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಬೆಂಚ್: ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್, ಭಗತ್ ವರ್ಮಾ, ನಿಶಾಂತ್ ಸಿಂಧು, ಆರ್ ಎಸ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಅಜಯ್ ಜಾದವ್ ಮಂಡಲ್, ಸಿಸಂದಾ ಮಗಳ, ಡ್ವೈನ್ ಪ್ರಿಟೋರಿಯಸ್, ಬೆನ್ ಸ್ಟೋಕ್ಸ್
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಬೆಂಚ್: ಜೋಶುವಾ ಲಿಟಲ್, ಶ್ರೀಕರ್ ಭರತ್, ಶಿವಂ ಮಾವಿ, ಒಡೆಯನ್ ಸ್ಮಿತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ದಾಸುನ್ ಶನಕ, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಅಭಿನವ್ ಮನೋಹರ್, ಅಲ್ಜಾರಿ ಜೋಸೆಫ್, ಉರ್ವಿಲ್ ಪಟೇಲ್, ಯಶ್ ದಯಾಳ್