For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನ ಅದೃಷ್ಟವಂತರು ಇವರೇ: ಸತತ ಕಳಪೆ ಆಟವಾಡಿದರೂ 4 ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಭರ್ಜರಿ ಬೇಡಿಕೆ!!

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತ್ಯಂತ ಪ್ರತಿಷ್ಠಿತ ಟೂರ್ನಿ ಎಂಬುದರಲ್ಲಿ ಅನುಮಾನವಿಲ್ಲ. ಈ ಟೂರ್ನಿಯಲ್ಲಿ ಭಾಗಿಯಾಗುವುದು ವಿಶ್ವ ಕ್ರಿಕೆಟ್‌ನ ಬಹುತೇಕ ಆಟಗಾರರ ಕನಸಾಗಿರುತ್ತದೆ. ಹಿಗಾಗಿ ಈ ಟೂರ್ನಿಗಾಗಿ ಸಾಕಷ್ಟು ಪೈಪೊಟಿಗಳು ನಡೆಯುತ್ತವೆ. ಕೆಲವೇ ಆಟಗಾರರಿಗೆ ಈ ಟೂರ್ನಿಯಲ್ಲಿ ಅವಕಾಶ ದೊರೆತರೆ ಹೆಚ್ಚಿನ ಆಟಗಾರರು ನಿರಾಸೆ ಅನುಭವಿಸುತ್ತಾರೆ. ಅಂಥಾ ಆಟಗಾರರು ಟೂರ್ನಿಯಲ್ಲಿ ಮತ್ತೆ ಅವಕಾಶ ಗಿಟ್ಟಿಸಿಕೊಳ್ಳಲು ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಾರೆ.

ಆದರೆ ಕೆಲ ಆಟಗಾರರು ಇದಕ್ಕೆ ಅಪವಾದದಂತೆ ಗೋಚರಿಸುತ್ತಾರೆ. ಅದ್ಭುತ ಪ್ರತಿಭೆಯನ್ನು ಹೊಂದಿದ್ದರೂ ಐಪಿಎಲ್ ಟೂರ್ನಿಯಲ್ಲಿ ಅವಕಾಶ ದೊರೆತ ಬಳಿಕ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ. ಆದರೆ ಸತತ ವೈಫಲ್ಯ ಅನುಭವಿಸಿದ ಬಳಿಕವೂ ಈ ಆಟಗಾರರು ದೊಡ್ಡ ಮೊತ್ತದ ಐಪಿಎಲ್ ಗುತ್ತಿಗೆ ಪಡೆಯಲು ಯಶಸ್ವಿಯಾಗುತ್ತಿದ್ದಾರೆ ಎಂಬುದು ಅಚ್ಚರಿ ಮೂಡಿಸುತ್ತದೆ. ಟೂರ್ನಿಯಲ್ಲಿ ಸತತವಾಗಿ ವೈಫಲ್ಯ ಕಂಡರೂ ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಪಡೆಯುತ್ತಿರುವ ನಾಲ್ವರು ಆಟಗಾರರ ಬಗೆಗಿನ ಮಾಹಿತಿ ಇಲ್ಲಿದೆ. ಮುಂದೆ ಓದಿ..

ipl 2023: Despite horrible performances these 4 cricketers earned plenty of IPL contracts

ಹಲವು ತಂಡಗಳಿಗೆ ನಿರಾಸೆ ಮೂಡಿಸಿದ್ದಾರೆ ಕ್ರಿಸ್ ಜೋರ್ಡನ್

ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡನ್ ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಹಾಘೂ ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ ಅಪರೂಪದ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಬಹುತೇಕ ಐಪಿಎಲ್ ತಂಡಗಳಲ್ಲಿ ಜೋರ್ಡನ್ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದಾಗಲೂ ಜೋರ್ಡನ್ ಕಳಪೆ ಪ್ರದರ್ಶನ ನೀಡಿದ್ದರು. ಹಾಗಿದ್ದರೂ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಜೋರ್ಡನ್ ಜೋಫ್ರಾ ಆರ್ಚರ್ ಗಾಯದಿಂದ ಹೊರಗುಳಿದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುವ ಅವಕಾಶ ಗಳಿಸಿಕೊಂಡಿದ್ದಾರೆ.

ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ರಿಯಾನ್ ಪರಾಗ್

ಐಪಿಎಲ್‌ನಲ್ಲಿ ಈವರೆಗೂ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲವಾಗಿದ್ದರೂ ರಾಜಸ್ಥಾನ್ ರಾಯಲ್ಸ್ ತಂಡ ರಿಯಾನ್ ಪರಾಗ್ ಮೇಲೆ ಇನ್ನಿಲ್ಲದ ಭರವಸೆಯನ್ನು ವ್ಯಕ್ತಪಡಿಸುತ್ತಿರುವುದು ಕ್ರಿಕೆಟ್ ಪಂಡುತರಿಗೂ ಅಚ್ಚರಿ ಮೂಡಿಸುತ್ತಿದೆ. ಸತತವಾಗಿ ರಿಯಾನ್ ಪರಾಗ್ ಕಳಪೆ ಪ್ರದರ್ಶನ ನೀಡಿದರೂ ಆಡುವ ಬಳಗದಲ್ಲಿಯೂ ಪರಾಗ್ ಮತ್ತೆ ಮತ್ತೆ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಕನ್ನಡಿಗ ಮನೀಶ್ ಪಾಂಡೆ

ಇನ್ನು ಈ ಪಟ್ಟಿಯಲ್ಲಿ ಕನ್ನಡಿಗ ಮನೀಶ್ ಪಾಂಡೆ ಕೂಡ ಇದ್ದಾರೆ. ಮನೀಶ್ ಪಾಂಡೆ ಎಂಥಾ ಅದ್ಭುತ ಆಟಗಾರ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದೇ ಇದೆ. ಆದರೆ ಕಳೆದ ಎರಡ್ಮೂರು ಆವೃತ್ತಿಗಳಲ್ಲಿ ಮನೀಶ್ ಆಟ ಕಳಗುಂದಿದೆ. ಆದರೆ ಮನೀಶ್ ಪಾಂಡೆ ಮೇಲೆ ತಂಡಗಳು ಭರವಸೆಯನ್ನು ಇನ್ನೂ ಉಳಿಸಿಕೊಂಡಿದೆ. ಆದರೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರಬಾಡುತ್ತಿರುವ ಮನೀಶ್ ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡಲು ವಿಫಲವಾದರು.

ಮಂದೀಪ್ ಸಿಂಗ್

2012ರ ಐಪಿಎಲ್ ಆವೃತ್ತಿಯ್ಲಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆದ್ದಿದ್ದ ಆಟಗಾರ ಮಂದೀಪ್ ಸಿಂಗ್. ಆ ಆವೃತ್ತಿಯಲ್ಲಿ ಮಂದೀಪ್ ಸಿಂಗ್ ಅವರಿಗೆ 'ಎಮರ್ಜಿಂಗ್ ಪ್ಲೇಯರ್' ಪ್ರಶಸ್ತಿ ಕೂಡ ಬಂದಿತ್ತು. 2020ರ ಆವೃತ್ತಿಯವರೆಗೂ ಅವರ ಪ್ರದರ್ಶನ ಉತ್ತಮವಾಗಿಯೇ ಇತ್ತು. ಆದರೆ ಅದಾದ ಬಳಿಕ ಮಂದೀಪ್ ಕಳಪೆ ಪ್ರದರ್ಶನ ನೀಡುತ್ತಾ ಸಾಗಿದ್ದಾರೆ. ಹಾಗಿದ್ದರೂ ಮಂದೀಪ್ ಸಿಂಗ್ ಕಾಂಟ್ರಾಕ್ಟ್ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Thursday, May 18, 2023, 12:11 [IST]
Other articles published on May 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+