Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಐಪಿಎಲ್‌ನ ಈ ಕೆಟ್ಟ ದಾಖಲೆಯಲ್ಲಿ ರೋಹಿತ್ ಶರ್ಮಾ ಮೀರಿಸಿ ನಂ.1 ಆದ ದಿನೇಶ್ ಕಾರ್ತಿಕ್!

IPL 2023: Dinesh Karthik becomes the batsman with most number of ducks in IPL history

ನಿನ್ನೆ ( ಮೇ 21 ) ನಡೆದ ಪಂದ್ಯಗಳ ಮೂಲಕ ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭಗೊಂಡಿದ್ದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ.

ಪ್ಲೇಆಫ್ ಸುತ್ತಿಗೆ ಯಾವ ತಂಡ ಕೊನೆಯದಾಗಿ ಅರ್ಹತೆ ಗಿಟ್ಟಿಸಿಕೊಳ್ಳಲಿದೆ ಎಂಬುದನ್ನು ಈ ಪಂದ್ಯದ ಫಲಿತಾಂಶಗಳು ನಿರ್ಧರಿಸಿದವು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದರೆ, ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಿತ್ತು. ಈ ಮೂಲಕ ಮುಂಬೈ ಇಂಡಿಯನ್ಸ್ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಿಂದ ಹೊರಬಿದ್ದಿತು.

ಇನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಕ್ಕಾಪಟ್ಟೆ ಕಳಪೆ ತಂಡ ಎಂದ ಟ್ರೋಲ್‌ಗೆ ಈಡಾಗಿತ್ತು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಈ ಮೂವರು ಬ್ಯಾಟ್ಸ್‌ಮನ್‌ಗಳು ಹಾಗೂ ಓರ್ವ ಬೌಲರ್ ( ಮೊಹಮ್ಮದ್ ಸಿರಾಜ್ ) ಸೇರಿದಂತೆ ನಾಲ್ವರು ಆಟಗಾರರು ಮಾತ್ರ ಒಳ್ಳೆಯ ಪ್ರದರ್ಶನ ನೀಡಿದ್ದು, ಕೇವಲ 4 ಆಟಗಾರರನ್ನು ಹೊಂದಿರುವ ತಂಡ ಎಂದು ಆರ್‌ಸಿಬಿಯನ್ನು ಟ್ರೋಲ್ ಮಾಡಲಾಗಿತ್ತು.

ಈ ಆಟಗಾರರನ್ನು ಹೊರತುಪಡಿಸಿ ತಂಡದ ಉಳಿದ ಆಟಗಾರರು ಟೂರ್ನಿಯುದ್ದಕ್ಕೂ ಸಹ ಕಳಪೆ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾಗದೇ ನಿರೀಕ್ಷೆಯನ್ನು ಹುಸಿಗೊಳಿಸಿದರು. ಅದರಲ್ಲಿಯೂ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿನಿಷರ್ ಎಂದೇ ಗುರುತಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಈ ಬಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯನ್ನು ಉಂಟು ಮಾಡಿದೆ.

ಈ ಬಾರಿಯ ಟೂರ್ನಿಯಲ್ಲಿ 13 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ ಕೇವಲ 140 ರನ್ ಗಳಿಸಿದ್ದಾರೆ. ಹೀಗೆ ದಿನೇಶ್ ಕಾರ್ತಿಕ್ ಈ ಬಾರಿಯ ಟೂರ್ನಿಯಲ್ಲಿ ಯಾವುದೇ ಪಂದ್ಯವನ್ನು ಸಹ ಗೆಲ್ಲಿಸಿಕೊಡುವಂತಹ ಇನ್ನಿಂಗ್ಸ್ ಕಟ್ಟದೇ ಅತಿಹೆಚ್ಚು ಡಕ್ಔಟ್ ಆದ ಆಟಗಾರ ಎಂಬ ದಾಖಲೆಯನ್ನೂ ಸಹ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

ಹೌದು, ನಿನ್ನೆ ( ಮೇ 21 ) ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಯಶ್ ದಯಾಳ್ ಎಸೆತದಲ್ಲಿ ವೃದ್ಧಿಮಾನ್ ಸಹಾಗೆ ಕ್ಯಾಚ್ ನೀಡುವ ಮೂಲಕ ಗೋಲ್ಡನ್ ಡಕ್ಔಟ್ ಆದರು.

ಹೀಗೆ ಡಕ್ಔಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಡಕ್ಔಟ್ ಆದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿ ಕೆಟ್ಟ ದಾಖಲೆ ಬರೆದಿದ್ದಾರೆ. ಹಾಗಿದ್ದರೆ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಡಕ್ಔಟ್ ಆದ ಆಟಗಾರರ ಟಾಪ್ 5 ಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ದಿನೇಶ್ ಕಾರ್ತಿಕ್ - 17 ಬಾರಿ
2. ರೋಹಿತ್ ಶರ್ಮಾ - 16 ಬಾರಿ
3. ಸುನಿಲ್ ನರೇನ್ - 15 ಬಾರಿ
4. ಮನ್‌ದೀಪ್ ಸಿಂಗ್ - 15 ಬಾರಿ
5. ಗ್ಲೆನ್ ಮ್ಯಾಕ್ಸ್‌ವೆಲ್ -14 ಬಾರಿ

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಾಯಕನಾಗಿ ಅತಿಹೆಚ್ಚು ಬಾರಿ ಡಕ್ ಔಟ್ ಆದ ಆಟಗಾರರ ಪಟ್ಟಿ
1. ರೋಹಿತ್ ಶರ್ಮಾ - 11 ಬಾರಿ
2. ಗೌತಮ್ ಗಂಭೀರ್ - 10 ಬಾರಿ
3. ಆಡಮ್ ಗಿಲ್‌ಕ್ರಿಸ್ಟ್ - 7 ಬಾರಿ
4. ಶೇನ್ ವಾರ್ನ್ - 7 ಬಾರಿ

Story first published: Monday, May 22, 2023, 19:11 [IST]
Other articles published on May 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+