For Quick Alerts
ALLOW NOTIFICATIONS  
For Daily Alerts
 

IPL 2023: ಬೆನ್‌ ಸ್ಟೋಕ್ಸ್, ಸ್ಯಾಮ್ ಕರನ್ ಮೂಲ ಬೆಲೆ 2 ಕೋಟಿ ರುಪಾಯಿ, ಪಟ್ಟಿಯಲ್ಲಿ ಇರುವ ಇತರೆ ಕ್ರಿಕೆಟಿಗರು ಇವರು

IPL 2023: England Cricketers Ben Stoke, Sam Curran Set Rs 2 Crore Price, Know About The List

ಐಪಿಎಲ್ ಮಿನಿ ಹರಾಜಿಗೆ ದಿನ ಗಣನೆ ಆರಂಭವಾಗಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಈ ಬಾರಿಯ ಮಿನಿ ಹರಾಜು ನಡೆಯಲಿದೆ. ಮುಂಬರುವ ಐಪಿಎಲ್ ಹರಾಜಿನಲ್ಲಿ ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್, ಸ್ಯಾಮ್ ಕರ್ರಾನ್ ಮತ್ತು ಕೇನ್ ವಿಲಿಯಮ್ಸನ್ ಸೇರಿದಂತೆ 21 ವಿದೇಶಿ ಆಟಗಾರರು 2 ಕೋಟಿ ರುಪಾಯಿ ಮೂಲಬೆಲೆ ನಿಗದಿ ಮಾಡಿದ್ದಾರೆ.

ಈ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನ ಮಾಜಿ ನಾಯಕರಾದ ನಿಕೋಲಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ಜೊತೆಗೆ ದಕ್ಷಿಣ ಆಫ್ರಿಕಾದ ಜೋಡಿಗಳಾದ ರಿಲೀ ರೋಸೊವ್ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಸೇರಿದ್ದಾರೆ. ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಯಾವುದೇ ಭಾರತೀಯ ಆಟಗಾರರು ಕೂಡ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿಲ್ಲ.

ಕ್ರಿಕ್‌ಇನ್ಫೋ ವರದಿ ಮಾಡಿರುವ ಪ್ರಕಾರ, ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಒಟ್ಟು 21 ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರುಪಾಯಿ ನಿಗದಿಪಡಿಸಿಕೊಂಡಿದ್ದರೆ, ಈ ಪಟ್ಟಿಯಲ್ಲಿ ಯಾವುದೇ ಭಾರತೀಯ ಆಟಗಾರನ ಹೆಸರು ಇಲ್ಲ ಎಂದು ಹೇಳಿದೆ.

IPL 2023: England Cricketers Ben Stoke, Sam Curran Set Rs 2 Crore Price, Know About The List

21 ಆಟಗಾರರಿಗೆ 2 ಕೋಟಿ ರುಪಾಯಿ ಮೂಲ ಬೆಲೆ

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಕೂಡ 2 ಕೋಟಿ ರುಪಾಯಿ ಮೂಲ ಬೆಲೆಯನ್ನು ಪಟ್ಟಿ ಮಾಡಿದ್ದಾರೆ. ಏತನ್ಮಧ್ಯೆ, ಅವರ ಮಾಜಿ ಹೈದರಾಬಾದ್ ತಂಡದ ಸಹ ಆಟಗಾರ ನಿಕೋಲಸ್ ಪೂರನ್ ಕೂಡ 2 ಕೋಟಿ ರುಪಾಯಿ ಮೂಲ ಬೆಲೆ ನಿಗದಿ ಮಾಡಿದ್ದಾರೆ.

ಇತರ ಪ್ರಮುಖ ಹೆಸರುಗಳಲ್ಲಿ ಜೇಸನ್ ಹೋಲ್ಡರ್ (ಎಲ್‌ಎಸ್‌ಜಿ ಬಿಡುಗಡೆ ಮಾಡಿದೆ), ಜಿಮ್ಮಿ ನೀಶಮ್, ರಿಲೀ ರೊಸ್ಸೌ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಸೇರಿದ್ದಾರೆ.

ನಾಥನ್ ಕೌಲ್ಟರ್-ನೈಲ್, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ಟಾಮ್ ಬ್ಯಾಂಟನ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಜೇಮೀ ಓವರ್ಟನ್, ಕ್ರೇಗ್ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಏಂಜೆಲೊ ಮ್ಯಾಥ್ಯೂಸ್, ಜೇಸನ್ ಹೋಲ್ಡರ್ ಕೂಡ ತಮ್ಮ ಮೂಲಬೆಲಯನ್ನು 2 ಕೋಟಿ ರುಪಾಯಿಗೆ ಮೂಲ ಬೆಲೆ ನಿಗದಿ ಮಾಡಿಕೊಂಡಿದ್ದಾರೆ.

Story first published: Thursday, December 1, 2022, 23:26 [IST]
Other articles published on Dec 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+