IPL 2023 Final, CSK vs GT: ರಿಸರ್ವ್ ಡೇ ಕೂಡ ಮಳೆಗೆ ಆಹುತಿಯಾದರೆ ಏನ್ ಕಥೆ? ಈ ತಂಡ ಚಾಂಪಿಯನ್!
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆಯಾಗಿದೆ. ಮೇ 28ಕ್ಕೆ ಭಾನುವಾರ ಆಯೋಜನೆಯಾಗಬೇಕಿದ್ದ ಈ ಪಂದ್ಯಕ್ಕೆ ಮಳೆ ಭಾರೀ ಅಡ್ಡಿಯುಂಟು ಮಾಡಿದ ಕಾರಣ ಒಂದೂ ಎಸೆತ ಕಾಣಲು ಸಾಧ್ಯವಾಗಿಲ್ಲ. ಹೀಗಾಗಿ ಪಂದ್ಯವನ್ನು ಇಂದಿಗೆ ಮುಂದೂಡಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಭಾನುವಾರ ಹವಾಮಾನ ವರದಿಯಲ್ಲಿ ಇದ್ದಂತೆಯೇ ಭಾರೀ ಪ್ರಮಾಣದಲ್ಲಿ ಮಳೆಯಾಯಿತು. ಒಂದು ಹಂತದಲ್ಲಿ ಮಳೆ ನಿಂತು ಪಂದ್ಯ ಇನ್ನೇನು ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ ಮತ್ತೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲು ಆರಂಬಿಸಿದ ಕಾರಣ ಪಂದ್ಯ ನಡೆಯಲು ಅವಕಾಶವೇ ದೊರಯಲಿಲ್ಲ. ಆದರೆ ಇಂದು ವಾತಾವರಣ ಹೇಗಿರಲಿದೆ? ಅದೇ ಪರಿಸ್ಥಿತಿ ಇಂದು ಕೂಡ ಆದರೆ ಎರಡು ತಿಣಗಳ ಕಾಳ ನಡೆದ ಟೂರ್ನಿಯಲ್ಲಿ ಯಾರು ಚಾಂಪಿಯನ್ ಪಟ್ಟಕ್ಕೇರಲಿದ್ದಾರೆ? ಈ ಕುತೂಹಲಕ್ಕೆ ಇಲ್ಲಿದೆ ಉತ್ತರ ಮುಂದೆ ಓದಿ..

ಅಹ್ಮದಾಬಾದ್‌ನ ಇಂದಿನ ಹವಮಾನ ವರದಿ
ಐಪಿಎಲ್ ಫೈನಲ್ ಪಂದ್ಯಕ್ಕೆ ಮೀಸಲು ದಿನವಾದ ಸೋಮವಾರ ಕೂಡ ಅಹ್ಮದಾಬಾದ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. 'ಅಕ್ಯುವೆದರ್' ಮಾಹಿತಿಯ ಪ್ರಕಾರ ಸಂಜೆ 4 ಗಂಟೆಯಿಂದ 6 ಗಂಟೆಯ ಅವಧಿಯಲ್ಲಿ 47-51 ಶೇಕಡಾದಷ್ಟು ಮಳೆಯಾಗುವ ಸಾಧ್ಯತೆಯಿದೆ. ಆದರೆ 7 ಗಂಟೆಯ ಬಳಿಕ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಘಿ ಸ್ವಲ್ಪ ತಡವಾದರೂ ಪಂದ್ಯ 20 ಓವರ್‌ಗಳ ಕಾಲ ನಡೆಯುವ ನಿರೀಕ್ಷೆಯಿದೆ.
ಮೀಸಲು ದಿನವೂ ವಾಶೌಟ್ ಆದರೆ?
ಮೀಸಲು ದಿನಕ್ಕೂ ಕೂಡ ಒಂದೇ ರೀತಿಯ ನಿಮಯವನ್ನು ಅಳವಡಿಸಿಕೊಳ್ಳಲಾಗಿದೆ. ರಾತ್ರಿ 9:45ರ ಅವಧಿಯವರೆಗೆ ಯಾವುದೇ ಓವರ್‌ಗಳ ಕಡಿತವಿಲ್ಲದೆ ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಯಲಿದೆ. ಅದಾದ ಬಳಿಕ ಓವರ್‌ಗಳನ್ನು ಕಡಿತಗೊಳಿಸಿ ಪಂದ್ಯ ನಡೆಸಲಾಗುತ್ತದೆ. ರಾತ್ರಿ 11.56ರ 5 ಓವರ್‌ಗಳ ಪಂದ್ಯಕ್ಕೆ ಕಟ್ಆಫ್ ಅವಧಿಯಾಗಿರಲಿದೆ. ಅದು ಕೂಡ ಸಾಧ್ಯವಾಗದಿದ್ದರೆ 1:20ರ ನಂತರ ಸೂಪರ್ ಓವರ್ ಮೂಲಕ ಫಲಿತಾಂಶ ಪಡೆಯುವ ಅವಕಾಶವಿದೆ.
ಇನ್ನು ಇಂದು ಕೂಡ ಪಂದ್ಯ ವಾಶೌಟ್ ಆದರೆ ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ತಂಡ ಚಾಂಪಿಯನ್ ಎನಿಸಿಕೊಳ್ಳಲಿದೆ. ಆಗ ಗುಜರಾತ್ ಟೈಟನ್ಸ್ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲಿದೆ.
ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ(ನಾಯಕ), ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಸುಭ್ರಾಂಶು ಸೇನಾಪತಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಮಹೇಶ್ ತೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶ ಪತಿರಾನ, ಬೆನ್ ಸ್ಟೋಕ್ಸ್, ಸಿಸಂದಾ ಮಗಲಾ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್, ಭಗತ್ ವರ್ಮಾ, ಆಕಾಶ್ ಸಿಂಗ್
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ(ನಾಯಕ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಜಯಂತ್ ಯಾದವ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್, ಶಿವಂ ಮಾವಿ, ಜೋಶುವಾ ಲಿಟಲ್, ಕೆಎಸ್ ಭರತ್, ಒಡಿಯನ್ ಸ್ಮಿತ್, ಮೋಹಿತ್ ಶರ್ಮಾ, ಉರ್ವಿಲ್ ಪಟೇಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications