IPL 2023 Final: ಐಪಿಎಲ್ ಫೈನಲ್‌ನಲ್ಲಿ SRH ತಂಡದ 7 ವರ್ಷಗಳ ಹಿಂದಿನ ದಾಖಲೆ ಮುರಿದ ಗುಜರಾತ್ ಟೈಟನ್ಸ್
ಸೋಮವಾರ, ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿತು.
ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 214 ರನ್ ಕಲೆ ಹಾಕಿತು. ಇದು ಐಪಿಎಲ್ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ದಾಖಲೆಯನ್ನು ಮುರಿದು ಗರಿಷ್ಠ ಮೊತ್ತವನ್ನು ದಾಖಲಿಸಿದಂತಾಗಿದೆ.

2016ರ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸನ್‌ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್‌ಗೆ 208 ರನ್ ಗಳಿಸಿದ್ದು, ಈವರೆಗಿನ ದಾಖಲೆಯಾಗಿತ್ತು.
ಟಾಸ್ ಗೆದ್ದು ಸಿಎಸ್‌ಕೆ ನಾಯಕ ಎಂಎಸ್ ಧೋನಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಅವರು ಗುಜರಾತ್ ಟೈಟನ್ಸ್ ತಂಡಕ್ಕೆ ಅತ್ಯುತ್ತಮ ಆರಂಭ ಒಒದಗಿಸಿದರು. ಐಪಿಎಲ್ ಫೈನಲ್‌ನ ಪವರ್‌ಪ್ಲೇನಲ್ಲಿ ಇದುವರೆಗಿನ ಅತ್ಯಧಿಕ ರನ್ ದಾಖಲಿಸಿದರು.
ಮೊದಲ ಎರಡು ಓವರ್‌ಗಳಲ್ಲಿ ನಿಧಾನಗತಿಯ ಆರಂಭದ ನಂತರ, ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಇಬ್ಬರೂ ಸಿಎಸ್‌ಕೆ ಬೌಲರ್‌ಗಳನ್ನು ದಂಡಿಸಿದರು. ವೃದ್ಧಿಮಾನ್ ಸಹಾ ಮೂರನೇ ಓವರ್‌ನಲ್ಲಿ ಸಿಎಸ್‌ಕೆ ವೇಗಿ ದೀಪಕ್ ಚಹಾರ್ ಅವರ ಬೌಲಿಂಗ್‌ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳಿಗೆ ಬಾರಿಸಿದರು.

ಪವರ್‌ಪ್ಲೇನ 6 ಓವರ್‌ಗಳಲ್ಲಿ ಗುಜರಾತ್ ಟೈಟನ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 62 ರನ್‌ಗಳನ್ನು ಕಲೆಹಾಕಿತು. ಇದು ಐಪಿಎಲ್ ಫೈನಲ್‌ನ ಪವರ್‌ಪ್ಲೇನಲ್ಲಿ ಮುಂಬೈ ಇಂಡಿಯನ್ಸ್‌ನ ಹಿಂದಿನ 61 ರನ್‌ಗಳ (2020 ಫೈನಲ್) ದಾಖಲೆಯನ್ನು ಹಿಂದಿಕ್ಕಿತು.
ಪವರ್‌ಪ್ಲೇ ಮುಗಿದ ನಂತರ ರವೀಂದ್ರ ಜಡೇಜಾ ಮೊದಲ ಓವರ್ ಬೌಲ್ ಮಾಡಲು ಬಂದರು. ಆ ಓವರ್‌ನ ಅಂತಿಮ ಎಸೆತದಲ್ಲಿ ಶುಭ್ಮನ್ ಗಿಲ್‌ರಿಗೆ ರವೀಂದ್ರ ಜಡೇಜಾ ವೇಗದ ಎಸೆತವನ್ನು ಎಸೆದರು. ಚೆಂಡು ಶುಭ್ಮನ್ ಬ್ಯಾಟ್‌ನ ಹೊರ ಅಂಚಿಗೆ ವಂಚಿಸಿ ಎಂಎಸ್ ಧೋನಿ ಕೈಸೇರಿತು. ಚೆಂಡನ್ನು ಹಿಡಿದು ಕೇವಲ 0.12 ಸೆಕೆಂಡುಗಳಲ್ಲಿ ಧೋನಿ ಬೇಲ್ಸ್ ಹಾರಿಸಿದರು.
ಶುಭ್ಮನ್ ಗಿಲ್ 20 ಎಸೆತಗಳಲ್ಲಿ 7 ಬೌಂಡರಿ ಸಮೇತ 39 ರನ್ ಗಳಿಸಿ ಔಟಾದರೆ, ವೃದ್ಧಿಮಾನ್ ಸಹಾ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.
ನಂತರ ಬಂದ ಸಾಯಿ ಸುದರ್ಶನ್ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳ ಮೂಲಕ 96 ರನ್ ಬಾರಿಸಿ ಮಿಂಚಿದರು. ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 21 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೀಶ್ ಪತಿರಾನ ಅವರು ತಮ್ಮ ಕೋಟಾದ ನಾಲ್ಕು ಓವರ್‌ಗಳಲ್ಲಿ 44 ರನ್ ನೀಡಿ ಎರಡು ವಿಕೆಟ್ ಪಡೆದರು. ಸ್ಪಿನ್ನರ್ ರವೀಂದ್ರ ಜಡೇಜಾ ನಾಲ್ಕು ಓವರ್‌ಗಳಲ್ಲಿ 38 ರನ್ ನೀಡಿ 1 ವಿಕೆಟ್ ಪಡದರೆ, ದೀಪಕ್ ಚಹಾರ್ ನಾಲ್ಕು ಓವರ್‌ಗಳಲ್ಲಿ 38 ರನ್ ನೀಡಿ 1 ವಿಕೆಟ್ ಕಬಳಿಸಿದರು.
ಇದೇ ವೇಳೆ ತುಷಾರ್ ದೇಶಪಾಂಡೆ ತಮ್ಮ ನಾಲ್ಕು ಓವರ್‌ಗಳಲ್ಲಿ 56 ರನ್‌ಗಳನ್ನು ಬಿಟ್ಟುಕೊಟ್ಟು ಅತ್ಯಂತ ದುಬಾರಿ ಬೌಲರ್ ಎನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications