IPL 2023 Final: ಕೊಹ್ಲಿ ಬೃಹತ್ ದಾಖಲೆ ಮೇಲೆ ಗಿಲ್ ಕಣ್ಣು: ಫೈನಲ್‌ನಲ್ಲಿ ಮುರಿಯಬಲ್ಲ ಸಂಭಾವ್ಯ ದಾಖಲೆಗಳು
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ. ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ್ದು ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈ ಫೈನಲ್ ಪಂದ್ಯದಲ್ಲಿ ಎರಡು ತಂಡಗಳ ಕೆಲ ಆಟಗಾರರು ಪ್ರಮುಖ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೆ ಎರಡು ತಂಡಗಳು ಕೂಡ ಐಪಿಎಲ್‌ನ ಶ್ರೇಷ್ಠ ದಾಖಲೆಗಳನ್ನು ತನ್ನ ಹೆಎಸರಿಗೆ ಬರೆಯುವ ಅವಕಾಶ ಹೊಂದಿದೆ. ಅಂಥಾ ಕೆಲ ಸಂಭಾವ್ಯ ಪ್ರಮುಖ ದಾಖಲೆಗಳು ಯಾವುದು? ಆ ಬಗ್ಗೆ ಈ ವರದಿಯಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ..

5ನೇ ಟ್ರೋಫಿ ಗೆಲ್ಲಲು ಸಿಎಸ್‌ಕೆಗೆ ಬೇಕಿದೆ ಒಂದೇ ಗೆಲುವು
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಇದೇ ತಾಣದಲ್ಲಿ ಈ ಬಾರಿಯ ಆವೃತ್ತಿಯ ಆರಂಬಿಕ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಇದೀಗ ಮತ್ತೊಮ್ಮೆ ಇದೇ ಮೈದಾನದಲ್ಲಿ ಟ್ರೋಫಿಗಾಗಿ ಮುಖಾಮುಖಿಯಾಗುತ್ತಿದೆ. ಸಿಎಸ್‌ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ದಾಖಲೆಯ ಐದನೇ ಟ್ರೋಫಿ ಗೆದ್ದಂತಾಗಲಿದೆ. ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಅತಿ ಹೆಚ್ಚಿನ ಟ್ರೋಫಿ ಗೆದ್ದಿರುವ ದಾಖಳೆ ಹೊಂದಿದ್ದು ಆ ದಾಖಲೆಯನ್ನು ಸರಿಗಟ್ಟುವ ಅವಕಾಶ ಸಿಎಸ್‌ಕೆ ಮುಂದಿದೆ.
ವಿಶೇಷ ದಾಖಲೆ ಬರೆಯಲಿದ್ದಾರೆ ಧೋನಿ
ಇನ್ನು ಸಿಎಸ್‌ಕೆ ನಾಯಮ ಎಂಎಸ್ ಧೋನಿ ಈ ಪಂದ್ಯದಲ್ಲಿ ಟಾಸ್‌ಗೆ ಇಳಿಯುತ್ತಿದ್ದಂತೆಯೇ ವಿಶೇಷ ದಾಖಲೆಯನ್ನು ತನ್ನ ಹೆಸರಿಗ ಬರೆಯಲಿದ್ದಾರೆ. ಐಪಿಎಲ್‌ನಲ್ಲಿ 11 ಫೈನಲ್ ಪಂದ್ಯಗಳಲ್ಲಿ ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಯನ್ನು ಈ ಮೂಲಕ ಹೊಂದಲಿದ್ದಾರೆ ಎಂಎಸ್ ಧೋನಿ. ಅಲ್ಲದೆ ಈ ಫೈನಲ್ ಪಂದ್ಯ ಐಪಿಎಲ್‌ನಲ್ಲಿ ಎಂಎಸ್ ಧೋನಿಯ 250ನೇ ಪಂದ್ಯವೂ ಹೌದು. ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ ಮಾಹಿ. ಇನ್ನು ಐಪಿಎಲ್ ಫೈನಲ್ ಪಂದ್ಯಗಳಲ್ಲಿ ಎಂಎಸ್ ಧೋನಿ ಈವರೆಗೆ 180 ರನ್‌ಗಳನ್ನು ಬಾರಿಸಿದ್ದಾರೆ. ಈ ಪಂದ್ಯದಲ್ಲಿ 70 ರನ್ ಬಾರಿಸಿದರೆ ಟೂರ್ನಿಯ ಇತಿಹಾಸದಲ್ಲಿ ಫೈನಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಕೊಹ್ಲಿಯ ದೊಡ್ಡ ಐಪಿಎಲ್ ದಾಖಲೆ ಮೇಲೆ ಗಿಲ್ ಕಣ್ಣು
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಎದುರಾಳಿಗಳಿಗೆ ದುಃಸ್ವಪ್ನವಾಗಿರುವ ಆಟಗಾರ ಶುಬ್ಮನ್ ಗಿಲ್. ರನ್ ಮಳೆ ಹರಿಸುತ್ತಿರುವ ಗಿಲ್ ಈಗಾಘಲೇ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದು ಈ ಆವೃತ್ತಿಯಲ್ಲಿ ಮೂರು ಶತಕಗಳನ್ನು ಕೂಡ ಸಿಡಿಸಿದ್ದಾರೆ. ಆಡಿರುವ 16 ಪಂದ್ಯಗಳಲ್ಲಿ ಸದ್ಯ ಗಿಲ್ 851 ರನ್‌ಗಳನ್ನು ಗಳಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಗಿಲ್‌ಗೆ ಮೂರನೇ ಸ್ಥಾನ.
ಒಂದೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಗಳಿಸಿರುವ 973 ರನ್ ಟೂರ್ನಿಯ ಇತಿಹಾಸದಲ್ಲಿ ದಾಖಲೆಯಾಗಿ ಉಳಿದಿದೆ. ಫೈನಲ್ ಪಂದ್ಯದಲ್ಲಿ 13 ರನ್‌ಗಳಿಸಿದರೆಜೋಸ್ ಬಟ್ಲರ್ ಹಿಂದಿಕ್ಕಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶ ಗಿಲ್ ಮುಂದಿದೆ. ಇನ್ನು ಶುಬ್ಮನ್ ಗಿಲ್ ಮತ್ತೊಂದು ಶತಕ ಸಿಡಿಸಿ 123 ರನ್‌ಗಳನ್ನು ಗಳಿಸಿದರೆ ವಿರಾಟ್ ಕೊಹ್ಲಿಯ 973 ರನ್‌ಗಳ ಬೃಹತ್ ದಾಖಲೆ ಮುರಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications