ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಬಾರಿಸಿದ ನಾಲ್ವರು ಆಟಗಾರರು

ಭಾನುವಾರ, ಏಪ್ರಿಲ್ 9ರಂದು ಅಹಮದಾಬಾದ್‌ನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್)ನ 13ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 29 ರನ್ ಅಗತ್ಯವಿತ್ತು. ಈ ವೇಳೆ ರಿಂಕು ಸಿಂಗ್ ಮತ್ತು ಉಮೇಶ್ ಯಾದವ್ ಕ್ರೀಸ್‌ನಲ್ಲಿದ್ದರು. ಗುಜರಾತ್ ಟೈಟನ್ಸ್ ತಂಡ ಗೆದ್ದೇ ಬಿಟ್ಟಿತು ಎಂದು ಅಂದುಕೊಂಡಿದ್ದರು.

ಇಲ್ಲಿಯವರೆಗೆ ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನ ಎಲ್ಲಾ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದವರು ಕಡಿಮೆ ಆಟಗಾರರಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಇದುವರೆಗೂ ಯಾರೂ ಆರು ಬಾಲ್‌ಗಳಿಗೆ ಆರು ಸಿಕ್ಸರ್ ಬಾರಿಸಿಲ್ಲ.
ಐಪಿಎಲ್‌ನಲ್ಲಿ ಕೆಲವು ಬ್ಯಾಟ್ಸ್‌ಮನ್‌ಗಳು ಒಂದು ಓವರ್‌ನಲ್ಲಿ ನಾಲ್ಕು-ಐದು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಒಂದು ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ ನಾಲ್ವರು ಆಟಗಾರರನ್ನು ಮಾಹಿತಿ ಇಲ್ಲಿದೆ.
ಕ್ರಿಸ್ ಗೇಲ್ (ಆರ್‌ಸಿಬಿ) - 2012 - (ಬೌಲರ್ - ರಾಹುಲ್ ಶರ್ಮಾ)
ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್. 2012ರಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಕ್ರಿಸ್ ಗೇಲ್ ಅದ್ಭುತ ಫಾರ್ಮ್‌ನಲ್ಲಿದ್ದ ಸಮಯವದು. ಆಗ ಅವರಿಗೆ ಬೌಲಿಂಗ್ ಮಾಡುವುದು ಕಷ್ಟಕರವಾಗಿತ್ತು.

ಸ್ಪಿನ್ನರ್ ರಾಹುಲ್ ಶರ್ಮಾ ಉತ್ತಮ ಬೌಲರ್ ಆಗಿದ್ದರೂ ಕ್ರಿಸ್ ಗೇಲ್ ಅವರನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ವೆಸ್ಟ್ ಇಂಡೀಸ್‌ನ ಬ್ಯಾಟರ್ ಮೈದಾನದಾದ್ಯಂತ ಬಾಲ್ ಕಳಿಸಿದರು ಮತ್ತು ಅದನ್ನು ಆರ್‌ಸಿಬಿ ತಂಡಕ್ಕೆ ಸ್ಮರಣೀಯ ದಿನವನ್ನಾಗಿಸಿದರು.
ರಾಹುಲ್ ತೆವಾಟಿಯಾ (ರಾಜಸ್ಥಾನ ರಾಯಲ್ಸ್) - 2020 - (ಬೌಲರ್ - ಶೇಲ್ಡಾನ್ ಕಾಟ್ರೆಲ್)
ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ರಾಹುಲ್ ತೆವಾಟಿಯಾ ಕೂಡ ಒಬ್ಬರು. ಚೇಸಿಂಗ್ ವೇಳೆ ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡುತ್ತಿದ್ದ ಅವರು, ನಂತರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ ರಾಹುಲ್ ತೆವಾಟಿಯಾ ಅವರು ಶೆಲ್ಡನ್ ಕಾಟ್ರೆಲ್ ಬೌಲಿಂಗ್‌ನಲ್ಲಿ ಐದು ಸಿಕ್ಸರ್ ಬಾರಿಸಿ ಅಸಾಧ್ಯವಾದ ಗುರಿಯನ್ನು ಸಾಧಿಸಬಹುದು ಎಂದು ಖಚಿತಪಡಿಸಿಕೊಂಡರು. ಇದು ಐಪಿಎಲ್‌ನ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ.

ರವೀಂದ್ರ ಜಡೇಜಾ (ಸಿಎಸ್‌ಕೆ) - 2021 - (ಬೌಲರ್ - ಹರ್ಷಲ್ ಪಟೇಲ್)
ಬೌಲಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಹರ್ಷಲ್ ಪಟೇಲ್ ಅವರಿಗೆ ರವೀಂದ್ರ ಜಡೇಜಾ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿದರು. ಮೊದಲ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಹರ್ಷಲ್ ಪಟೇಲ್ ಬೌಲಿಂಗ್ ಅತ್ಯುತ್ತಮವಾಗಿ ಇರಲಿಲ್ಲ. ಈ ಓವರ್‌ನಲ್ಲಿ ಎರಡು ಇತರೆ ರನ್‌ಗಳು ಸೇರಿದ್ದವು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಲ್ಲದೇ, ಬಳಿಕ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಆರ್‌ಸಿಬಿ ತಂಡದ ವಿಕೆಟ್‌ಗಳನ್ನು ಪಡೆದಿದ್ದರು.
ರಿಂಕು ಸಿಂಗ್ (ಕೆಕೆಆರ್) - 2023 - (ಬೌಲರ್ - ಯಶ್ ದಯಾಳ್)
ಕೊನೆಯ ಓವರ್ ಎಸೆದ ಯಶ್ ದಯಾಳ್ ತಮ್ಮ ಮೊದಲ ಎಸೆತದಲ್ಲಿ ಉಮೇಶ್ ಯಾದವ್ ಒಂದು ರನ್ ಗಳಿಸಿ ರಿಂಕು ಸಿಂಗ್‌ಗೆ ಸ್ಟ್ರೈಕ್ ನೀಡಿದರು.
ಕೊನೆಯ ಐದು ಎಸೆತಗಳಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಿಂಕು ಸಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಇಡೀ ಕೆಕೆಆರ್ ತಂಡಕ್ಕೆ ನಂಬಲಾಸಾಧ್ಯ ವಿಜಯ ತಂದುಕೊಟ್ಟ ರಿಂಕು ಸಿಂಗ್ 21 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications