IPL 2023 Retention : ಆರ್‌ಸಿಬಿ ಬಿಟ್ಟಿದ್ಯಾರನ್ನು, ಉಳಿದವರು ಯಾರು, ಹರಾಜಿಗೆ ಉಳಿದ ಹಣವೆಷ್ಟು?

ಇಂದಿಗೂ ಚೊಚ್ಚಲ ಕಪ್ ಗೆಲ್ಲಲು ಹರಸಾಹಸ ಪಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2023ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. 2022ರಲ್ಲಿ ಕೂಡ ತಂಡ ಉತ್ತಮವಾಗಿ ಆಡಿತ್ತು. ಆದ್ದರಿಂದ, ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡದೇ ಕೆಲವೇ ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದೆ.
ಆರ್‌ಸಿಬಿ ಇದುವರೆಗೂ ಮೂರು ಬಾರಿ ಐಪಿಎಲ್‌ನಲ್ಲಿ ಫೈನಲ್ ತಲುಪಿದೆ. ನಾಯಕ ಫಾಫ್ ಡುಪ್ಲೆಸಿಸ್ ನೇತೃತ್ವದಲ್ಲಿ ತಂಡ ಬಲಿಷ್ಠವಾಗಿದೆ. ಆರ್‌ಸಿಬಿ ಪರ್ಸ್‌ನಲ್ಲಿ 8.75 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ಯಾರನ್ನು ಖರೀದಿಸಲಿದೆ ಎನ್ನುವುದನ್ನು ನೋಡಬೇಕಿದೆ.
ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಆಧಾರ ಸ್ತಂಭವಾಗಿದ್ದಾರೆ. ಅವರು ಫಾರ್ಮ್‌ಗೆ ಬಂದಿರುವುದರಿಂದ ಆರ್‌ಸಿಬಿ ಆತ್ಮವಿಶ್ವಾಸ ದ್ವಿಗುಣಗೊಂಡಿದೆ. ಆರ್‌ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿತ್ತು, ಆಲ್‌ರೌಂಡರ್ ಒಬ್ಬರ ಅಗತ್ಯವಿದ್ದು, ಉಳಿದಿರುವ ಹಣದಲ್ಲಿ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಕುತೂಹಲಕಾರಿಯಾಗಿದೆ.
ಸಿದ್ಧಾರ್ಥ್ ಕೌಲ್, ಸುಯಶ್ ಪ್ರಭುದೇಸಾಯಿ, ಅನುಜ್ ರಾವತ್‌ರನ್ನು ಆರ್‌ಸಿಬಿ ಉಳಿಸಿಕೊಂಡಿದೆ. ಜೇಸನ್ ಬೆಹ್ರೆನ್‌ಡಾರ್ಫ್‌ರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡಿಂಗ್ ಮಾಡಿದೆ. ಉಳಿದಂತೆ ಅನೀಶ್ವರ್ ಗೌತಮ್, ಚಾಮಾ ಮಿಲಿಂದ್, ಲವನೀತ್ ಸಿಸೋಡಿಯಾ, ಶೆರ್ಫೆನ್ ರುಥರ್ಫೋರ್ಡ್‌ರನ್ನು ಬಿಡುಗಡೆ ಮಾಡಿದೆ.

ಎಲ್ಲಾ ವಿಭಾಗಗಳಲ್ಲು ಸೆಟ್ ಆಗಿರುವ ತಂಡ
ಫಾಫ್ ಡುಪ್ಲೆಸಿಸ್ ಆಗಮನದ ನಂತರ ಆರ್‌ಸಿಬಿ ಆರಂಭ ಉತ್ತಮವಾಗಿದೆ. ವಿರಾಟ್ ಕೊಹ್ಲಿ, ಡುಪ್ಲೆಸಿಸ್ ಆರಂಭಿಕರಾಗಿದ್ದು, ಮೂರನೇ ಕ್ರಮಾಂಕದಲ್ಲಿ ರಜತ್ ಪಾಟೀದಾರ್ ಅದ್ಭುತ ಪ್ರದರ್ಶನ ನೀಡಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್ ಮೊಣಕಾಲು ಗಾಯಕ್ಕೆ ತುತ್ತಾಗಿದ್ದು ಅವರು ಸುಧಾರಿಸಿಕೊಳ್ಳಲು ಇನ್ನೂ ಸಮಯ ಬೇಕಾಗುತ್ತದೆ. ಆದರೆ, ಐಪಿಎಲ್ ಆರಂಭದ ಸಮಯಕ್ಕೆ ಅವರು ಫಿಟ್ ಆಗುವ ವಿಶ್ವಾಸದಿಂದ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಅನುಜ್ ರಾವತ್, ಮಹಿಪಾಲ್ ಲೊಮ್ರೋರ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ತಂಡದ ಆಸ್ತಿಯಾಗಿದ್ದಾರೆ. ವಿಶ್ವಕಪ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡದೇ ಇದ್ದರೂ, ಭಾರತದಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
ವನಿಂದು ಹಸರಂಗ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದರಿಂದ ಆರ್ ಸಿಬಿ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ. ಅವರು ಈಗ ಟಿ20 ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಬೌಲರ್ ಆಗಿದ್ದಾರೆ.
ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಕರ್ಮವುಡ್, ಡೇವಿಡ್ ವಿಲ್ಲಿ ಅವರನ್ನು ಉಳಿಸಿಕೊಳ್ಳಲಾಗಿದೆ.
ಆರ್‌ಸಿಬಿ ಉಳಿಸಿಕೊಂಡ ಆಟಗಾರರ ತಂಡ : ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಜ್ ಅಹಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications