Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

GT vs LSG: ಸಾಹ, ಗಿಲ್ ಸ್ಫೋಟಕ ಆಟ: ಲಕ್ನೋಗೆ ಬೃಹತ್ ಗುರಿ ನೀಡಿದ ಟೈಟನ್ಸ್

ಗುಜರಾತ್ ಟೈಟನ್ಸ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಅಹ್ಮಾಬಾದ್‌ನಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್ ತಂಡ ಸ್ಪೋಟಕ ಪ್ರದರ್ಶನ ನೀಡಿದ್ದು ಲಕ್ನೋ ತಂಡಕ್ಕೆ ಬೃಹತ್ ಗುರಿ ಮುಂದಿಟ್ಟಿದೆ. ಆರಂಭಿಕ ಆಟಗಾರರಾದ ಶುಬ್ಮನ್ ಗಿಲ್ ಹಾಗೂ ವೃದ್ಧಿಮಾನ್ ಸಾಹಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು ಜಿಟಿ ತಂಡ ಈ ಪಂದ್ಯದಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಬರೊಬ್ಬರು 227 ರನ್‌ಗಳನ್ನು ಕಲೆಹಾಕಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೃದ್ದಿಮಾನ್ ಸಾಹಾ ಹಾಗೂ ಶುಬ್ಮನ್ ಗಿಲ್ ಸಿಕ್ಸರ್‌ಗಳ ಸುರಿಮಳೆ ಹರಿಸಿದ್ದಾರೆ. ಮೊದಲ ವಿಕೆಟ್‌ಗೆ ಈ ಜೋಡಿ 12.1 ಓವರ್‌ಗಳಲ್ಲಿ ಬರೊಬ್ಬರಿ 142 ರನ್‌ಗಳಿಸಿತು. ಸಾಹಾ ಕೇವಲ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 81 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಮತ್ತೊಂದೆಡೆ ಶುಬ್ಮನ್ ಗಿಲ್ ಕೊನೆಯ ತನಕವೂ ವಿಕೆಟ್ ಕಳೆದುಕೊಳ್ಳದೆ ತಂಡದ ಮೊತ್ತವನ್ನು ಹೆಚ್ಚಿಸಿದರು.

IPL 2023, GT vs LSG: Lucknow Super Giants Need 228 runs to win against Gujarat Titans

ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 25 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ನಂತ ಡೇವಿಡ್ ಮಿಲ್ಲರ್ ಕೂಡ ಸ್ಪೋಟಕ ಆಟವನ್ನು ನೀಡಿ ತಂಡದ ಮೊತ್ತ ಹಿಗ್ಗಿಸಲು ಕಾರಣವಾದರು. ಮಿಲ್ಲರ್ 12 ಎಸೆತಗಳನ್ನು ಎದುರಿಸಿ 21 ರನ್‌ಗಳಿಸಿ ಅಜೇಯವಾಗುಳಿದರು. ಇನ್ನು ಆರಂಭದಿಂದ ಕೊನೆಯ ಹಂತದವರೆಗೂ ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳಿಗೆ ಕಾಡಿದ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಅಜೇಯ 94 ರನ್‌ಗಳಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಗಿಲ್ ಕೇವಲ 2 ಬೌಂಡರಿ ಸಿಡಿಸಿದ್ದು 7 ಸಿಕ್ಸರ್ ಸಿಡಿಸಿದ್ದಾರೆ.

ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಬೆಂಚ್: ಅಲ್ಜಾರಿ ಜೋಸೆಫ್, ದಾಸುನ್ ಶನಕ, ಶ್ರೀಕರ್ ಭರತ್, ಶಿವಂ ಮಾವಿ, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ಸಾಯಿ ಸುದರ್ಶನ್, ಯಶ್ ದಯಾಳ್

ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಕೈಲ್ ಮೇಯರ್ಸ್, ದೀಪಕ್ ಹೂಡಾ, ಕರಣ್ ಶರ್ಮಾ, ಕೃನಾಲ್ ಪಾಂಡ್ಯ(ನಾಯಕ), ಮಾರ್ಕಸ್ ಸ್ಟೋಯ್ನಿಸ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಅವೇಶ್ ಖಾನ್
ಬೆಂಚ್: ಆಯುಷ್ ಬಡೋನಿ, ಡೇನಿಯಲ್ ಸಾಮ್ಸ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಯುದ್ವೀರ್ ಸಿಂಗ್ ಚರಕ್, ಮಾರ್ಕ್ ವುಡ್, ರೊಮಾರಿಯೋ ಶೆಫರ್ಡ್, ಅರ್ಪಿತ್ ಗುಲೇರಿಯಾ, ಕರುಣ್ ನಾಯರ್, ನವೀನ್-ಉಲ್-ಹಕ್, ಮನನ್ ವೋಹ್ರಾ, ಕೃಷ್ಣಪ್ಪ ಗೌತಮ್, ಕರಣ್ ಶರ್ಮಾ

Story first published: Sunday, May 7, 2023, 17:32 [IST]
Other articles published on May 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+