Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

LSG VS GT: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್‌ನಲ್ಲಿ ಗೆಲ್ಲಲು ಈ ಆಟಗಾರರನ್ನು ಆಯ್ಕೆ ಮಾಡಿ!

IPL 2023: Gujarat titans and Lucknow Super Giants dream team prediction details

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 30ನೇ ಪಂದ್ಯ ಇಂದು ( ಏಪ್ರಿಲ್ 22 ) ನಡೆಯಲಿದ್ದು, ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಲಕ್ನೋನ ಅಟಲ್ ಬಿಹಾರಿ ವಾಜಪೇಯಿ ಏಕನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ಜರುಗಲಿದೆ. ಇನ್ನು ಇಂದು ಎರಡು ಪಂದ್ಯಗಳು ಆಯೋಜನೆಯಾಗಿದ್ದು, ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ನಡೆದಿರುವ ಪಂದ್ಯಗಳ ಪೈಕಿ ಲಕ್ನೋ ಸೂಪರ್ ಜೈಂಟ್ಸ್ ತಂಡ 6 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಗುಜರಾತ್ ಟೈಟನ್ಸ್ 5 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋತು 6 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದೆ.

ಹೀಗೆ ಎರಡೂ ತಂಡಗಳು ಸಹ ಆರಂಭದ ಪಂದ್ಯಗಳಲ್ಲಿ ಉತ್ತಮವಾದಂತಹ ಫಲಿತಾಂಶವನ್ನೇ ಪಡೆದುಕೊಂಡಿದ್ದು, ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಾಗಿ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಏರ್ಪಟ್ಟಿವೆ. ಒಂದೆಡೆ ಯಾವ ತಂಡ ಗೆಲ್ಲಬಹುದು ಎಂಬುದರ ಬಗ್ಗೆ ಚರ್ಚೆಗಳು ಜರುಗುತ್ತಿದ್ದರೆ, ಮತ್ತೊಂದೆಡೆ ಫ್ಯಾಂಟಸಿ ಕ್ರಿಕೆಟ್ ಆಡುವವರು ಯಾವ ತಂಡದ ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಬಹುದು ಎಂದು ಚರ್ಚೆ ನಡೆಸುತ್ತಿದ್ದಾರೆ.

ಹೌದು, ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದಾದ ಆಟಗಾರರನ್ನು ಊಹಿಸಿ ತಂಡಗಳನ್ನು ರಚಿಸುತ್ತಿದ್ದು, ಅಂತಹ ಫ್ಯಾಂಡಸಿ ಕ್ರಿಕೆಟ್ ಪ್ರೇಮಿಗಳು ಈ ಕೆಳಕಂಡಂತೆ ತಂಡಗಳನ್ನು ರಚಿಸಿದರೆ ಒಳ್ಳೆಯ ಫಲಿತಾಂಶವನ್ನು ಪಡೆಯಲಿದ್ದಾರೆ.

ಡ್ರೀಮ್ ಟೀಮ್ 1:

.ಕೀಪರ್ - ವೃದ್ಧಿಮಾನ್ ಸಹಾ

ಬ್ಯಾಟ್ಸ್‌ಮನ್‌ಗಳು - ಶುಭಮನ್ ಗಿಲ್, ಸಾಯಿ ಸುದರ್ಶನ್, ಲೋಕೇಶ್ ರಾಹುಲ್

ಆಲ್‌ರೌಂಡರ್‌ಗಳು - ಹಾರ್ದಿಕ್ ಪಾಂಡ್ಯ (ನಾಯಕ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ

ಬೌಲರ್‌ಗಳು - ಮೊಹಮ್ಮದ್ ಶಮಿ, ಮಾರ್ಕ್ ವುಡ್, ರಶೀದ್ ಖಾನ್ (ಉಪನಾಯಕ)

lsg vs gt

ಡ್ರೀಮ್ ಟೀಮ್ 2:

ಕೀಪರ್ - ವೃದ್ಧಿಮಾನ್ ಸಹಾ

ಬ್ಯಾಟ್ಸ್‌ಮನ್‌ಗಳು - ಶುಭಮನ್ ಗಿಲ್ (ಉಪನಾಯಕ), ಸಾಯಿ ಸುದರ್ಶನ್, ಕೆ ಎಲ್ ರಾಹುಲ್ (ನಾಯಕ)

ಆಲ್ ರೌಂಡರ್‌ಗಳು - ಹಾರ್ದಿಕ್ ಪಾಂಡ್ಯ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋನಿಸ್

ಬೌಲರ್‌ಗಳು - ಮೊಹಮ್ಮದ್ ಶಮಿ, ಮಾರ್ಕ್ ವುಡ್, ರಶೀದ್ ಖಾನ್, ರವಿ ಬಿಷ್ಣೋಯ್

ಸಂಭಾವ್ಯ ಆಡುವ ಬಳಗ: ಇನ್ನು ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಸಂಭಾವ್ಯ ಆಡುವ ಬಳಗಗಳು ಈ ಕೆಳಕಂಡಂತಿದೆ..

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಆಡುವ ಬಳಗ: ಕೆಎಲ್ ರಾಹುಲ್ ( ನಾಯಕ ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್(ವಿಕೆಟ್ ಕೀಪರ್), ಆಯುಷ್ ಬಡೋನಿ, ನವೀನ್-ಉಲ್-ಹಕ್, ಯುಧ್ವೀರ್ ಸಿಂಗ್, ರವಿ ಬಿಷ್ಣೋಯ್, ಅವೇಶ್ ಖಾನ್, ಅಮಿತ್ ಮಿಶ್ರಾ

ಗುಜರಾತ್ ಟೈಟನ್ಸ್ ಸಂಭಾವ್ಯ ಆಡುವ ಬಳಗ: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ ( ನಾಯಕ ), ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ನೂರ್ ಅಹ್ಮದ್

Story first published: Saturday, April 22, 2023, 12:11 [IST]
Other articles published on Apr 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+