For Quick Alerts
ALLOW NOTIFICATIONS  
For Daily Alerts
 

GT vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ಈ ಆಟಗಾರರನ್ನು ಆರಿಸಿ

IPL 2023: Gujarat Titans vs Sunrisers Hyderabad dream team prediction

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 62ನೇ ಪಂದ್ಯ ಇಂದು ( ಮೇ 15 ) ನಡೆಯಲಿದೆ. ಈ ಪಂದ್ಯದಲ್ಲಿ ಟೇಬಲ್ ಟಾಪರ್ಸ್ ಗುಜರಾತ್ ಟೈಟನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 12 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋಲನ್ನು ಕಂಡಿರುವ ಗುಜರಾತ್ ಟೈಟನ್ಸ್ ತಂಡ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 11 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಗೆದ್ದು 7 ಪಂದ್ಯಗಳಲ್ಲಿ ಸೋತಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ 8 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಹೀಗೆ ಗುಜರಾತ್ ಟೈಟನ್ಸ್ ಒಳ್ಳೆಯ ಪ್ರದರ್ಶನವನ್ನು ನೀಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ಕಳಪೆ ಪ್ರದರ್ಶನದ ಕಾರಣದಿಂದಾಗಿ ಹೀನಾಯ ಸ್ಥಾನದಲ್ಲಿದೆ. ಈ ಕಾರಣದಿಂದಾಗಿ ಈ ಪಂದ್ಯ ಬಲಿಷ್ಠರು ಹಾಗೂ ಕನಿಷ್ಠರ ನಡುವಿನ ಸೆಣಸಾಟ ಎಂದೇ ಹೇಳಬಹುದಾಗಿದ್ದು, ಈ ಪಂದ್ಯದಲ್ಲಿ ಗೆದ್ದರೆ ಗುಜರಾತ್ ಟೈಟನ್ಸ್ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿರುವ ಪ್ರಥಮ ತಂಡ ಎನಿಸಿಕೊಳ್ಳಲಿದೆ.

ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಪಂದ್ಯವೂ ಸೇರಿದಂತೆ ಒಟ್ಟು 3 ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು ಈ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದರೂ ಸಹ ಒಟ್ಟು 14 ಅಂಕಗಳನ್ನು ಗಳಿಸಲಿದ್ದು ಪ್ಲೇಆಫ್ ಪ್ರವೇಶಿಸುವುದು ಅನುಮಾನವೆಂದೇ ಹೇಳಬಹುದು.

ಈ ಮೂಲಕ ಈ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕಿಂತ ಗುಜರಾತ್ ಟೈಟನ್ಸ್ ತಂಡಕ್ಕೆ ಅತಿಮುಖ್ಯದ್ದಾಗಿದ್ದು ಹಾಲಿ ಚಾಂಪಿಯನ್ಸ್ ಈ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ತಲುಪಲಿದೆಯಾ ಎಂಬ ಕುತೂಹಲ ಹೆಚ್ಚಾಗಿದೆ. ಒಂದೆಡೆ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಾಗಿದ್ದರೆ ಮತ್ತೊಂದೆಡೆ ಫ್ಯಾಂಟಸಿ ಕ್ರಿಕೆಟ್ ಪ್ರಿಯರು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಉತ್ತಮ ಆಟ ಆಡಬಲ್ಲ ಆಟಗಾರರನ್ನು ಊಹಿಸಿ ಆರಿಸುತ್ತಿದ್ದಾರೆ. ಈ ರೀತಿ ಡ್ರೀಮ್ ಟೀಮ್ ರಚಿಸುತ್ತಿರುವವರು ಈ ಕೆಳಕಂಡಂತೆ ಆಟಗಾರರನ್ನು ಆರಿಸಿದರೆ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಬಹುದಾಗಿದೆ.

ಡ್ರೀಮ್ ಟೀಮ್ 1: ವಿಕೆಟ್ ಕೀಪರ್ - ವೃದ್ಧಿಮಾನ್ ಸಹಾ, ಹೆನ್ರಿಚ್ ಕ್ಲಾಸೆನ್

ಬ್ಯಾಟ್ಸ್‌ಮನ್‌ಗಳು - ಡೇವಿಡ್ ಮಿಲ್ಲರ್, ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ನಾಯಕ)

ಆಲ್‌ರೌಂಡರ್‌ಗಳು - ಏಡನ್ ಮಾರ್ಕ್ರಾಮ್, ಹಾರ್ದಿಕ್ ಪಾಂಡ್ಯ

ಬೌಲರ್‌ಗಳು - ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ರಶೀದ್-ಖಾನ್ (ಉಪನಾಯಕ), ಮೋಹಿತ್ ಶರ್ಮಾ

ಡ್ರೀಮ್ ಟೀಮ್ 2: ವಿಕೆಟ್ ಕೀಪರ್ - ವೃದ್ಧಿಮಾನ್ ಸಹಾ, ಹೆನ್ರಿಚ್ ಕ್ಲಾಸೆನ್

ಬ್ಯಾಟ್ಸ್‌ಮನ್‌ಗಳು - ಡೇವಿಡ್ ಮಿಲ್ಲರ್, ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ

ಆಲ್‌ರೌಂಡರ್‌ಗಳು - ಏಡನ್ ಮಾರ್ಕ್ರಾಮ್, ಹಾರ್ದಿಕ್ ಪಾಂಡ್ಯ (ನಾಯಕ)

ಬೌಲರ್‌ಗಳು - ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ (ಉಪನಾಯಕ), ರಶೀದ್-ಖಾನ್

ಸಂಭಾವ್ಯ ಆಡುವ ಬಗಳಗಳು:

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೋಹಿತ್ ಶರ್ಮಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಶುಭಮನ್ ಗಿಲ್

ಸನ್‌ರೈಸರ್ಸ್ ಹೈದರಾಬಾದ್: ಅನ್ಮೋಲ್‌ಪ್ರೀತ್ ಸಿಂಗ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಟಿ ನಟರಾಜನ್, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಫಜಲ್‌ಹಕ್ ಫಾರೂಕಿ, ವಿವ್ರಾಂತ್ ಶರ್ಮಾ

Story first published: Monday, May 15, 2023, 16:30 [IST]
Other articles published on May 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+