ಈತ ಬೇರೆಯೇ ಲೋಕದಿಂದ ಬಂದ ಆಟಗಾರ: ಸ್ಟಾರ್ ವಿದೇಶೀ ಆಟಗಾರನ ಬಗ್ಗೆ ಭಜ್ಜಿ ಮೆಚ್ಚುಗೆಯ ನುಡಿ
ಭಾರತದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ರಶೀದ್ ಖಾನ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆತ ಬೇರೆಯೇ ಲೋಕದಿಂದ ಬಂದಿರುವ ಆಟಗಾರ ಎಂದು ಕೊಂಡಾಡಿದ್ದಾರೆ ಹರ್ಭಜನ್ ಸಿಂಗ್. ಅಹ್ಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಮುಂಬೈ ಇಮಡಿಯನ್ಸ್ ತಂಡವನ್ನು ಎದುರಿಸಲಿದ್ದು ಈ ಪಂದ್ಯಕ್ಕೂ ಮುನ್ನ ರಶೀದ್ ಖಾನ್ ಬಗ್ಗೆ ಭಜ್ಜಿ ಮಾತನಾಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಹರ್ಭಜನ್ ಸಿಂಗ್ ರಶೀದ್ ಖಾನ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆತನಂತಾ ಆಟಗಾರನನ್ನು ಹೊಂದಿರುವುದಕ್ಕೆ ಗುಜರಾತ್ ಟೈಟನ್ಸ್ ತಂಡ ಅದೃಷ್ಟಶಾಲಿ ಎಂದಿದ್ದಾರೆ ಹರ್ಭಜನ್ ಸಿಂಗ್. ಈ ಬಾರಿಯ ಐಪಿಎಲ್‌ನಲ್ಲಿ ರಶೀದ್ ಖಾನ್ 25 ವಿಕೆಟ್‌ಗಳನ್ನು ಕಬಳಿಸಿದ್ದರೆ ಬ್ಯಾಟಿಂಗ್‌ನಲ್ಲಿ 223.21ರ ಸ್ಟ್ರೈಕ್‌ರೇಟ್‌ನೊಂದಿಗೆ 125 ರನ್‌ಗಳನ್ನು ಗಳಿಸಿದ್ದಾರೆ.

"ರಶೀದ್ ಖಾನ್ ಓರ್ವ ಬೇರೆಯೇ ಲೋಕದ ಆಟಗಾರ. ಆತ ವಿಕೆಟ್‌ಗಳನ್ನು ಅದ್ಭುತವಾಗಿ ಪಡೆಯುತ್ತಾರೆ. ರನ್‌ಗಳನ್ನು ಕೂಡ ಬಾರಿಸುತ್ತಾರೆ. ಇನ್ನು ಫೀಲ್ಡಿಂಗ್‌ನಲ್ಲಿಯೂ ಮಿಂಚಿನಂತಾ ಆಟಗಾರ. ಇನ್ನು ನಾಯಕ ಹಾರ್ದಿಕ್ ಪಾಂಡ್ಯ ಯಾವಾಗ ಲಭ್ಯವಿಲ್ಲವೋ ಆಗ ನಾಯಕನಾಗಿ ಮುನ್ನಡೆಸಬಲ್ಲರು. ಆತ ಎಲ್ಲವನ್ನೂ ಅದ್ಭುತವಾಗಿ ನಿರ್ವಹಿಸಬಲ್ಲ. ರಶೀದ್ ಖಾನ್ ಅವರಂತಾ ಆಟಗಾರನ್ನು ಹೊಂದಿರುವುದಕ್ಕೆ ಜಿಟಿ ನಿಜಕ್ಕೂ ಅದೃಷ್ಠ ಮಾಡಿದೆ" ಎಂದಿದ್ದಾರೆ ಹರ್ಭಜನ್ ಸಿಂಗ್.
ಇನ್ನು ಹರ್ಭಜನ್ ಸಿಂಗ್ ಅನುಭವಿ ವೇಗಿ ಮೊಹಮ್ಮದ್ ಶಮಿ ಬಗ್ಗೆಯೂ ವಿಶೇಷ ಮಾತುಗಳನ್ನಾಡಿದ್ದಾರೆ. "ಎಲ್ಲಾ ತಂಡಗಳು ಕುಡ ಬಯಸುವಂತಾ ಬೌಲರ್ ಮೊಹಮ್ಮದ್ ಶಮಿ. ಆತ ಹೊಸ ಚೆಂಡಿನಲ್ಲಿ ಅದ್ಭುತವಾದ ಬೌಲರ್. ಡೆತ್ ಓವರ್‌ನಲ್ಲಿ ಯಾರ್ಕರ್‌ಗಳ ಮೂಲಕ ಆಘಾತ ನೀಡಬಲ್ಲರು. ಅವರ ವೇಗ ಅದ್ಭುತವಾಗಿದ್ದು ಸ್ವಿಂಗ್ ಸಾಧ್ಯವಿದ್ದಲ್ಲಿ ಆತನನ್ನು ಎದುರಿಸುವುದು ಬಹಳ ಕಠಿಣ" ಎಂದಿದ್ದಾರೆ ಹರ್ಭಜನ್ ಸಿಂಗ್.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯಲ್ಲಿ ಕೊನೆಯ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದ್ದು ಶುಕ್ರವಾರ ಮೊದಲ ಎರಡನೇ ಕ್ವಾಲಿಫಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಾಡುವ ತಂಡ ಯಾವುದು ಎಂಬುದು ಅಧಿಕೃತವಾಗಲಿದೆ.
ಇತ್ತಂಡಗಳ ಸ್ಕ್ವಾಡ್
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ(ನಾಯಕ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಜಯಂತ್ ಯಾದವ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್, ಶಿವಂ ಮಾವಿ, ಜೋಶುವಾ ಲಿಟಲ್, ಕೇನ್ ವಿಲಿಯಮ್ಸನ್, ಕೆಎಸ್ ಭರತ್, ಒಡಿಯನ್ ಸ್ಮಿತ್, ಮೋಹಿತ್ ಶರ್ಮಾ, ಉರ್ವಿಲ್ ಪಟೇಲ್.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಮಣದೀಪ್ ಸಿಂಗ್, ಅನ್ಮೋಲ್ಪ್ರೀತ್ ಸಿಂಗ್, ಡೆವಾಲ್ಡ್ ಬ್ರೆವಿಸ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಕ್ಯಾಮರೂನ್ ಗ್ರೀನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ವಿಷ್ಣು ವಿನೋದ್, ಜೋಫ್ರಾ ಆರ್ಚರ್, ಅರ್ಷದ್ ಖಾನ್, ಜೇಸನ್ ಬೆಹ್ರೆಂಡಾರ್ಫ್, ರಾಘವ್ ಗೋಯಲ್, ದುವಾನ್ ಜಾನ್ಸೆನ್, ಆಕಾಶ್ ಮಧ್ವಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications