For Quick Alerts
ALLOW NOTIFICATIONS  
For Daily Alerts
 

ಗೇಲ್, AB ಡಿವಿಲಿಯರ್ಸ್‌ಗಿಂತಲೂ ಈತ ಅಪಾಯಕಾರಿ: ಭಾರತೀಯನನ್ನು ಹಾಡಿ ಹೊಗಳಿದ ಹರ್ಭಜನ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಅದ್ದೂರಿಯಾಗಿ ಸಾಗುತ್ತಿದೆ. ನಿತ್ಯವೂ ರೋಚಕ ಪಂದ್ಯಗಳಿಗೆ ಅಭಿಮಾನಿಗಳು ಸಾಕ್ಷಿಯಾಗುತ್ತಿದ್ದು ಕುತೂಹಲ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಬುಧವಾರ ರಾತ್ರಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಮಧ್ಯೆ ರೋಚಕ ಹಣಾಹಣಿ ನಡೆದಿದ್ದು ಹೈಸ್ಕೋರಿಂಗ್ ಪಂದ್ಯದಲ್ಲಿ ಮಯಂಬೈ ಇಮಡಿಯನ್ಸ್ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅನುಭವಿ ಆಟಗಾರನ ಬ್ಯಾಟ್‌ನಿಂದ ಬಂದ ವಿಶೇಷ ಪ್ರದರ್ಶನದ ಹಿನ್ನೆಲೆಯಲ್ಲಿ ಹರ್ಭಜನ್ ಸಿಂಗ್ ನೀಡಿದ ಹೇಳಿಕೆ ಕುತೂಹಲ ಮೂಡಿಸಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ ಕಾರಣವಾಗಿದ್ದು ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ. ಈ ಪ್ರದರ್ಶನದ ಬಳಿಕ ಮಾತನಾಡಿದ ಹರ್ಭಜನ್ ಸಿಂಗ್ ಸೂರ್ಯಕುಮಾರ್ ಬ್ಯಾಟಿಂಗ್ ಬಗ್ಗೆ ಭಾರೀ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

IPL 2023: Harbhajan Singh special praise on Suryakumar Yadav said he is more dominating than ABD and Chris Gayle

ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಐಪಿಎಲ್ ಟೂರ್ನಿಯ ದಿಗ್ಗಜ ಆಟಗಾರರು ಎನಿಸಿಕೊಂಡಿರುವ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಹೋಲಿಸಿ ಸೂರ್ಯಕುಮಾರ್ ಯಾದವ್ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡದ್ದಾರೆ. ದಿಗ್ಗಜ ಆಟಗಾರರಾದ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಅವರಿಗಿಂತಲೂ ಸೂರ್ಯಕುಮಾರ್ ಪ್ರಬಲವಾದ ಆಟಗಾರ ಎಂದಿದ್ದಾರೆ ಹರ್ಭಜನ್ ಸಿಂಗ್.

"ಆಟಗಾರನೊಬ್ಬ ಬೌಲರ್‌ಗಳನ್ನು ಈ ಪ್ರಮಾಣದಲ್ಲಿ ಒತ್ತಡಕ್ಕೆ ಸಿಲುಕಿಸುವುದನ್ನು ನಾನು ಹಿಂದೆಂದೂ ನೋಡಿಲ್ಲ. ನಾನು ಸಾಕಷ್ಟು ಪ್ರಮಾಣದ ಕ್ರಿಕೆಟ್ ಆಡಿದ್ದೇನೆ. ಆದರೆ ಈ ಪ್ರಮಾಣದಲ್ಲಿ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಸಾಧಿಸುವ ಆಟಗಾರನನ್ನು ನೋಡಿಲ್ಲ. ಎಬಿ ಡಿಲಿಯರ್ಸ್, ಕ್ರಿಕೆಟ್ ಗೇಲ್ ಅವರಂತಾ ಆಟಗಾರರು ಕೂಡ ಬಂದು ಹೋಗಿದ್ದಾರೆ, ಆದರೆ ಆದರೆ ಸೂರ್ಯಕುಮಾರ್ ಯಾದವ್ ರೀತಿಯಲ್ಲಿ ಡಾಮಿನೇಟ್ ಮಾಡುವ ಆಟಗಾರನನ್ನು ಯಾವ ಮಾದರಿಯಲ್ಲಿಯೂ ನೋಡಿಲ್ಲ" ಎಂದಿದ್ದಾರೆ ಹರ್ಭಜನ್ ಸಿಂಗ್.

"ತನ್ನ ಮುಂದೆ ಯಾವುದೇ ಬೌಲರ್ ಇದ್ದರೂ ಆತನಿಗೆ ಅದು ಸಂಗತಿಯೇ ಆಗುವುದಿಲ್ಲ. ತನ್ನ ಆಟದ ವಿಧಾನ ಆತನಿಗೆ ತಿಳಿದಿದೆ. ಪ್ರತಿ ಎಸೆತವನ್ನು ಕೂಡ ಎಲ್ಲಿಗೆ ಬಾರಿಸಬೇಕು ಎಂಬುದು ಆತನಿಗೆ ಚೆನ್ನಾಗಿ ತಿಳಿದಿದೆ. ಸಾಮಾನ್ಯವಾಗಿ ಬ್ಯಾಟರ್‌ಗಳು ಸಿಂಗಲ್‌ಗಳನ್ನು ಬಾರಿಸುತ್ತಾರೆ ಇಲ್ಲವಾದರೆ ಮೈದಾನದಾಚೆಗೆ ಚೆಂಡನ್ನು ಅಟ್ಟುವ ಪ್ರಯತ್ನ ಮಾಡುತ್ತಾರೆ. ಆದರೆ ಈತನ ಬಳಿಕ ಮೈದಾನದ ಯಾವುದೇ ಭಾಗಕ್ಕಾದರೂ ಬಾರಿಸಿ ಬೌಂಡರಿ ಪಡೆಯಬಲ್ಲ ಶಾಟ್‌ಗಳು ಇವೆ" ಎಂದು ಸೂರ್ಯಕುಮಾರ್ ಯಾದವ್ ಆಟದ ಶೈಲಿಯನ್ನು ಪ್ರಶಂಸಿಸಿದ್ದಾರೆ.

"ಆತ ಬಹಳ ವಿಶೇಷವಾದ ಆಟಗಾರ. ಆತನ ವಿರುದ್ಧ ಡಾಟ್ ಬಾಲ್‌ಗಳನ್ನು ಎಸೆಯುವುದು ಬಹಳ ಕಷ್ಟ. ಆ ರೀತಿಯ ಬ್ಯಾಟಿಂಗನ್ನು ನಾನು ನೋಡಿಲ್ಲ. ಆತ ಬ್ಯಾಟಿಂಗ್ ಮಾಡುತ್ತಿರಬೇಕಾದರೆ ಎಲ್ಲರು ಕೂಡ ದುರ್ಬಲವಾಗಿ ಕಾಣಿಸುತ್ತಾರೆ. ನಾವು ನೋಡಿದ ಹಾಗೂ ಆಡಿದ ಕ್ರಿಕೆಟ್‌ಗಿಂತ ಈ ಆಟ ಬಹಳ ಭಿನ್ನವಾಗಿದೆ" ಎಂದಿದ್ದಾರೆ ಹರ್ಭಜನ್ ಸಿಂಗ್.

ಪಂಜಾಬ್ ಕಿಂಗ್ಸ್ ತಂಡ ನೀಡಿದ 215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಆಸರೆಯಾದರು. ಈ ಜೊಡಿ 116 ರನ್‌ಗಳ ಮಹತ್ವದ ಜೊತೆಯಾಟವನ್ನು ನೀಡಿದ ಕಾರಣ ಗೆಲುವು ಸಾಧ್ಯವಾಯಿತು. ಈ ಆವೃತ್ತಿಯಲ್ಲಿ ಆರಂಭಿಕ ಕೆಲ ಪಂದ್ಯಗಳಲ್ಲಿ ಮಂಕಾಗಿದ್ದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಮತ್ತೊಮ್ಮೆ ಮಿಂಚಿದ್ದು ಕೇವಲ 31 ಎಸೆತಗಳಲ್ಲಿ 66 ರನ್ ಬಾರಿಸಿದ್ದಾರೆ. ಅವರ ಈ ಇನ್ನಿಂಗ್ಸ್‌ 8 ಬೌಂಡರಿಗಳು ಹಾಗೂ 2 ಸಿಕ್ಸರ್‌ಗಳಿಂದ ಕೂಡಿತ್ತು.

Story first published: Thursday, May 4, 2023, 17:21 [IST]
Other articles published on May 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+