For Quick Alerts
ALLOW NOTIFICATIONS  
For Daily Alerts
 

ನಾನು ಯಾವತ್ತಿಗೂ ಧೋನಿ ಅಭಿಮಾನಿ: CSK ವಿರುದ್ಧದ ಪಂದ್ಯಕ್ಕೂ ಮುನ್ನ GT ನಾಯಕ ಹಾರ್ದಿಕ್ ಹೇಳಿಕೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ಈ ಆವೃತ್ತಿಯ ಮೊದಲ ಫೈನಲಿಸ್ಟ್ ತಂಡ ಯಾವುದು ಎಂಬುದು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಮಡದ ನಾಯಕ ಹಾರ್ದಿಕ್ ಪಾಂಡ್ಯ ಸಿಎಸ್‌ಕೆ ಎಂಎಸ್ ಧೋನಿ ಮೇಲಿನ ತನ್ನ ಅಭಿಮಾನಿವನ್ನು ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಾನು ಯಾವಾಗಲೂ ಎಂಎಸ್ ಧೋನಿಯ ಅಭಿಮಾನಿ ಎಂದಿದ್ದಾರೆ. ಈ ಸಂದರ್ಭದಲ್ಲಿ ಅವರು ದೆವ್ವಗಳು ಮಾತ್ರೇ ಎಂಎಸ್ ಧೋನಿಯನ್ನು ದ್ವೇಶಿಸಲು ಸಾಧ್ಯ ಎಂಬ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಈ ಹಿಂದೆಯೂ ಸಾಕಷ್ಟು ಸಂದರ್ಭಗಳಲ್ಲಿ ಎಂಎಸ್ ಧೋನಿ ಜೊತೆಗಿನ ತಮ್ಮ ಬಾಂಧವ್ಯವನ್ನು ಹೇಳಿಕೊಂಡಿದ್ದರು ಅಲ್ಲದೆ ಧೋನಿ ಹಾದಿಯನ್ನು ತಾನು ಅನುಸರಿಸುವುದಾಗಿಯೂ ಹೇಳಿಕೆ ನೀಡಿದ್ದರು.

IPL 2023: Hardik Pandya said always fan of MS Dhoni, ahead of Qualifier match

"ಬಹಳಷ್ಟು ಜನರು ಮಾಹಿ ಗಂಭೀರ ಸ್ವಭಾವದ ವ್ಯಕ್ತಿ ಎಂದುಕೊಂಡಿದ್ದಾರೆ. ಆದರೆ ನನಗೆ ನಾನು ಯಾವುದಾದರೂ ತಮಾಷೆ ಮಾಡಿದಾಗ ಅವರು ಎಂಎಸ್ ಧೋನಿಯಂತೆ ಅನಿಸುವುದಿಲ್ಲ. ಖಂಡಿತವಾಘಿಯೂ ನಾನು ಸಾಕಷ್ಟು ಅಂಶಗಳನ್ನು ಅವರಿಂದ ಕಲಿತಿದ್ದೇನೆ. ಸಾಕಷ್ಟು ಸಕಾರಾತ್ಮಕ ಅಂಶಗಳು ಅವರಿಂದ ತಿಳಿದುಕೊಂಡಿದ್ದೇನೆ. ಅವರೊಂದಿಗೆ ಮಾತನಾಡುವದಕ್ಕಿಂತಲೂ ಅವರನ್ನು ನೋಡಿಯೇ ಹೆಚ್ಚಾಗಿ ಕಲಿತುಕೊಂಡಿದ್ದೇನೆ" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

"ಆದರೆ ನನಗೆ ಅವರು ನನ್ನ ಆತ್ಮೀಯ ಸೋದರ, ಆತ್ಮೀಯ ಗೆಳೆಯ. ನಾನು ಅವರೊಂದಿಗೆ ಪ್ರಾಂಕ್ ಮಾಡಬಹುದು, ತಮಾಷೆಯಾಗಿ ಕಾಲ ಕಳೆಯಬಹುದು. ನಾನು ಯಾವಾಗಲೂ ಎಂಎಸ್ ಧೋನಿ ಅವರ ಅಭಿಮಾನಿಯಾಗಿರುತ್ತೇನೆ. ಎಂಎಸ್ ಧೋನಿ ಅವರನ್ನು ದ್ವೇಶಿಸಬೇಕೆಂದಿದ್ದರೆ ನೀವು ದೆವ್ವವೇ ಆಗಿರಬೇಕು" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

ಇನ್ನು ಗುಜರಾತ್ ಟೈಟನ್ಸ್ ಐಪಿಎಲ್‌ನಲ್ಲಿ ಈವರೆಗೆ ಮೂರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಮೂರು ಪಂದ್ಯದಲ್ಲಿಯೂ ಹಾರ್ದಿಕ್ ಪಡೆ ಗೆಲುವು ಸಾಧಿಸಿದ್ದು ಸಂಪೂರ್ಣ ಮೇಲುಗೈ ಹೊಂದಿದೆ. ಇದೀಗ ತವರಿನಲ್ಲಿಯೇ ಆಡುತ್ತಿರುವ ಪಂದ್ಯದಲ್ಲಿ ಧೋನಿ ಪಡೆ ಜಿಟಿ ವಿರುದ್ಧ ಮೊದಲ ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದ್ದು ಸೋತ ತಂಡ ಎಲಿಮಿನೇಟರ್ ಪಂದ್ಯವನ್ನು ಆಡಲಿದೆ.

ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ(ನಾಯಕ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಜಯಂತ್ ಯಾದವ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್, ಶಿವಂ ಮಾವಿ, ಜೋಶುವಾ ಲಿಟಲ್, ಕೇನ್ ವಿಲಿಯಮ್ಸನ್, ಕೆಎಸ್ ಭರತ್, ಒಡಿಯನ್ ಸ್ಮಿತ್, ಮೋಹಿತ್ ಶರ್ಮಾ, ಉರ್ವಿಲ್ ಪಟೇಲ್.

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ(ನಾಯಕ), ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಸುಭ್ರಾಂಶು ಸೇನಾಪತಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಮಹೇಶ್ ತೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶ ಪತಿರಾನ, ಬೆನ್ ಸ್ಟೋಕ್ಸ್, ಸಿಸಂದಾ ಮಗಲಾ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್, ಭಗತ್ ವರ್ಮಾ, ಆಕಾಶ್ ಸಿಂಗ್

Story first published: Tuesday, May 23, 2023, 11:43 [IST]
Other articles published on May 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+