Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಹೀಗೇನಾದರೂ ನಡೆದರೆ RCB, MI ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸಲಿದೆ ರಾಜಸ್ಥಾನ್ ರಾಯಲ್ಸ್!

ಐಪಿಎಲ್ 16ನೇ ಆವೃತ್ತಿಯ ಲೀಗ್ ಹಂತದ ಕೊನೆಯ ನಾಲ್ಕು ಪಂದ್ಯಗಳು ಮಾತ್ರವೇ ಬಾಕಿಯಿದೆ. ಆದರೆ ಈವರೆಗೆ ಪ್ಲೇಆಫ್‌ಗೆ ಗುಜರಾತ್ ಟೈಟನ್ಸ ಮಾತ್ರವೇ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ. ಹೀಗಾಗಿ ಪ್ಲೇಆಫ್‌ಗೆ ಉಳಿದಿರುವ ಮೂರು ಸ್ಥಾನಗಳಿಗೆ ಈಗ ಒಟ್ಟು 6 ತಂಡಗಳ ಮಧ್ಯೆ ಪೈಪೊಟಯಿದೆ.

ಶನಿವಾರ ಹಾಗೂ ಭಾನುವಾರ ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿದ್ದು ಈ ನಾಲ್ಕು ಪಂದ್ಯಗಳಲ್ಲಿ ಪ್ಲೇಆಫ್‌ಗೇರುವ ತಂಡಗಳು ಯಾವುದು ಎಂಬುದು ಸ್ಪಷ್ಟವಾಗಲಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಈ ಪಂದ್ಯದವರೆಗೂ ಪ್ಲೇಆಫ್ ಹಂತದ ಸ್ಪಷ್ಟ ಚಿತ್ರಣ ದೊರೆಯುವುದು ಅಸಾಧ್ಯ. ಅಷ್ಟು ತೀವ್ರವಾಗಿದೆ ಈ ಬಾರಿಯ ಐಪಿಎಲ್ ತಂಡಗಳ ಜಿದ್ದಾಜಿದ್ದಿನ ಹೋರಾಟ!

IPL 2023: Heres how Rajasthan Royals can qualify ahead of RCB and Mumbai Indians

ಲೀಗ್ ಹಂತದ 66 ಪಂದ್ಯಗಳು ಮುಕ್ತಾಯವಾದ ವೇಳೆಗೆ ಅಂಕಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ 18 ಅಂಕಗಳನ್ನು ಗಳಿಸಿದ್ದು ಮೊದಲ ಸ್ಥಾನದಲ್ಲಿದೆ. ಗಳೀದ ತಂಡಗಳು ಗರಿಷ್ಠ 17 ಅಂಕಗಳನ್ನು ಮಾತ್ರವೇ ಪಡೆಯುವ ಅವಕಾಶವಿರುವ ಕಾರಣ ಮೊದಲ ಸ್ಥಾನ ಜಿಟಿಯಿಂದ ಕೈತಪ್ಪಲು ಯಾವುದೇ ಅವಕಾಶವಿಲ್ಲ. ಎರಡನೇ ಸ್ಥಾನಲ್ಲಿ 15 ಅಂಕಗಳನ್ನು ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ ತಂಡ ಇದ್ದರೆ ಮೂರನೇ ಸ್ಥಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ 15 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ಆರ್‌ಸಿಬಿ ತಂಡ 14 ಅಂಕಗಳನ್ನು ಖಾತೆಯಲ್ಲಿ ಹೊಂದಿದ್ದು ನಾಲ್ಕನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯಮ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್‌ಗಳು ಇದ್ದು ಪ್ಲೇಆಫ್‌ಹಾಗಿ ಹೋರಾಟವನ್ನು ಮುಂದುವರಿಸಿದೆ.

ಪ್ಲೇಆಫ್ ಆಸೆ ಕೈಬಿಟ್ಟಿಲ್ಲ ಆರ್‌ಆರ್

ರಾಜಸ್ಥಾನ್ ರಾಯಲ್ಸ್ ತಂಡ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಮುಗಿಸಿದ್ದು ಈ ಹಂತದಲ್ಲಿ 14 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಹಾಗಿದ್ದರೂ ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಆಫ್ ಕನಸು ಇನ್ನು ಸಂಪೂರ್ಣವಾಗಿ ಭಗ್ನವಾಗಿಲ್ಲ. ಹೀಗಾಗಿ ಅದು ಮುಂದಿನ ಪಂದ್ಯಗಳಲ್ಲಿ ತನಗೆ ಪೂರಕವಾದ ಫಲಿತಾಂಶವನ್ನು ಎದುರುನೋಡುತ್ತಿದೆ. ಆರ್‌ಆರ್ ಅಂದುಕೊಂಡಿರುವ ಫಲಿತಾಂಶ ಬಂದರೆ ಪ್ಲೇಆಫ್‌ಗೇರುವ ಅವಕಾಶ ಇರಲಿದೆ.

ಹೀಗಾದಲ್ಲಿ ಆರ್‌ಆರ್ ಪ್ಲೇಆಫ್ ಖಚಿತ!

ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್‌ಗೆ ಪ್ರವೇಶಿಸಲು ಸಾಧ್ಯವಾಗಬೇಕಿದ್ದರೆ ಈ ಎರಡು ಪಂದ್ಯಗಳ ಫಲಿತಾಂಶ ಬಹಳ ನಿರ್ಣಾಯಕ. ಅದು ಎರಡು ಕೂಡ ಭಾನುವಾರ ನಡೆಯಲಿರುವ ಪಂದ್ಯಗಳಾಗಿದೆ. ಭಾನುವಾರ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವಾಗಿದ್ದು ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ ತಂಡ ಸೋಲು ಅನುಭವಿಸಬೇಕಿದೆ. ಅದಾದ ಬಳಿಕ ಭಾನುವಾರ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಹೆಚ್ಚಿನ ಅಂತರದಿಂದ ಸೋಲು ಕಂಡರೆ ಆಗ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್‌ಗೆ ಪ್ರವೇಶ ಪಡೆಯುವ ಅವಕಾಶವಿದೆ.

Story first published: Saturday, May 20, 2023, 11:18 [IST]
Other articles published on May 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+