For Quick Alerts
ALLOW NOTIFICATIONS  
For Daily Alerts
 

IPL 2023 Opening Ceremony: 5 ವರ್ಷಗಳ ಬಳಿಕ ಅದ್ದೂರಿ ಕಾರ್ಯಕ್ರಮದ ಮೂಲಕ ಚಾಲನೆಗೆ ಸಿದ್ಧತೆ: ಏನಿದೆ ವಿಶೇಷತೆ?

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಕೋವಿಡ್ ಪೂರ್ವದಲ್ಲಿದ್ದ ಅದ್ಧೂರಿತನದೊಂದಿಗೆ ಟೂರ್ನಿ ಪ್ರೇಕ್ಷಕರನ್ನು ಮನರಂಜಿಸುವುದು ಖಚಿತವಾಗಿದ್ದು ಅದಕ್ಕಾಗಿ ಐಪಿಎಲ್ ಆಡಳಿಯತ ಮಂಡಳಿ ಸರ್ವ ಸಿದ್ಧತೆಯನ್ನು ಕೂಡ ಮಾಡಿಕೊಳ್ಳುತ್ತಿದೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿ ಅದ್ದೂರಿ ಕಾರ್ಯಕ್ರಮದ ಮೂಲಕ ಚಾಲನೆ ಪಡೆಯಲಿರುವುದು ಮತ್ತೊಂದು ವಿಶೇಷ.

2018ರ ಆವೃತ್ತಿಯ ಬಳಿಕ ಇದೇ ಮೊದಲ ಬಾರಿಗೆ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿದೆ ಬಿಸಿಸಿಐ. ಮಾರ್ಚ್ 31ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಸೆಣೆಸಾಡಲಿದೆ. ಈ ಪಂದ್ಯಕ್ಕೂ ಮುನ್ನ ಈ ಅದ್ದೂರಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆಯಾಗಲಿದೆ.

IPL 2023 inauguration: opening ceremony for first time since 2018: Everything you need to know

ಅಂದಹಾಗೆ 2018ರ ಐಪಿಎಲ್ ಬಳಿಕ ಬಿಸಿಸಿಐ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜನೆ ಮಾಡಿರಲಿಲ್ಲ. 2019ರಲ್ಲಿ ಆ ವರ್ಷದ ಫೆಬ್ರವರಿ 14ರಂದು ನಡೆದ ಉಗ್ರರ ದಾಳಿಯಲ್ಲಿ ಮಡಿದ ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ನೆರವು ನೀಡುವ ಹಿನ್ನೆಲೆಯಲ್ಲಿ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು. 2020ರ ಬಳಿಕ ಕೊರೊನಾವೈರಸ್‌ನ ಕಾರಣದಿಂದಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೊಜಿಸಿರಲಿಲ್ಲ.

ಇನ್ನು ಈ ಬಾರಿ ಐಪಿಎಲ್‌ನಲ್ಲಿ ಹೋಮ್ ಹಾಗೂ ಅವೇ ಮಾದರಿ ಕೂಡ ಮತ್ತೆ ವಾಪಾಸಾಗಿದೆ. ಹೀಗಾಗಿ ಎಲ್ಲಾ ತಂಡಗಳು ಕೂಡ ಈ ಬಾರಿ ಸುದೀರ್ಘ ಕಾಲದ ಬಳಿಕ ಮತ್ತೆ ತಮ್ಮ ತವರು ಮೈದಾನದಲ್ಲಿ ತವರಿನ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಆಡಲಿದ್ದು ಕುತೂಹಲ ಮೂಡಿಸಿದೆ.

ಇನ್ನು ಈ ಬಾರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ಸೂಪರ್‌ಸ್ಟಾರ್‌ಗಳು ಭಾಗಿಯಾಗುವ ಸಾಧ್ಯತೆಯಿದೆ. ಆದರೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲಾ ತಂಡಗಳು ನಾಯಕರು ಭಾಗಿಯಾಗುವುದು ಅನುಮಾನ. ಆದರೆ ಬುಧವಾರ ನಡೆದ ಐಪಿಎಲ್ ನಾಯಕನ ಮೀಟಿಂಗ್‌ನಲ್ಲಿ ಎಲ್ಲಾ ತಂಡಗಳು ನಾಯಕರು ಭಾಗಿಯಾಗಿದ್ದಾರೆ.

ಇನ್ನು ಈ ಮಧ್ಯೆ 16ನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟಿ ತಮನ್ನಾ ಭಾಟಿಯಾ ಭಾಗಿಯಾಗಲಿದ್ದಾರೆ ಎಂಬುದನ್ನು ಐಪಿಎಲ್ ಖಚಿತಪಡಿಸಿದೆ. ಆದರೆ ಮತ್ತೋರ್ವ ನಟಿ ರಶ್ಮಿಕಾ ಮಂದಣ್ಣ ಈ ಕಾರ್ಯಕ್ರಮದಲ್ಲಿ ಭಾಗುಯಾಗಲಿರುವ ಬಗ್ಗೆ ಮಾಹಿತಿಗಳಿದ್ದರೂ ಈ ಬಗ್ಗೆ ಬಿಸಿಸಿಐ ಖಚಿತಪಡಿಸಿಲ್ಲ. ಇನ್ನು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ನರೆಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶೇಷ ಲೇಸರ್ ಪ್ರದರ್ಶನ ಕೂಡ ಏರ್ಪಡಿಸುವ ಸಾಧ್ಯತೆಯಿದೆ.

ಉದ್ಘಾಟನಾ ಕಾರ್ಯಕ್ರಮದ ಸಮಯ, ಸ್ಥಳ ಹಾಗೂ ಇತರ ಮಾಹಿತಿ: ಐಪಿಎಲ್ 16ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮ ಮಾರ್ಚ್ 31ರಂದು ಸಂಜೆ 6 ಗಂಟೆಗೆ ಆರಂಭವಾಗಲಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಲಿದೆ. ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಈ ಸಮಾರಂಭದಲ್ಲಿ ಉಪಸ್ಥಿತವಿರಲಿದೆ.

ನೇರಪ್ರಸಾರ ಹಾಗೂ ಲೈವ್‌ಸ್ಟ್ರಿಮಿಂಗ್: ಇನ್ನು ಈ ಉದ್ಘಾಟನಾ ಕಾರ್ಯಕ್ರಮದ ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ. ಇನ್ನು ಜಿಯೋ ಸಿನಿಮಾದಲ್ಲಿ ಲೈವ್‌ ಟೆಲಿಕಾಸ್ಟ್ ಕೂಡ ದೊರೆಯಲಿದೆ.

Story first published: Wednesday, March 29, 2023, 18:18 [IST]
Other articles published on Mar 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+