IPL 2023: ಇದೇ ಕಾರಣಕ್ಕೆ ತಡವಾಗಿ ಆರಂಭವಾಗಲಿದೆ 2023ರ ಐಪಿಎಲ್!

2023ರ ಐಪಿಎಲ್‌ಗಾಗಿ ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದ್ದು, ತಮ್ಮ ತಂಡವನ್ನು ಮತ್ತಷ್ಟು ಬಲಗೊಳಿಸಲು ಪ್ರಾಂಚೈಸಿಗಳು ಉತ್ತಮ ಆಟಗಾರರನ್ನು ಸೇರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿವೆ.
2023ರಲ್ಲಿ ಮಹಿಳಾ ಐಪಿಎಲ್‌ನ ಮೊದಲ ಸೀಸನ್ ನಡೆಯಲಿದೆ. 5 ತಂಡಗಳು ಮೊದಲ ಸೀಸನ್‌ನಲ್ಲಿ ಭಾಗಿಯಾಗಲಿದ್ದು, ಫ್ರಾಂಚೈಸಿಗಳಿಗಾಗಿ ಬಿಸಿಸಿಐ ಟೆಂಡರ್ ಆಹ್ವಾನಿಸಿದೆ. ಮಹಿಳಾ ಐಪಿಎಲ್ ಮಾರ್ಚ್ ತಿಂಗಳಿನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಇದರಿಂದಾಗಿ ಪುರುಷರ ಐಪಿಎಲ್ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ.
ಬಿಸಿಸಿಐ ವರದಿಗಳ ಪ್ರಕಾರ ಮಾರ್ಚ್ 3ರಿಂದ ಮಹಿಳಾ ಐಪಿಎಲ್ ಆರಂಭವಾಗುವ ಸಾಧ್ಯತೆ ಇದೆ. ಮಾರ್ಚ್ 26ರಂದು ಮಹಿಳಾ ಐಪಿಎಲ್‌ಗೆ ತೆರೆ ಬೀಳಲಿದೆ. ಇದರಿಂದಾಗಿಯೇ 2023ರ ಐಪಿಎಲ್ ಮಾರ್ಚ್ ಅಂತ್ಯದ ಬದಲಾಗಿ ಏಪ್ರಿಲ್ 1 ರಂದು ಆರಂಭವಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಐಪಿಎಲ್ ಮಾರ್ಚ್ ತಿಂಗಳಲ್ಲಿ ಆರಂಭವಾಗುತ್ತಿತ್ತು.
ಫೆಬ್ರವರಿ 26 ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ನಡೆಯಲಿದೆ. ಟಿ20 ವಿಶ್ವಕಪ್ ಫೈನಲ್ ಮುಗಿದ ಒಂದು ವಾರದ ನಂತರ ಮಹಿಳಾ ಐಪಿಎಲ್‌ಗೆ ಅದ್ದೂರಿ ಚಾಲನೆ ದೊರೆಯಲಿದೆ. ಆದರೂ, ಮಹಿಳಾ ಐಪಿಎಲ್ ಆರಂಭದ ದಿನಾಂಕವನ್ನು ಇನ್ನೂ ಬಿಸಿಸಿಐ ಅಧಿಕೃತವಾಗಿ ನಿರ್ಧರಿಸಿಲ್ಲ.

ಮಹಿಳಾ ಐಪಿಎಲ್‌ಗೆ ವಲಯವಾರು ತಂಡಗಳು
ಬಿಸಿಸಿಐ ಮುಂದಿನ ಕಾರ್ಯಸೂಚಿಯಲ್ಲಿ ಮಹಿಳಾ ಐಪಿಎಲ್ ಫ್ರಾಂಚೈಸಿಗಳಿಗೆ ಟೆಂಡರ್ ಆಹ್ವಾನಿಸಿದೆ. ಮಹಿಳಾ ಐಪಿಲ್‌ನಲ್ಲಿ ನಗರ ಆಧಾರಿತ ತಂಡಗಳ ಬದಲಿಗೆ, ಬಿಸಿಸಿಐ ವಲಯ ಆಧಾರಿತ ತಂಡಗಳನ್ನು ಮಾಡಲು ನಿರ್ಧರಿಸಿದೆ. ಪ್ರತಿ ತಂಡವು ನಿರ್ದಿಷ್ಟ ವಲಯವನ್ನು ಪ್ರತಿನಿಧಿಸುತ್ತದೆ.
ಧರ್ಮಶಾಲಾ/ಜಮ್ಮು (ಉತ್ತರ), ಪುಣೆ/ರಾಜ್‌ಕೋಟ್ (ಪಶ್ಚಿಮ), ಇಂದೋರ್/ನಾಗ್ಪುರ/ರಾಯಪುರ (ಮಧ್ಯ), ರಾಂಚಿ/ಕಟಕ್ (ಪೂರ್ವ), ಕೊಚ್ಚಿ/ವಿಶಾಖಪಟ್ಟಣಂ (ದಕ್ಷಿಣ) ಮತ್ತು ಗುವಾಹಟಿ (ಉತ್ತರ) ವಲಯವಾರು ಐದು ತಂಡಗಳು ಮಹಿಳಾ ಐಪಿಎಲ್‌ನಲ್ಲಿ ಆಡಲಿವೆ.

ಹಳೆಯ ಮಾದರಿಯಲ್ಲಿ ಐಪಿಎಲ್ ಆಯೋಜನೆ
10-ತಂಡಗಳ ಸ್ಪರ್ಧೆಯ ಆರಂಭದ ದಿನಾಂಕವನ್ನು ನಿರ್ಧರಿಸುವ ಮೊದಲು, ಬಿಸಿಸಿಐ ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ವಿಚಾರಣೆ ಮಾಡುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದ ಕೆಲವೇ ಅಂಗಳದಲ್ಲಿ ಐಪಿಎಲ್ ನಡೆಸಲಾಗಿತ್ತು.
ಆದರೆ, 2023ರಲ್ಲಿ ಐಪಿಎಲ್ ತನ್ನ ಹಳೆಯ ಮಾದರಿಗೆ ಮಾಪಸ್ಸಾಗಲಿದೆ. ತವರು ಮತ್ತು ಹೊರಗೆ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಜೂನ್ 1 ರಿಂದ 4 ರವರೆಗೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ಟೆಸ್ಟ್ ಆಡಲಿರುವ ಕಾರಣ ಮೇ ಅಂತ್ಯದ ವೇಳೆಗೆ ಐಪಿಎಲ್ ಮುಗಿಸುವ ಗುರಿಯನ್ನು ಬಿಸಿಸಿಐ ಹೊಂದಿದೆ.
ಎರಡನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕೂಡ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ನಡೆಯಲಿದೆ. ಭಾರತಕ್ಕೆ ಕೂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪುವ ಅವಕಾಶ ಇರುವುದರಿಂದ ಬಿಸಿಸಿಐ ಎಲ್ಲಾ ರೀತಿಯಿಂದಲೂ ಯೋಚಿಸಿ ವೇಳಾಪಟ್ಟಿ ತಯಾರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications