For Quick Alerts
ALLOW NOTIFICATIONS  
For Daily Alerts
 

IPL 2023: ಈ ವಿಚಾರಕ್ಕಾಗಿ ಐಪಿಎಲ್ ಫ್ರಾಂಚೈಸಿಗಳ ಮೇಲೆ ಬಿಸಿಸಿಐ ಅಸಮಾಧಾನ; ವರದಿ

IPL 2023: Investment in Overseas T20 Leagues; BCCI Unhappy On IPL Franchises

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಂದಾಳತ್ವದಲ್ಲಿ ನಡೆಯುತ್ತಿರುವ ಶ್ರೀಮಂತ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಹೆಚ್ಚಿನ ಫ್ರಾಂಚೈಸಿಗಳು ಸಾಗರೋತ್ತರ ಟಿ20 ಲೀಗ್ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿರುವ ಬಗ್ಗೆ ಬಿಸಿಸಿಐ ಅಸಮಾಧಾನ ಹೊಂದಿದೆ ಎಂದು ವರದಿಯಾಗಿದೆ.

ಐಪಿಎಲ್ ಫ್ರಾಂಚೈಸಿ ಮಾಲೀಕರು ತಮ್ಮ ಜಾಗತಿಕ ಚೌಕಟ್ಟನ್ನು ವಿಸ್ತರಿಸಲು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಮೂರು ಫ್ರಾಂಚೈಸಿಗಳು ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಮತ್ತು ಮುಂಬರುವ ಇಂಟರ್ನ್ಯಾಷನಲ್ ಲೀಗ್ ಟಿ20 (ILT20) ಯಲ್ಲಿ ತಂಡಗಳನ್ನು ಹೊಂದಿದ್ದಾರೆ.

ಮತ್ತೊಂದೆಡೆ, ಹೊಸದಾಗಿ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಎಲ್ಲಾ ಆರು ಫ್ರಾಂಚೈಸಿಗಳು ಭಾರತೀಯ ಮೂಲದ ಫ್ರಾಂಚೈಸಿ ಮಾಲೀಕರಿಂದ ಬಿಡ್‌ಗಳನ್ನು ಗೆದ್ದಿವೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಫ್ರಾಂಚೈಸಿ ಮಾಲೀಕರ ಸಾಗರೋತ್ತರ ಹೂಡಿಕೆ ಬಗ್ಗೆ ಬಿಸಿಸಿಐ ತಮ್ಮ ಅಸಮಾಧಾನವನ್ನು ತಿಳಿಸಿದೆ. ಇದು ಐಪಿಎಲ್ ಲೀಗ್‌ನ ಮೌಲ್ಯವನ್ನು ದುರ್ಬಲಗೊಳಿಸಬಹುದು ಎಂದು ಅದು ಆತಂಕ ಹೊಂದಿದೆ ಎನ್ನಲಾಗಿದೆ.

IPL 2023: Investment in Overseas T20 Leagues; BCCI Unhappy On IPL Franchises

ಕೊಚ್ಚಿಯಲ್ಲಿ ಐಪಿಎಲ್ 2023 ಮಿನಿ ಹರಾಜಿನ ಮೊದಲು ನಡೆದ ಸಭೆಯಲ್ಲಿ ಉಪಸ್ಥಿತರಿದ್ದ ತಂಡದ ಅಧಿಕಾರಿಯೊಬ್ಬರು ಹೀಗೆ ಹೇಳಿದ್ದಾರೆ.

"ಫ್ರಾಂಚೈಸಿಗಳು ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸದಂತೆ ನಿರುತ್ಸಾಹಗೊಳಿಸಲು ಬಿಸಿಸಿಐ ಪ್ರಯತ್ನಿಸಿತು. ಬಿಸಿಸಿಐ ಈಗಾಗಲೇ ಫ್ರಾಂಚೈಸಿಗಳ ವ್ಯಾಪಾರ ವಿಸ್ತರಣೆಯನ್ನು ಅರ್ಥಮಾಡಿಕೊಂಡಿದ್ದಾರೆ. ಆದರೆ ಭವಿಷ್ಯದಲ್ಲಿ ವಿದೇಶಿ ಟೂರ್ನಿಯಲ್ಲಿ ಹೂಡಿಕೆ ಮಾಡುವ ಕ್ರಮಗಳನ್ನು ತಡೆಯಲು ಪ್ರಯತ್ನಿಸಿದರು. ವಿದೇಶಿ ಲೀಗ್‌ಗಳಿಂದ ಐಪಿಎಲ್ ಮೌಲ್ಯ ದುರ್ಬಲಗೊಳಿಸಬಹುದು ಎಂದು ಬಿಸಿಸಿಐ ಆತಂಕವಾಗಿದೆ," ಎಂದು ತಿಳಿಸಿದರು.

ಬಿಸಿಸಿಐ ಮತ್ತು ಐಪಿಎಲ್ ಫ್ರಾಂಚೈಸಿಗಳ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಇತ್ತೀಚೆಗೆ ನೇಮಕಗೊಂಡ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಉಪಸ್ಥಿತರಿದ್ದರು.

ಇದೇ ವೇಳೆ ನಾವು ಫ್ರಾಂಚೈಸಿಗಳನ್ನು ತಡೆಯಲು ಸಾಧ್ಯವಿಲ್ಲ, ಅವರ ಕಿಟ್ಟಿನಲ್ಲಿ ಹಣವಿದೆ, ಆದ್ದರಿಂದ ಅದು ಅವರ ಆಯ್ಕೆಯಾಗಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದರು.

ಶ್ರೀಮಂತ ಕ್ರಿಕೆಟ್ ಲೀಗ್‌ನ ಬ್ರ್ಯಾಂಡ್ ಸಾಗರೋತ್ತರ ಲೀಗ್‌ಗಳಾದ್ಯಂತ ವಿಸ್ತರಿಸಿದೆ. ಟ್ರಿಂಗ್‌ಬಾಗೊ ನೈಟ್ ರೈಡರ್ಸ್, ಬಾರ್ಬಡೋಸ್ ರಾಯಲ್ಸ್ ಮತ್ತು ಸೇಂಟ್ ಲೂಸಿಯಾ ಕಿಂಗ್ಸ್ ಹೆಸರಿನಲ್ಲಿ ಫ್ರಾಂಚೈಸಿ ತಂಡಗಳು ಇವೆ. 2023ರ ಆರಂಭದಲ್ಲಿ ILT20 ಮತ್ತು SA20 ಪ್ರಾರಂಭವಾಗುವುದರೊಂದಿಗೆ ವಿಸ್ತರಣೆಯ ಪ್ರಮುಖ ಲೀಗ್‌ಗಳು ಪ್ರಾರಂಭವಾಗಲಿವೆ.

ಆದರೆ ಫ್ರಾಂಚೈಸಿಗಳ ಸಾಗರೋತ್ತರ (ವಿದೇಶಿ) ಉದ್ಯಮಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಬಿಸಿಸಿಐ ಹೊಂದಿಲ್ಲ ಎಂದು ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ.

"ನಿಜವಾಗಿಯೂ ಇತರ ಕ್ರಿಕೆಟ್ ಮಂಡಳಿಗಳು ತಮ್ಮ ಸ್ವಂತ ಲೀಗ್‌ಗಳನ್ನು ಪ್ರಾರಂಭಿಸಲು ಎಲ್ಲಾ ಹಕ್ಕಗಳನ್ನು ಹೊಂದಿವೆ. ಆದರೆ ಐಪಿಎಲ್ ಮುಂದೆ ಇರುವುದನ್ನು ನಾವು ನೋಡಬಹುದು. ಅವರಲ್ಲಿ ಕೆಲವರು (ಫ್ರಾಂಚೈಸ್ ಮಾಲೀಕರು) ಇತರ ಲೀಗ್‌ಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಅವರು ತಮ್ಮ ವ್ಯಾಪಾರ ಹಿತಾಸಕ್ತಿಗಳನ್ನು ನೋಡಿಕೊಳ್ಳಬೇಕು. ನಾವು ಅವರನ್ನು ತಡೆಯಲು ಸಾಧ್ಯವಿಲ್ಲ, ಅವರ ಕಿಟ್ಟಿನಲ್ಲಿ ಹಣವಿದೆ, ಆದ್ದರಿಂದ ಅದು ಅವರ ಆಯ್ಕೆಯಾಗಿದೆ," ಎಂದು ಐಪಿಎಲ್ ನೂತನ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದರು.

Story first published: Saturday, December 24, 2022, 18:20 [IST]
Other articles published on Dec 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+