Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಒಂದು ಐಪಿಎಲ್ ಆವೃತ್ತಿಯಲ್ಲಿ ನಡೆಯುವ ಬೆಟ್ಟಿಂಗ್ ದಂಧೆ ಎಷ್ಟು ಲಕ್ಷ ಕೋಟಿ ಗೊತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 31ರಂದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅಹಮದಾಬಾದ್‌ನ ಪ್ರಸಿದ್ಧ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲಿದೆ. ಒಂದೆಡೆ ಅಭಿಮಾನಿಗಳು ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರೆ, ಮತ್ತೊಂದೆಡೆ ಬೆಟ್ಟಿಂಗ್ ದಂಧೆ ಕೂಡ ಕದಂಬ ಬಾಹುಗಳನ್ನು ಚಾಚಲು ಸಜ್ಜಾಗಿದೆ.

ದುಬೈ ಮತ್ತು ಕರಾಚಿಯಲ್ಲಿರುವ ಅಂತರರಾಷ್ಟ್ರೀಯ ಬೆಟ್ಟಿಂಗ್ ಕಾರ್ಟೆಲ್‌ಗಳಿಗೆ ಸಂಪರ್ಕ ಹೊಂದಿರುವ ಬುಕ್‌ಮೇಕರ್‌ಗಳು ಈಗಾಗಲೇ ಮುಂಬೈ, ದೆಹಲಿ, ಅಹಮದಾಬಾದ್, ಭೋಪಾಲ್ ಮತ್ತು ಹೈದರಾಬಾದ್ ಸೇರಿದಂತೆ ಹಲವಾರು ಭಾರತೀಯ ನಗರಗಳಲ್ಲಿ ವಾಸ್ತವ್ಯ ಹೂಡಿದ್ದು, ಹಣದ ಹೊಳೆಯೇ ಹರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ಇನ್‌ಸೈಡ್‌ ಸ್ಪೋರ್ಟ್ಸ್ ವರದಿ ಮಾಡಿದೆ.

IPL 2023: IPL Season 16 Set to Begin Amidst Bookie Bonanza: Rs 600 Crore Daily Profits Expected

ಭಾರತದಲ್ಲಿ ಬೆಟ್ಟಿಂಗ್ ಜಗತ್ತಿನ ಬಗ್ಗೆ ತಿಳಿದುಕೊಂಡರೆ ನೀವು ಒಂದು ಕ್ಷಣ ಬೆಚ್ಚುವುದು ಖಂಡಿತ. ಮೂಲಗಳ ಪ್ರಕಾರ ಒಂದು ದಿನದಲ್ಲಿ, ಬುಕ್ಕಿಗಳು ಮತ್ತು ಮ್ಯಾಚ್ ಫಿಕ್ಸರ್‌ಗಳು ಕನಿಷ್ಠ 600 ಕೋಟಿ ರುಪಾಯಿ ಗಳಿಸುತ್ತಾರೆ ಎಂದು ಹೇಳಲಾಗಿದೆ. ಒಂದು ಪಂದ್ಯಕ್ಕೆ ಭಾರತದಲ್ಲಿ ಕನಿಷ್ಠ 3,500 ಕೋಟಿ ರುಪಾಯಿ ಬೆಟ್ಟಿಂಗ್ ವ್ಯವಹಾರ ನಡೆಯುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ಬೆಟ್ಟಿಂಗ್ ಕಟ್ಟುವವರಿಗೆ ಬುಕ್ಕಿಗಳು ಕೋಡ್ ನಂಬರ್ ಗಳನ್ನು ನೀಡಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಗೃಹಖಾತೆಯ ಉಸ್ತುವಾರಿಯೂ ಆಗಿರುವ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾರನ್ನು ಬ್ಲಾಕ್ ಮೇಲ್ ಮಾಡಿದ ಆರೋಪದ ಮೇರೆಗೆ ದೊಡ್ಡ ಬುಕ್ಕಿ ಮತ್ತು ಹವಾಲಾ ಆಪರೇಟರ್ ಅನಿಲ್ ಜೈಸಿಂಘಾನಿ ಎನ್ನುವನನ್ನು ಬಂಧಿಸಿದ ನಂತರ ಬೆಟ್ಟಿಂಗ್ ದಂಧೆಯ ಮತ್ತೊಂದು ಕರಾಳ ಮುಖ ಬಯಲಾಗಿದೆ.

ದೊಡ್ಡ ಬುಕ್ಕಿಗಳ ಜಾಲವನ್ನು ಗುರುತಿಸಿರುವ ಪೊಲೀಸರು.

ಮುಂಬೈ ಪೊಲೀಸ್ ಅಪರಾಧ ವಿಭಾಗವು 18 ಕ್ರಿಕೆಟ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು 60 ಬುಕ್‌ಮೇಕರ್‌ಗಳ ಜಾಲವನ್ನು ಕಂಡುಹಿಡಿದಿದೆ, ಅವರು ಐಪಿಎಲ್ ಆಟಗಳಲ್ಲಿ ಬೆಟ್ಟಿಂಗ್‌ ಅನ್ನು ಸ್ವೀಕರಿಸುತ್ತಾರೆ. ಕಳೆದ ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಟಿ20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ದಾದರ್ ಹೋಟೆಲ್‌ನಲ್ಲಿ ದಾಳಿ ನಡೆಸಿದಾಗ, ಮುಂಬೈ ಪೊಲೀಸರ ಆಂಟಿ ಎಕ್ಸ್‌ಟಾರ್ಶನ್ ಸೆಲ್ (ಎಇಸಿ) ಅಂತರರಾಜ್ಯ ಇಂಟರ್ನೆಟ್ ಬೆಟ್ಟಿಂಗ್ ಜಾಲವನ್ನು ಕಂಡುಹಿಡಿದಿತ್ತು.

IPL 2023: IPL Season 16 Set to Begin Amidst Bookie Bonanza: Rs 600 Crore Daily Profits Expected

ಐವರು ಬುಕ್ಕಿಗಳನ್ನು ಬಂಧಿಸಿದ ನಂತರ, 18 ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಮಾಹಿತಿ ಸಿಕ್ಕಿದೆ. ಬಂಧನಕ್ಕೊಳಗಾದ ಆರು ಬುಕ್ಕಿಗಳನ್ನು ಆಂಟನಿ ಡಯಾಸ್, ಇಮ್ರಾನ್ ಖಾನ್, ಧರ್ಮೇಶ್ ಶಿವದಾಸನಿ, ಧರ್ಮೇಶ್ ವೋರಾ ಮತ್ತು ಗೌರವ್ ಶಿವದಾಸನಿ ಎಂದು ಗುರುತಿಸಲಾಗಿದೆ. ಮುಂಬೈ ಮತ್ತು ಥಾಣೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ 60 ಬುಕ್‌ಮೇಕರ್‌ಗಳು ಮತ್ತು ದುಬೈ ಮೂಲದ ವಿಶ್ವದಾದ್ಯಂತ ಕ್ರಿಕೆಟ್ ಬೆಟ್ಟಿಂಗ್ ಸಿಂಡಿಕೇಟ್‌ನ ಜಾಲದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

ಲಕ್ಷಾಂತರ ಕೋಟಿಯ ವ್ಯವಹಾರ

"ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವಹಿವಾಟು ಮಹಾರಾಷ್ಟ್ರ ರಾಜ್ಯ ಬಜೆಟ್‌ಗಿಂತ ದೊಡ್ಡದಾಗಿದೆ. ಆರು, ಹತ್ತು ಮತ್ತು 20 ಓವರ್‌ಗಳ ಪ್ರತಿ ಸೆಷನ್ ಐಪಿಎಲ್ 2023 ರ ಸೀಸನ್ 16 ರಲ್ಲಿ 10 ಭಾಗವಹಿಸುವ ತಂಡಗಳ ನಡುವೆ 74 ಪಂದ್ಯಗಳು ನಡೆಯಲಿವೆ, ಪ್ರತಿ ಪಂದ್ಯಕ್ಕೆ 3,500 ಕೋಟಿ ರುಪಾಯಿ ಬೆಟ್ಟಿಂಗ್ ನಡೆಯುತ್ತದೆ" ಎಂದು ಮಾಜಿ ಕ್ರಿಕೆಟ್ ನಿರ್ವಾಹಕರು ತಿಳಿಸಿದ್ದಾರೆ.

ಪಂದ್ಯದ ಗೆಲುವು ಮತ್ತು ಸೋಲಿನ ಫಲಿತಾಂಶಗಳಿಂದ ಹಿಡಿದು ಅತ್ಯಧಿಕ ಸ್ಕೋರ್‌ಗಳು, ಬೌಂಡರಿಗಳು, ವಿಕೆಟ್‌ಗಳವರೆಗೆ ಪ್ರತಿಯೊಂದಕ್ಕೂ ಬೆಟ್ಟಿಂಗ್ ಕಟ್ಟಲಾಗುತ್ತದೆ. ಬೆಟ್ಟಿಂಗ್ ದರಗಳನ್ನು ಪಾಕಿಸ್ತಾನದಿಂದ ದುಬೈಗೆ, ನಂತರ ಭಾರತಕ್ಕೆ ಮತ್ತು ಇತರ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತದೆ, ಕ್ರಿಕೆಟ್ ಬೆಟ್ಟಿಂಗ್ ಸಿಂಡಿಕೇಟ್‌ನ ವಿವಿಧ ಸದಸ್ಯರು ತಮ್ಮ ಸೂಚನೆಗಳನ್ನು ಅನುಸರಿಸುವಂತೆ ಡಿ ಕಂಪನಿಯಿಂದ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.

ಬೆಟ್ ಭಾಯ್ ಬುಕ್, ಬೆಟ್ ಎಕ್ಸ್‌ಚೇಂಜ್, ಮ್ಯಾಟ್ರಿಕ್ಸ್, ಡೈಮಂಡ್ ಮತ್ತು ಬೆಟ್999 ಕೆಲವು ಪ್ರಸಿದ್ಧ ಮೊಬೈಲ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಮೇಲೆ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಕಣ್ಣಿಟ್ಟಿವೆ. ಭಾರತದ ಬೆಟ್ಟಿಂಗ್ ವಲಯವು 130 ಶತಕೋಟಿ ಡಾಲರ್ (10 ಲಕ್ಷ ಕೋಟಿ ರುಪಾಯಿ) ಮೌಲ್ಯದ್ದಾಗಿದೆ ಎಂದು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಸ್ಪೋರ್ಟ್ಸ್ ಸೆಕ್ಯುರಿಟಿ ಅಂದಾಜಿಸಿದೆ.

Story first published: Thursday, March 30, 2023, 9:35 [IST]
Other articles published on Mar 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+