Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: RCBಯಿಂದ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಬಿದ್ದ ಆಸ್ಟ್ರೇಲಿಯಾದ ಬೌಲರ್ ಜೇಸನ್‌ ಬೆಹ್ರೆಂಡೋರ್ಫ್‌

Jason Behrendorff

ಐಪಿಎಲ್ 2022ರ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಕ್ವಾಡ್‌ನಲ್ಲಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಜೇಸನ್‌ ಬೆಹ್ರೆಂಡೋರ್ಫ್‌ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಬಿದ್ದಿದ್ದಾರೆ.

ಮುಂದಿನ ಸೀಸನ್‌ನ ಆಟಗಾರರ ಹರಾಜು ಪ್ರಕ್ರಿಯೆಗೂ ಮುನ್ನ ಪ್ರಾಂಚೈಸಿಗಳು ರೀಟೈನ್ ಮಾಡಿಕೊಂಡ ಹಾಗೂ ರಿಲೀಸ್ ಮಾಡಿದ ಆಟಗಾರರನ್ನು ನವೆಂಬರ್ 15ರೊಳಗೆ ಅಂತಿಮಗೊಳಿಸಬೇಕಿದೆ. ಅಂತೆಯೇ ಆರ್‌ಸಿಬಿ ಮತ್ತು ಮುಂಬೈ ನಡುವೆ ನಡೆದ ವ್ಯಾಪಾರದಲ್ಲಿ ಜೇಸನ್‌ ಬೆಹ್ರೆಂಡೋರ್ಫ್‌ ಮುಂಬೈ ಇಂಡಿಯನ್ಸ್‌ ಸ್ಕ್ವಾಡ್ ಸೇರಿದ್ದಾರೆ.

ಐಪಿಎಲ್‌ 2022ರ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ಜೇಸನ್‌ ಬೆಹ್ರೆಂಡೋರ್ಫ್‌ರನ್ನ ಮೂಲ ಬೆಲೆ 75 ಲಕ್ಷ ರೂಪಾಯಿಗೆ ಖರೀದಿಸಿತ್ತು. ಇದಕ್ಕೂ ಮುನ್ನ 2021ರ ಸೀಸನ್‌ನಲ್ಲಿ ಬೆಹ್ರೆಂಡೋರ್ಫ್‌ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.

ಆಸ್ಟ್ರೇಲಿಯಾದ ಈ ಎಡಗೈ ವೇಗಿ ಇದುವರೆಗೆ 9 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಇವರ ಬೆಸ್ಟ್ ಬೌಲಿಂಗ್ 4/21 ಆಗಿದೆ.

2018ರಲ್ಲಿ ಮುಂಬೈ ಇಂಡಿಯನ್ಸ್ ಪರ 5 ಪಂದ್ಯಗಳನ್ನ ಆಡಿದ್ದ ಜೇಸನ್ ಹಿಂದಿರುಗಿ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಬಿದ್ದಿದ್ದು, ಟಾಟಾ ಐಪಿಎಲ್ 2023ರ ಸೀಸನ್‌ನಲ್ಲಿ ಬ್ಲ್ಯೂ ಜೆರ್ಸಿ ತೊಡಲಿದ್ದಾರೆ.

Story first published: Saturday, November 12, 2022, 20:10 [IST]
Other articles published on Nov 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+