Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jio Cinema : ಆರ್‌ಸಿಬಿ Vs ಸಿಎಸ್‌ಕೆ ಪಂದ್ಯ ನೋಡಲು ಮುಗಿಬಿದ್ದ ಜನ: ಎಲ್ಲಾ ದಾಖಲೆಗಳು ಧೂಳಿಪಟ!

ಏಪ್ರಿಲ್ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2023ರ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ. ಇಡೀ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರೆ, ಜಿಯೋ ಸಿನಿಮಾದಲ್ಲಿ ಕೂಡ ವೀಕ್ಷಕರ ಸಂಖ್ಯೆ ಹೊಸ ದಾಖಲೆ ಬರೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯವು ಜಿಯೋಸಿನಿಮಾದಲ್ಲಿ ಅತಿ ಹೆಚ್ಚು ಏಕಕಾಲೀನ ವೀಕ್ಷಕರ ಸಂಖ್ಯೆ 2.4 ಕೋಟಿ ತಲುಪುವ ಮೂಲಕ ಎಲ್ಲಾ ದಾಖಲೆಗಳನ್ನು ಮುರಿದಿದೆ. "ಪಂದ್ಯದ ಎರಡನೇ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಜಿಯೋ ಸಿನಿಮಾ ವೀಕ್ಷಕರ ಸಂಖ್ಯೆ 2.4 ಕೋಟಿಗೆ ತಲುಪಿದೆ." ಎಂದು ಜಿಯೋಸಿನಿಮಾ ಹೇಳಿಕೆಯಲ್ಲಿ ತಿಳಿಸಿದೆ.

Jio Cinema Viewership

ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಮಾಡುವ ವೇಳೆ ಜಿಯೋ ಸಿನಿಮಾ ವೀಕ್ಷಕರ ಸಂಖ್ಯೆ 2.2 ಕೋಟಿ ತಲುಪಿದ್ದು ದಾಖಲೆಯಾಗಿತ್ತು. ಸೌಥರ್ನ್ ಡರ್ಬಿ ಎಂದೇ ಕರೆಯುವ ಆರ್‌ಸಿಬಿ ಸಿಎಸ್‌ಕೆ ನಡುವಿನ ಪಂದ್ಯದ ಮೇಲೆ ಸಾಕಷ್ಟು ಕುತೂಹಲವಿದ್ದ ಕಾರಣ ದಾಖಲೆಯ ವೀಕ್ಷಕರ ಸಂಖ್ಯೆ ಮುಟ್ಟಿದೆ. ಈ ಪಂದ್ಯದಲ್ಲಿ ಸಿಎಸ್‌ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ರನ್‌ಗಳ ರೋಚಕ ಗೆಲುವು ಸಾಧಿಸಿತು.

Jio Cinema Viewership

ಭರ್ಜರಿ ಯಶಸ್ಸು ಕಂಡ ಜಿಯೋ ಸಿನಿಮಾ

ಮುಕೇಶ್ ಅಂಬಾನಿ ಒಡೆತನ ವಯಾಕಾಮ್ 18 ಬರೋಬ್ಬರಿ 20500 ಕೋಟಿ ರುಪಾಯಿ ನೀಡಿ ಮುಂದಿನ 5 ವರ್ಷಗಳವರೆಗೆ ಐಪಿಎಲ್‌ ನೇರಪ್ರಸಾರ ಡಿಜಿಟಲ್ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಮೊದಲ ಆವೃತ್ತಿಯಲ್ಲೇ ದಾಖಲೆಯ ವೀಕ್ಷಕರನ್ನು ಗಳಿಸಿಕೊಳ್ಳುವ ಮೂಲಕ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿ ವೀಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈ ಮೊದಲು ಐಪಿಎಲ್‌ ಡಿಜಿಟಲ್ ಸ್ಟ್ರೀಮಿಂಗ್ ಮಾಡುತ್ತಿದ್ದ ಡಿಸ್ನಿ+ಹಾಟ್‌ಸ್ಟಾರ್ ಗಿಂತ ಜಿಯೋ ಸಿನಿಮಾ ಹೆಚ್ಚಿನ ವೀಕ್ಷಕರನ್ನು ಹೊಂದಿದೆ. ಐಪಿಎಲ್ 2023ರ ಆವೃತ್ತಿಯ ಆರಂಭಿಕ ಪಂದ್ಯಗಳೇ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾದ ಪ್ಲೇ ಆಫ್, ಫೈನಲ್ ಪಂದ್ಯಗಳಿಗಿಂತ ಹೆಚ್ಚಿನ ವೀಕ್ಷಣೆ ಕಂಡಿದೆ. 2019ರ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯವನ್ನು 1.86 ಕೋಟಿ ಜನ ವೀಕ್ಷಿಸಿದ್ದು ದಾಖಲೆಯಾಗಿದೆ.

ಐಪಿಎಲ್ ಬಳಿಕ ಶುಲ್ಕ ನಿಗದಿ!

ಪ್ರತಿ ದಿನ ಲಕ್ಷಾಂತರ ಜನ ಜಿಯೋ ಸಿನಿಮಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ದಿನವೂ ಲಕ್ಷಾಂತರ ಹೊಸ ವೀಕ್ಷಕರು ಸೇರ್ಪಡೆಯಾಗುತ್ತಿದ್ದಾರೆ. ಸದ್ಯ ಜಿಯೋ ಸಿನಿಮಾ ಎಲ್ಲರಿಗೂ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ. ಈ ಬಾರಿಯ ಐಪಿಎಲ್‌ ಆವೃತ್ತಿಯನ್ನು ಸಂಪೂರ್ಣವಾಗಿ ಉಚಿತವಾಗಿ ವೀಕ್ಷಿಸಬಹುದು, ಆದರೆ ಐಪಿಎಲ್ ಮುಕ್ತಾಯದ ನಂತರ ಜಿಯೋ ಸಿನಿಮಾ ವೀಕ್ಷಿಸಲು ದುಡ್ಡು ನೀಡಬೇಕಾಗುತ್ತದೆ.

ಐಪಿಎಲ್ 2023ರ ಫೈನಲ್ ಪಂದ್ಯದ ಬಳಿಕ ವೀಕ್ಷಕರಿಗೆ ಶುಲ್ಕ ವಿಧಿಸಲು ಜಿಯೋ ಸಿನಿಮಾ ಸಜ್ಜಾಗುತ್ತಿದೆ. ಈಗಾಗಲೇ ಈ ಬಗ್ಗೆ ಜಿಯೋ ಸಿನಿಮಾ ವೈಯಾಕಾಂ 18ನ ಮಾಧ್ಯಮ ಮತ್ತು ವಿಷಯ ವ್ಯವಹಾರದ ಅಧ್ಯಕ್ಷರಾದ ಜ್ಯೋತಿ ದೇಶಪಾಂಡೆ ಬ್ಲೂಮ್‌ಬರ್ಗ್‌ಗೆ ಮುನ್ಸೂಚನೆ ನೀಡಿದ್ದಾರೆ. ಆದರೂ, ಇತರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಡಿಸ್ನಿ+ಹಾಟ್‌ಸ್ಟಾರ್, ಸೋನಿ ಲಿವ್, ಅಮೇಜಾನ್ ಪ್ರೈಮ್‌ಗಿಂತ ಕಡಿಮೆ ಶುಲ್ಕ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಆದರೆ ಅಲ್ಲಿಯವರೆಗೂ ಕ್ರಿಕೆಟ್ ಅಭಿಮಾನಿಗಳು ಮಾತ್ರ ಉಚಿತವಾಗಿ ಭರ್ಜರಿ ಮನರಂಜನೆ ಪಡೆಯಬಹುದು.

Story first published: Tuesday, April 18, 2023, 12:59 [IST]
Other articles published on Apr 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+