For Quick Alerts
ALLOW NOTIFICATIONS  
For Daily Alerts
 

IPL 2023: ಈ ಬಾರಿಯ ಐಪಿಎಲ್‌ನಲ್ಲಿ ನಿಮಗೆ ಗೊತ್ತಿಲ್ಲದ 5 ಕುತೂಹಲಕಾರಿ ಸಂಗತಿಗಳು ಇವು!

IPL 2023: Know Facts about 2023 season of the Indian Premier League in Kannada

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರತಿ ಆವೃತ್ತಿಯಲ್ಲಿಯೂ ಅಭಿಮಾನಿಗಳಿಗೆ ಮನರಂಜನೆಯನ್ನು ಹೆಚ್ಚಿಸುತ್ತಲೇ ಇರುವ ಈ ಮೆಗಾ ಟೂರ್ನಿ ಈಗ 16ನೇ ಆವೃತ್ತಿಗೆ ಸಜ್ಜಾಗಿದೆ. ಮಾರ್ಚ್ 31ರಿಂದ ಈ ಬಾರಿಯ ಐಪಿಎಲ್ ಆವೃತ್ತಿ ಆರಂಭವಾಗುತ್ತಿದ್ದು ಒಟ್ಟು 10 ತಂಡಗಳು ಸೆಣೆಸಾಟ ನಡೆಸಲು ಸಜ್ಜಾಗಿದೆ.

ಇನ್ನು ಈ ಬಾರಿಯೂ ಐಪಿಎಲ್ ಹಲವು ವಿಶೇಷತೆಗಳೊಂದಿಗೆ ಅಭಿಮಾನಿಗಳನ್ನು ಮನರಂಜಿಸಲಿದೆ. ಕೊರೊನಾವೈರಸ್ ಬಳಿಕ ಎಲ್ಲಾ ಫ್ರಾಂಚೈಸಿಗಳು ಕೂಡ ತವರಿನ ಅಂಗಳದಲ್ಲಿ ಆಡಲು ಸಿದ್ಧತೆಗಳು ನಡೆಯುತ್ತಿದೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಇರಲಿದ್ದು ಆ ಪೈಕಿ ಐದು ಪ್ರಮುಖ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ

ಒಂದೇ ಫ್ರಾಂಚೈಸಿ ಪರವಾಗಿ ಆಡಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ
ಐಪಿಎಲ್ 16ನೇ ಆವೃತ್ತಿಗೆ ಸಿದ್ಧವಾಗಿದೆ. ಟೂರ್ನಿ ಆರಂಭಿಕ ಆವೃತ್ತಿಯಿಂದ ಆಡುತ್ತಿರುವ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಯಾರೂ ಮಾಡದ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ ಮೊದಲ ಆವೃತ್ತಿಯಿಂದ ಆಡಿರುವ ಆಟಗಾರರ ಪೈಕಿ ಒಂದೇ ಫ್ರಾಂಚೈಸಿ ಪರವಾಗಿ ಆಡುತ್ತಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಮೊದಲ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪಾಲಾಗಿದ್ದ ಕೊಹ್ಲಿ ಈಬಾರಿ ಆರ್‌ಸಿಬಿ ಪರವಾಗಿ 16ನೇ ಬಾರಿಗೆ ಕಣಕ್ಕಿಳಿಯಲಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ದುಬಾರಿ ಮೊತ್ತಕ್ಕೆ ಬಿಡ್ ಆದ ಸ್ಯಾಮ್ ಕರನ್
ಇನ್ನು ಈ ಬಾರಿಯ ಐಪಿಎಲ್‌ಗೂ ಮುನ್ನ ನಡೆದ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಯುವ ಆಟಗಾರ ಸ್ಯಾಮ್ ಕರನ್ ಹೊಸ ದಾಖಲೆ ಬರೆದಿದ್ದಾರೆ. 18.50 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗುವ ಮೂಲಕ ಸ್ಯಾಮ್ ಕರನ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಗುವಾಹಟಿಯಲ್ಲಿ ಐಪಿಎಲ್ ಪಂದ್ಯ
ಇದೇ ಮೊದಲ ಬಾರಿಗೆ ಐಪಿಎಲ್ ಭಾರತದ ಈಶಾನ್ಯ ರಾಜ್ಯವೊಂದರಲ್ಲಿ ನಡೆಯಲಿದೆ. ಅಸ್ಸಾಂನ ಗುವಾಹಟಿಯ ಬರ್ಸಾಪುರ ಸ್ಟೇಡಿಯಂನಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯ ನಡೆಯಲಿದೆ. ಈ ತಾಣವನ್ನು ರಾಜಸ್ಥಾನ್ ರಾಯಲ್ಸ್ ತಂಡದ ತವರಿನ ಮೈದಾನ ಎಂದು ಗುರುತಿಸಲಾಗಿದ್ದು ಆರ್‌ಆರ್ ತಂಡ ಎರಡು ತವರು ಅಂಗಳದಲ್ಲಿ ಆಡಿದಂತಾಗುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡದ ಎರಡು 'ಹೋಮ್' ಪಂದ್ಯಗಳು ಗುವಾಹಟಿಯಲ್ಲಿ ನಡೆಯಲಿದ್ದು ಉಳಿದ ತವರಿನ ಪಂದ್ಯಗಳು ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿಯೇ ಆಯೋಜನೆಯಾಗಲಿದೆ

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಭರ್ಜರಿ ಗೆಲುವಿನಿಂದಿಗೆ 2ನೇ ಸುತ್ತಿಗೆ ಪ್ರವೇಶಿಸಿದ ನಿಖತ್ ಝರೀನ್
ಗುಂಪು ವಿಭಾಗದಲ್ಲಿ ಬದಲಾವಣೆ
ಇನ್ನು ಕಳೆದ ಬಾರಿಯ ಆವೃತ್ತಿಯ ಬಳಿಕ ಒಟ್ಟು 10 ತಂಡಗಳು ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿದ್ದು ತಲಾ ಐದು ತಂಡಗಳ ಎರಡು ಗುಂಪುಗಳಾಗಿ ವಿಭಜಿಸಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಕಳೆದ ಬಾರಿಯ ಆವೃತ್ತಿಯಲ್ಲಿ ಒಂದು ಗುಂಪಿನಲ್ಲಿರುವ ತಂಡಗಳು ಆಯಾ ಗುಂಪಿನಲ್ಲಿರುವ ಇತರ ತಂಡಗಳ ಜೊತೆಗೆ ತಲಾ ಎರಡು ಪಂದ್ಯಗಳನ್ನು ಆಡಿದರೆ ಮತ್ತೊಂದು ಗುಂಪಿನ ತಂಡಗಳ ಜೊತೆಗೆ ತಲಾ ಒಂದೊಂದು ಪಂದ್ಯಗಳನ್ನು ಆಡಬೇಕಾಗಿತ್ತು. ಆದರೆ ಈ ಬಾರಿ ಅದರಲ್ಲಿ ಬದಲಾವಣೆ ಮಾಡಲಾಗಿದೆ. ಈ ಆವೃತ್ತಿಯಲ್ಲಿ ತಮ್ಮ ಗುಂಪಿನಲ್ಲಿರುವ ತಂಡಗಳ ಜೊತೆಗೆ ತಲಾ ಒಂದು ಪಂದ್ಯವನ್ನು ಮಾತ್ರವೇ ಆಡಲಿದ್ದು ತ್ತೊಂದು ಗುಂಪಿನ ತಂಡಗಳ ಜೊತೆಗೆ ಎರಡು ಪಂದ್ಯಗಳನ್ನು ಆಡಲಾಗುತ್ತದೆ.

ಕೋವಿಡ್ ಬಳಿಕ ಮೊದಲ ಹೋಮ್-ಅವೇ ಪಂದ್ಯಗಳು
ಇನ್ನು 2019ರ ಐಪಿಎಲ್ ಬಳಿಕ ಕೊರೊನಾ ವೈರಸ್ ಕಾರಣದಿಂದಾಗಿ ಇತರ ಎಲ್ಲಾ ಕ್ಷೇತ್ರಗಳಂತೆಯೇ ಕ್ರೀಡಾ ಕ್ಷೇತ್ರ ಕೂಡ ಸಾಷ್ಟು ದೊಡ್ಡ ಮಟ್ಟದ ಹಿನ್ನಡೆ ಅನುಭವಿಸಿತು. ಈ ಸಂದರ್ಭದಲ್ಲಿ ಐಪಿಎಲ್ ಟೂರ್ನಿಯನ್ನು ಭಾರತದ ಹೊರಗೆ ನಡೆಸಬೇಕಾದ ಅನಿವಾರ್ಯತೆಯೂ ಉಂಟಾಗುತ್ತು. ಕಳೆದ ವರ್ಷ ಭಾರತದಲ್ಲಿಯೇ ಐಪಿಎಲ್ ಟೂರ್ನಿ ಆಯೋಜನೆಯಾಗಿದ್ದರು ಕೂಡ ಮಹಾರಾಷ್ಟ್ರದಲ್ಲಿಯೇ ಎಲ್ಲಾ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಇದೀಗ ಕೊರೊನಾವೈರಸ್‌ನ ಬಳಿಕ ನಾಲ್ಕು ವರ್ಷಗಳ ನಂತರ ಐಪಿಎಲ್ ತನ್ನ ಸಾಂಪ್ರದಾಯಿಕ ರೀತಿಯಲ್ಲಿ ಹೋಮ್ ಹಾಗೂ ಅವೇ ಮಾದರಿಯಲ್ಲಿ ಟೂರ್ನಿಯಲ್ಲಿ ಆಯೋಜನೆ ಮಾಡಲಿದೆ. ಇದು ಕೂಡ ಈ ಬಾರಿಯ ಐಪಿಎಲ್‌ನ ವಿಶೇಷತೆಯಾಗಿದೆ.

Story first published: Friday, March 17, 2023, 18:41 [IST]
Other articles published on Mar 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+