IPL 2023: ವರುಣ್ ಚಕ್ರವರ್ತಿ, ಸುಯಶ್ ಮಾರಕ ಬೌಲಿಂಗ್‌ಗೆ ತತ್ತರಿಸಿದ ಆರ್‌ಸಿಬಿ; ಕೆಕೆಆರ್‌ಗೆ ಮೊದಲ ಗೆಲುವು
ಗುರುವಾರ, ಏಪ್ರಿಲ್ 6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ 2023ರ ಐಪಿಎಲ್‌ನ 9ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿದ್ದ 205 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಓವರ್‌ಗಳಲ್ಲಿ 123 ರನ್ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ 81 ರನ್‌ಗಳ ಹೀನಾಯ ಸೋಲು ಅನುಭವಿಸಿತು. 2023ರ ಐಪಿಎಲ್ ಪಂದ್ಯಾವಳಿಯಲ್ಲಿ ಕೆಕೆಆರ್ ತಂಡ ಗೆಲುವಿನ ಖಾತೆ ತೆರೆದರೆ, ಆರ್‌ಸಿಬಿ ತಂಡ ಮೊದಲ ಸೋಲು ಕಂಡಿತು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ನಿರುತ್ತರರಾದರು. ಯಾವೊಬ್ಬ ಬ್ಯಾಟ್ಸ್‌ಮನ್‌ಗಳು 30 ರನ್ ಗಳಿಸಲಿಲ್ಲ. ವಿರಾಟ್ ಕೊಹ್ಲಿ ಬೀಳುತ್ತಿದ್ದಂತೆಯೇ ಒಬ್ಬರ ಹಿಂದೆ ಒಬ್ಬರು ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್‌ಗೆ ಹಿಂದಿರುಗಿದರು.
ಆರ್‌ಸಿಬಿ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಉತ್ತಮ ಆರಂಭ ನೀಡಿದರು. 4.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟವಾಡಿದರು. 18 ಎಸೆತಗಳಲ್ಲಿ 3 ಬೌಂಡರಿಗಳ ಸಮೇತ 21 ರನ್ ಗಳಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿ ಸುನಿಲ್ ನರೈನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

ನಂತರದ ಓವರ್‌ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ 12 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 23 ರನ್ ಗಳಿಸಿದ್ದಾಗ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ನಂತರ ಕ್ರೀಸ್‌ಗೆ ಬಂದ ಮೈಕಲ್ ಬ್ರೆಸ್‌ವೆಲ್ 18 ಎಸೆತಗಳಲ್ಲಿ 19 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 5 ರನ್, ಹರ್ಷಲ್ ಪಟೇಲ್ 0, ಶಹಬಾಜ್ ಅಹ್ಮದ್ 1 ರನ್, ದಿನೇಶ್ ಕಾರ್ತಿಕ್ 9 ರನ್, ಅನುಜ್ ರಾವತ್ 1 ರನ್, ಡೇವಿಡ್ ವಿಲ್ಲಿ 20 ಎಸೆತಗಳಲ್ಲಿ 20 ರನ್, ಕರ್ಣ್ ಶರ್ಮಾ 1 ರನ್, ಆಕಾಶ್ ದೀಪ್ 17 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಕೆಕೆಆರ್ ತಂಡದ ಪರ ವರುಣ್ ಚಕ್ರವರ್ತಿ 3.4 ಓವರ್‌ಗಳಲ್ಲಿ 15 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಸುಯಶ್ ಶರ್ಮಾ 4 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರೆ, ಸುನಿಲ್ ನರೈನ್ 4 ಓವರ್‌ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ 2 ಓವರ್‌ಗಳಲ್ಲಿ 15 ರನ್ ನೀಡಿ 1 ವಿಕೆಟ್ ಪಡೆದರು.
ಈ ಪಂದ್ಯದ ನಂತರ ಆರ್‌ಸಿಬಿ ಆಡಿದ ಎರಡು ಪಂದ್ಯಗಳಲ್ಲಿ 1 ಗೆಲುವು ಮತ್ತು 1 ಸೋಲಿನ ಮೂಲಕ 2 ಅಂಕ ಗಳಿಸಿ 2023ರ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು. ಇನ್ನು ಕೆಕೆಆರ್ ಆಡಿದ ಎರಡು ಪಂದ್ಯಗಳಲ್ಲಿ ಒಂದು ಸೋಲು ಮತ್ತು ಒಂದು ಗೆಲುವಿನ ಮೂಲಕ 2 ಅಂಕ ಗಳಿಸಿ, ಪಾಯಿಂಟ್ ಪಟ್ಟಿಯಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ 3ನೇ ಸ್ಥಾನಕ್ಕೆ ಏರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications