IPL 2023: ಬುಮ್ರಾ ಅಲ್ಲ, ರಶೀದ್ ಖಾನ್ ಅಲ್ಲ; ಈತ ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್; ಸುರೇಶ್ ರೈನಾ

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಸದ್ಯ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಅದರ ನಂತರ ಪುರುಷರ ಐಪಿಎಲ್ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಈ 10 ತಂಡಗಳು ತವರು ಮೈದಾನ ಸೇರಿದಂತೆ 12 ಮೈದಾನಗಳಲ್ಲಿ ಪಂದ್ಯಗಳನ್ನು ಆಡಲಿವೆ.
ಇದೀಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆಗಿ ಶ್ರೀಲಂಕಾದ ಲಸಿತ್ ಮಾಲಿಂಗ ಅವರನ್ನು ಆಯ್ಕೆ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ಬ್ಯಾಟ್ಸ್‌ಮನ್ ಕೂಡ ಆಗಿರುವ ಸುರೇಶ್ ರೈನಾ, ಮುಂಬೈ ಇಂಡಿಯನ್ಸ್ ತಂಡದ ಮಾಜಿ ಬೌಲರ್ ಲಸಿತ್ ಮಾಲಿಂಗ ಅವರನ್ನು ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎಂದು ತಿಳಿಸಿದ್ದಾರೆ.
ಇತ್ತೀಚಿನ ಸಂವಾದದಲ್ಲಿ ಸುರೇಶ್ ರೈನಾ ಅವರಿಗೆ ತಮ್ಮ ಆಯ್ಕೆಯನ್ನು ಹೆಸರಿಸಲು ಕೇಳಲಾಯಿತು. ಈ ವೇಳೆ ಸುರೇಶ್ ರೈನಾ ಅವರು ಜಸ್ಪ್ರೀತ್ ಬುಮ್ರಾ, ಸುನಿಲ್ ನರೈನ್, ರಶೀದ್ ಖಾನ್ ಮತ್ತು ಡಿಜೆ ಬ್ರಾವೋ ಸ್ಟಾರ್ ಬೌಲರ್‌ಗಳ ನಡುವೆ ಪ್ರಸಿದ್ಧ ಶ್ರೀಲಂಕಾದ ವೇಗಿಯನ್ನು ಆಯ್ಕೆ ಮಾಡಿದ್ದಾರೆ.
ಲಸಿತ್ ಮಾಲಿಂಗ 122 ಐಪಿಎಲ್ ಪಂದ್ಯಗಳಲ್ಲಿ 170 ವಿಕೆಟ್‌ಗಳೊಂದಿಗೆ ಸ್ಪರ್ಧೆಯಲ್ಲಿ ಸಿಎಸ್‌ಕೆ ತಂಡದ ಡ್ವೇನ್ ಬ್ರಾವೋ ನಂತರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
2019ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಲಸಿತ್ ಮಾಲಿಂಗ ತಮ್ಮ ಅಂತಿಮ ಐಪಿಎಲ್ ಪಂದ್ಯವನ್ನು ಆಡಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ ಅವರ ಅಂಕಿಅಂಶವು ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ಸುರೇಶ್ ರೈನಾ ಸಮರ್ಥನೆ ನೀಡಿದ್ದಾರೆ.

"ಲಸಿತ್ ಮಾಲಿಂಗ ಬೌಲಿಂಗ್ ಮಾಡಿದ ಶೈಲಿಯಿಂದಾಗಿ ಮತ್ತು ಅಂತಹ ಕಠಿಣ ಕ್ರಮದೊಂದಿಗೆ ಕೆಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ ಎಂಬುದನ್ನು ಮರೆಯಬಾರದು," ಎಂದು ಸುರೇಶ್ ರೈನಾ ತಿಳಿಸಿದರು.
"ಅಲ್ಲದೇ, ಹಲವು ವರ್ಷಗಳ ಕಾಲ ಶ್ರೀಲಂಕಾ ತಂಡದ ಪ್ರಮುಖ ಬೌಲರ್ ಆಗಿದ್ದರು. 2014ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಪ್ರಶಸ್ತಿ ಗೆದ್ದಾಗ ನಾಯಕತ್ವ ವಹಿಸಿದ್ದರು. ಲಸಿತ್ ಮಾಲಿಂಗ ತಂಡಕ್ಕೆ ಉತ್ತಮ ಗುಣಮಟ್ಟವನ್ನು ತರುತ್ತಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಸುಧಾರಣೆಯಲ್ಲಿ ಹೆಚ್ಚಿನ ಕ್ರೆಡಿಟ್ ಲಸಿತ್ ಮಾಲಿಂಗ ಅವರಿಗೆ ಸಲ್ಲುತ್ತದೆ," ಎಂದು ಸುರೇಶ್ ರೈನಾ ಜಿಯೋ ಸಿನಿಮಾದಲ್ಲಿ ಅಭಿಪ್ರಾಯಪಟ್ಟರು.
ಸುರೇಶ್ ರೈನಾ ಅವರ ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆಯ್ಕೆಗೆ ಮಾಜಿ ಸಹ ಆಟಗಾರರಾದ ಆರ್‌ಪಿ ಸಿಂಗ್, ರಾಬಿನ್ ಉತ್ತಪ್ಪ ಮತ್ತು ಪಾರ್ಥಿವ್ ಪಟೇಲ್ ಒಪ್ಪಿಕೊಂಡರೆ, ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರು ಹರ್ಭಜನ್ ಸಿಂಗ್ ಅವರನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಬೌಲರ್ ಎಂದು ಶ್ಲಾಘಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications