IPL 2023 Prize Winners: ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲಾ ಪ್ರಶಸ್ತಿ ವಿಜೇತರ ಪಟ್ಟಿ
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವು ರೋಮಾಂಚಕ ಪಂದ್ಯಾವಳಿಯು ಎರಡು ತಿಂಗಳ ಬಳಿಕ ತೆರೆ ಕಂಡಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಡಿಎಲ್ಎಸ್ ವಿಧಾನದ ಪ್ರಕಾರ, 6 ವಿಕೆಟ್‌ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ನೂತನ ಚಾಂಪಿಯನ್ ಆಯಿತು.
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಪ್ರಶಸ್ತಿಯನ್ನು ಎತ್ತುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನು ಸಮಬಲಗೊಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹಳೆಯ ವೈಭವವನ್ನು ಮರು ಸ್ಥಾಪಿಸಿತು. ಇನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತವರಿನಲ್ಲಿಯೇ ಮುಖಭಂಗ ಅನುಭವಿಸಿತು.

ಆರೆಂಜ್ ಕ್ಯಾಪ್ ವಿಜೇತ ಶುಭ್ಮನ್ ಗಿಲ್ ಮತ್ತು ಪರ್ಪಲ್ ಕ್ಯಾಪ್ ವಿಜೇತ ಮೊಹಮ್ಮದ್ ಶಮಿ ಗುಜರಾತ್ ಟೈಟನ್ಸ್ ತಂಡದಲ್ಲಿದ್ದರೂ ರನ್ನರ್ ಅಪ್ ಆಗಿ ಮಾತ್ರ ಋತುವನ್ನು ಮುಕ್ತಾಯಗೊಳಿಸಿತು. ಪಂದ್ಯಾವಳಿಯುದ್ದಕ್ಕೂ ತಮ್ಮ ಸಂಪೂರ್ಣ ಶ್ರೇಷ್ಠ ಆಟ ಪ್ರದರ್ಶಿಸಿದ ಶುಭ್ಮನ್ ಗಿಲ್ ಮತ್ತು ಮೊಹಮ್ಮದ್ ಶಮಿಗೆ ಇದು ಕಹಿ ಅಭಿಯಾನವಾಗಿ ಅಂತ್ಯಯಾಯಿತು.
ಅಂತಿಮ ಪಂದ್ಯದಲ್ಲಿ 20 ಎಸೆತಗಳಲ್ಲಿ 39 ರನ್ ಗಳಿಸುವ ಮೂಲಕ ಶುಭ್ಮನ್ ಗಿಲ್ ಅವರು ಪಂದ್ಯಾವಳಿಯ 4ನೇ ಶತಕವನ್ನು ಬಾರಿಸಲು ಸಾಧ್ಯವಾಗಲಿಲ್ಲ. ಇದೇ ವೇಳೆ ಸಾಯಿ ಸುದರ್ಶನ್ ಅವರ 47 ಎಸೆತಗಳಲ್ಲಿ 96 ರನ್‌ಗಳ ನೆರವಿನಿಂದ ಗುಜರಾತ್ ಟೈಟನ್ಸ್ 214 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 15 ಓವರ್‌ಗಳಲ್ಲಿ 171 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು. ಸಿಎಸ್‌ಕೆ ಅಂತಿಮ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಯಶಸ್ವಿ ರನ್ ಚೇಸ್ ಮಾಡಿ, ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಐಪಿಎಲ್ 2023ರ ಫೈನಲ್‌ನ ಮುಕ್ತಾಯದ ನಂತರ, ಐಪಿಎಲ್‌ನಿಂದ ಎಲ್ಲಾ ವಿಜೇತರ ಹೆಸರನ್ನು ಘೋಷಿಸಲಾಗಿದ್ದು, ಅದರ ಸಂಪೂರ್ಣ ಪಟ್ಟಿ ಇಲ್ಲಿದೆ,

* ಐಪಿಎಲ್ ಪ್ರಶಸ್ತಿ ವಿಜೇತರು: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)
* ರನ್ನರ್ ಅಪ್: ಗುಜರಾತ್ ಟೈಟಾನ್ಸ್ (ಜಿಟಿ)
* ಮೂರನೇ ಸ್ಥಾನ: ಮುಂಬೈ ಇಂಡಿಯನ್ಸ್ (ಎಂಐ)
* ನಾಲ್ಕನೇ ಸ್ಥಾನ: ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ)
* ಋತುವಿನ ಅತ್ಯುತ್ತಮ ಸ್ಥಳಗಳು: ಈಡನ್ ಗಾರ್ಡನ್ಸ್ ಮತ್ತು ವಾಂಖೆಡೆ ಸ್ಟೇಡಿಯಂ
* ಐಪಿಎಲ್ ಫೇರ್ ಪ್ಲೇ ಪ್ರಶಸ್ತಿ: ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)
* ಆರೆಂಜ್ ಕ್ಯಾಪ್ ವಿಜೇತ (ಅತಿ ಹೆಚ್ಚು ರನ್ ಸ್ಕೋರರ್): ಶುಭ್ಮನ್ ಗಿಲ್ (ಜಿಟಿ) 890 ರನ್
* ಪರ್ಪಲ್ ಕ್ಯಾಪ್ ವಿಜೇತ (ಪ್ರಮುಖ ವಿಕೆಟ್ ಟೇಕರ್): ಮೊಹಮ್ಮದ್ ಶಮಿ (ಜಿಟಿ) 28 ವಿಕೆಟ್
* ಟೂರ್ನಮೆಂಟ್‌ನ ಸೂಪರ್ ಸ್ಟ್ರೈಕರ್: ಗ್ಲೆನ್ ಮ್ಯಾಕ್ಸ್‌ವೆಲ್ (ಆರ್‌ಸಿಬಿ)
* ಗೇಮ್ ಟೂರ್ನಾಮೆಂಟ್ ಚೇಂಜರ್: ಶುಭ್ಮನ್ ಗಿಲ್ (ಜಿಟಿ)
* ಪಂದ್ಯಾವಳಿಯ ಅತ್ಯಮೂಲ್ಯ ಪ್ಲೇಯರ್: ಶುಭ್ಮನ್ ಗಿಲ್ (ಜಿಟಿ)
* ಹೆಚ್ಚು ಬೌಂಡರಿಗಳ ಪ್ರಶಸ್ತಿ: ಶುಭ್ಮನ್ ಗಿಲ್
* ಅತಿ ಉದ್ದದ ಸಿಕ್ಸರ್ ಪ್ರಶಸ್ತಿ: ಫಾಫ್ ಡು ಪ್ಲೆಸಿಸ್ (115 ಮೀ)
* ಕ್ಯಾಚ್ ಆಫ್ ದಿ ಟೂರ್ನಾಮೆಂಟ್ ಪ್ರಶಸ್ತಿ: ರಶೀದ್ ಖಾನ್
* ಋತುವಿನ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್
ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಗೆದ್ದಿರುವ ಯಶಸ್ವಿ ಜೈಸ್ವಾಲ್ ಅವರು ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಂಡದಲ್ಲಿ ಬ್ಯಾಕ್‌ಅಪ್ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications