RCB vs KKR: ಪಂದ್ಯದಲ್ಲಿ ಈ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ ಕೊಹ್ಲಿ, ಫಾಫ್ ಡು ಪ್ಲೆಸಿಸ್

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 36ನೇ ಪಂದ್ಯ ನಾಳೆ ( ಏಪ್ರಿಲ್ 25 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿ ಇತ್ತಂಡಗಳು ಮುಖಾಮುಖಿಯಾಗುತ್ತಿರುವ ಎರಡನೇ ಪಂದ್ಯ ಇದಾಗಿದ್ದು, ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆದಿದ್ದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯವಾಗಿ ಸೋಲನ್ನು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಕೊಲ್ಕತ್ತಾ ನೈಟರ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 205 ರನ್‌ಗಳ ಗುರಿಯನ್ನು ನೀಡಿತ್ತು.
ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಫಲವಾಗಿತ್ತು. 17.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 123 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ 81 ರನ್‌ಗಳ ಬೃಹತ್ ಗೆಲುವನ್ನು ಕಂಡಿತ್ತು. ಹೀಗೆ ಮೊದಲ ಪಂದ್ಯದಲ್ಲಿ ಆಶ್ಷರ್ಯಕರವಾದ ರೀತಿಯಲ್ಲಿ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಳಿನ ಪಂದ್ಯದ ಮೂಲಕ ಸೇಡು ತೀರಿಸಿಕೊಳ್ಳುವತ್ತ ಕಣ್ಣಿಟ್ಟಿದೆ.
ಇನ್ನು ಈ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಹಲವು ದಾಖಲೆಗಳು ಹಾಗೂ ಮೈಲಿಗಲ್ಲುಗಳನ್ನು ನಿರ್ಮಿಸುವ ಅವಕಾಶಗಳಿದ್ದು, ಅಂತಹ ದಾಖಲೆ ಹಾಗೂ ಮೈಲಿಗಲ್ಲುಗಳ ಪಟ್ಟಿ ಈ ಕೆಳಕಂಡಂತಿದೆ..
* ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 348 ಬೌಂಡರಿಗಳನ್ನು ಬಾರಿಸಿರುವ ನಿತಿಶ್ ರಾಣಾ ನಾಳಿನ ಪಂದ್ಯದಲ್ಲಿ 2 ಬೌಂಡರಿ ಬಾರಿಸಿದರೆ 350 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 49 ಬೌಂಡರಿಗಳನ್ನು ಬಾರಿಸಿರುವ ಜೇಸನ್ ರಾಯ್ ನಾಳಿನ ಪಂದ್ಯದಲ್ಲಿ ಇನ್ನೊಂದು ಬೌಂಡರಿ ಬಾರಿಸಿದರೆ 50 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* ಟಿ ಟ್ವೆಂಟಿ ಮಾದರಿಯಲ್ಲಿ 198 ವಿಕೆಟ್‌ಗಳನ್ನು ಪಡೆದಿರುವ ಹರ್ಷಲ್ ಪಟೇಲ್ ಇನ್ನೆರಡು ವಿಕೆಟ್‌ಗಳನ್ನು ಪಡೆದರೆ 200 ವಿಕೆಟ್‌ಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* 49 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವರುಣ್ ಚಕ್ರವರ್ತಿ ನಾಳಿನ ಪಂದ್ಯದ ಮೂಲಕ 50 ಐಪಿಎಲ್ ಪಂದ್ಯಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* 47 ಐಪಿಎಲ್ ವಿಕೆಟ್‌ಗಳನ್ನು ಪಡೆದಿರುವ ಟಿಮ್ ಸೌದಿ ನಾಳಿನ ಪಂದ್ಯದಲ್ಲಿ 3 ವಿಕೆಟ್ ಪಡೆದರೆ 50 ಐಪಿಎಲ್ ವಿಕೆಟ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* 6903 ಐಪಿಎಲ್ ರನ್‌ಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ನಾಳಿನ ಪಂದ್ಯದಲ್ಲಿ 97 ರನ್ ಬಾರಿಸಿದರೆ 7000 ಐಪಿಎಲ್ ರನ್‌ಗಳ ದಾಖಲೆ ಬರೆಯಲಿದ್ದಾರೆ.
* 147 ಟಿ ಟ್ವೆಂಟಿ ವಿಕೆಟ್‌ಗಳನ್ನು ಪಡೆದಿರುವ ಲಾಕಿ ಪೆರ್ಗ್ಯುಸನ್ 3 ವಿಕೆಟ್ ಪಡೆದರೆ 150 ಟಿ ಟ್ವೆಂಟಿ ವಿಕೆಟ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* 347 ಐಪಿಎಲ್ ಬೌಂಡರಿಗಳನ್ನು ಬಾರಿಸಿರುವ ಫಾಫ್ ಡು ಪ್ಲೆಸಿಸ್ 3 ಬೌಂಡರಿಗಳನ್ನು ಬಾರಿಸಿದರೆ 350 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
* ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 498 ಬೌಂಡರಿಗಳನ್ನು ಬಾರಿಸಿರುವ ಆಂಡ್ರೆ ರಸೆಲ್ ಇನ್ನೆರಡು ಬೌಂಡರಿಗಳನ್ನು ಬಾರಿಸಿದರೆ 500 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications