LSG vs CSK: RCB ವಿರುದ್ಧ ಮುಖಭಂಗ ಅನುಭವಿಸಿದ ಲಕ್ನೋಗೆ ಇಂದು CSK ಎದುರಾಳಿ: ಪಂದ್ಯದ ಮಾಹಿತಿ
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ಇಂದು 45ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಾಟ ನಡೆಸಲಿದ್ದು ಕುತೂಹಲ ಮೂಡಿಸಿದೆ. ಎರಡು ಕೂಡ ಈ ಬಾರಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಈ ಪಂದ್ಯದಲ್ಲಿ ಯಾರ ಕೈಮೇಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು ಆಡಿರುವ 9 ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ನಾಲ್ಕರಲ್ಲಿ ಸೋಲು ಕಂಡಿದೆ. ಹೀಗಾಗಿ 10 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಆದರೆ ಕಳೆದ ಪಂದ್ಯದಲ್ಲಿ ಆರ್‌ಸಿಬಿ ತಂಡದ ವಿರುದ್ಧ ತನ್ನ ತವರಿನಲ್ಲಿಯೇ ಆಘಾತಕಾರಿ ರೀತಿಯಲ್ಲಿ ಸೋಲು ಅನುಭವಿಸಿದ್ದು ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ. ಲೋ ಸ್ಕೋರಿಂಗ್ ಪಂದ್ಯದಲ್ಲಿಯೂ ಆರ್‌ಸಿಬಿ ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತನ್ನ ತವರಿನಲ್ಲಿಯೇ ಸೋಲಿನ ಮುಖಭಂಗಕ್ಕೆ ಒಳಗಾಗಿತ್ತು.

ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆಲ ಅಮೋಘ ಗೆಲುವುಗಳ ಬಳಿಕ ಕಳೆದ ಎರಡು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದೆ. ಹೀಗಾಗಿ ಗೆಲುವಿನ ಲಯಕ್ಕೆ ಮರಳುವ ಲೆಕ್ಕಾಚಾರದಲ್ಲಿದೆ ಧೋನಿ ಪಡೆ. ಸಿಎಸ್‌ಕೆ ತಂಡ ಕೂಡ ಆಡಿರುವ 9 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ನಾಲ್ಕು ಸೋಲು ಕಂಡಿದೆ. ಆದರೆ ನೆಟ್‌ರನ್‌ರೇಟ್ ಲೆಕ್ಕಾಚಾರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಿಂತ ಹಿಂದಿರುವ ಕಾರಣ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ವಿರುದ್ಧದ ಈ ಪಂದ್ಯ ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಮೇ 3 ಬುಧವಾರ ಮಧ್ಯಾಹ್ನ ಆಯೋಜನೆಯಾಗಲಿದೆ. ಮಧ್ಯಾಹ್ನ 3:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ
ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಯಾವಾಗಲೂ ಕಠಿಣ ಎಂಬುದು ತಿಳಿದಿರುವ ಸಂಗತಿ. ಅದಕ್ಕೆ ಪೂರಕವಾಗಿ ಕಳೆದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ಇದೇ ಮೈದಾನದಲ್ಲಿ ಮುಖಾಮುಖಿಯಾಗಿದ್ದಾಗ ರನ್‌ಗಳಿಸಲು ಬ್ಯಾಟರ್‌ಗಳು ಪರದಾಡಿರುವುದು ಕೂಡ ಗಮನಿಸಬಹುದು. ಇಂದಿನ ಪಂದ್ಯದಲ್ಲಿಯೂ ಪಿಚ್ ಅದೇ ರೀತಿಯಾಗಿ ವರ್ತಿಸುವ ಸಾಧ್ಯತೆಯಿದೆ. ಇಲ್ಲಿ ರನ್‌ಗಳಿಸುವುದು ಬ್ಯಾಟರ್‌ಗಳಿಗೆ ಕಠಿಣವಾಗಿರಲಿದ್ದು ಸಿಕ್ಸರ್ ಬೌಂಡರಿಗಿಂತ ಹೆಚ್ಚಾಗಿ ಸ್ಟ್ರೈಕ್ ರೊಟೇಟ್ ಮಾಡುವುದರ ಮೇಲೆ ಬ್ಯಾಟರ್‌ಗಳು ಗಮನಹರಿಸಬೇಕಾಗುತ್ತದೆ. ಇನ್ನು ಈ ಪಂದ್ಯದಲ್ಲಿ ಸ್ಪಿನ್ನರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿರಲಿದೆ.
ಹವಾಮಾನ ವರದಿ: ಈ ಪಂದ್ಯಕ್ಕೆ ಮಳೆಯ ಆತಂಕ ಇದ್ದು ಲಕ್ನೋ ಪ್ರದೇಶದಲ್ಲಿ ಪಂದ್ಯದ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 24ರಷ್ಟು ಇದೆ. ಇನ್ನು ಪಂದ್ಯದ ಸಂದರ್ಭದಲ್ಲಿ 21-27 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರುವ ನಿರೀಕ್ಷೆಯಿದೆ.
LSG vs RCB: ವಿರಾಟ್- ಗಂಭೀರ್ ಮಾತಿನ ಚಕಮಕಿಗೆ ಅನಿಲ್ ಕುಂಬ್ಳೆ ಬೇಸರ: ಯಾರ ಪರ ನಿಂತ್ರು ಗೊತ್ತಾ ದಿಗ್ಗಜ ಕ್ರಿಕೆಟಿಗ!
ಇತ್ತಂಡಗಳ ಸಂಭಾವ್ಯ ಆಡುವ ಬಳಗ
ಲಕ್ನೋ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್, ಕೆಎಲ್ ರಾಹುಲ್ (ನಾಯಕ), ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ನವೀನ್ ಉಲ್ ಹಕ್, ರವಿ ಬಿಷ್ಣೋಯ್, ಅಮಿತ್ ಮಿಶ್ರಾ
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್, ಮತೀಶ ಪತಿರಾಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications