Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ರಾಜಸ್ಥಾನ್ ರಾಯಲ್ಸ್ vs ಸನ್‌ರೈಸರ್ಸ್ ಹೈದರಾಬಾದ್: ಪಿಚ್ ರಿಪೋರ್ಟ್, ಸಂಭಾವ್ಯ ಆಡುವ ಬಳಗ

ಭಾನುವಾರ ಸಂಜೆ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಎದುರಿಸಲಿದೆ. ಜೈಪುರದ ಸವಾಯ್‌ಮಾನ್‌ಸಿಂಗ್ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು ಪಂದ್ಯ ಕುತೂಹಲ ಮೂಡಿಸಿದೆ. ಇದು ಈ ಬಾರಿಯ ಐಪಿಎಲ್ ಆವೃತ್ತಿಯ 52ನೇ ಮುಖಾಮುಖಿಯಾಗಿದೆ.

ಟೂರ್ನಿಯ ಮಹತ್ವದ ಘಟ್ಟದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವಿನ ಲಯವನ್ನು ಕಳೆದುಕೊಂಡಿರುವುದು ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಕಳೆದ ಐದು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಆಡಿರುವ 10 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಐದು ಸೋಲು ಅನುಭವಿಸಿರುವ ರಾಜಸ್ಥಾನ್ ರಾಯಲ್ಸ್ ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಆರ್ ತಂಡ ಅಂತ್ಯಂತ ಹೀನಾಯವಾಗಿ ಸೋಲು ಕಂಡಿರುವುದು ಭಾರೀ ಹಿನ್ನಡೆಯುಂಟು ಮಾಡಿರುವುದರಲ್ಲಿ ಅನುಮಾನವಿಲ್ಲ.

IPL 2023, Match 52, Rajasthan Royals vs Sunrisers Hyderabad, Predicted Playing 11, Pitch Report

ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಆಡಿರುವ 9 ಪಂದ್ಯಗಳಲ್ಲಿ 3 ಗೆಲುವು ಮಾತ್ರವೇ ಸಾಧಿಸಿದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿತು. ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಉಳಿದುಕೊಳ್ಳಬೇಕಾದರೆ ಎಸ್‌ಆರ್‌ಹೆಚ್ ತಂಡ ಉಳಿದ ಎಲ್ಲಾ ಪಂದ್ಯಗಳಲ್ಲಿಯೂ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ

ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ವಿರುದ್ಧದ ಈ ಪಂದ್ಯ ಜೈಪುರದ ಸವಾಯ್‌ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಕ್ರೀಡಾಂಗಣದಲ್ಲಿ ಮೇ 7 ಭಾನುವಾರ ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.

RR vs SRH ಪಿಚ್ ರಿಪೋರ್ಟ್

ಜೈಪುರದ ಸವಾಯ್‌ಮಾನ್‌ಸಿಂಗ್ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳಿಗೆ ರನ್‌ಗಳಿಸಲು ಅತ್ಯಂತ ಕಠಿಣ ಪಿಚ್ ಎನಿಸಿಕೊಂಡಿದೆ. ಇಲ್ಲಿ ಬ್ಯಾಟರ್‌ಗಳು ದೊಡ್ಡ ಹೊಡೆತವನ್ನು ಬಾರಿಸುವ ಬದಲು ಒಂಟಿ ಹಾಗೂ ಎರಡು ರನ್‌ಗಳ ಮೇಲೆ ಹೆಚ್ಚಿನ ಗಮನಗಹರಿಸುವುದು ಉತ್ತಮ. ಇಲ್ಲಿ ಸ್ಪಿನ್ನರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುವ ಸಾಧ್ಯತೆಯಿದ್ದು ಅವರೇ ಪಂದ್ಯದ ಫಲಿತಾಂಶ ನಿರ್ಧರಿಸಲಿದ್ದಾರೆ. ಮತ್ತೊಂದು ಲೋ ಸ್ಕೋರಿಂಗ್ ಥ್ರಿಲ್ಲರ್ ನಡೆದರೂ ಅಚ್ಚರಿಯಿಲ್ಲ.

ಹವಾಮಾನ ವರದಿ: ಲಕ್ನೋದಲ್ಲಿ ಭಾನುವಾರ ಪಂದ್ಯಕ್ಕೆ ಪೂರಕವಾದ ವಾತಾವರಣವನ್ನು ಹೊಂದಿದೆ. ಹಾಗಾಗಿ ಮಳೆಯ ಆತಂಕವಿಲ್ಲ. ಉಷ್ಣಾಂಶ 25-28 ಡಿಗ್ರಿ ಸೆಲ್ಸಿಯಸ್‌ನ ಮಧ್ಯೆ ಇರಲಿದೆ.

IPL 2023: ಗುಜರಾತ್ ಟೈಟನ್ಸ ವಿರುದ್ಧ ಸೋತ ರೀತಿಗೆ ಕಿಡಿಕಾರಿದ ರಾಜಸ್ಥಾನ್ ರಾಯಲ್ಸ್ ಕೋಚ್ ಸಂಗಕ್ಕರ
ಇತ್ತಂಡಗಳ ಆಡುವ ಬಳಗ
ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಆಡಮ್ ಝಂಪಾ, ಟ್ರೆಂಟ್ ಬೋಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್.

ಸನ್‌ರೈಸರ್ಸ ಹೈದರಾಬಾದ್: ಅಭಿಷೇಕ್ ಶರ್ಮಾ, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಹ್ಯಾರಿ ಬ್ರೂಕ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಕೇಲ್ ಹೊಸೈನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ. ನಟರಾಜನ್, ಕಾರ್ತಿಕ್ ತ್ಯಾಗಿ

Story first published: Saturday, May 6, 2023, 14:56 [IST]
Other articles published on May 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+