ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸು ಸವಾಲು ಸ್ವೀಕರಿಸಿದೆ.
ಗುಜರಾತ್ ಟೈಟನ್ಸ್ ತಂಡ ಟೂರ್ನಿಯಲ್ಲಿ ಬಹುತೇಕ ಪ್ಲೇಆಫ್‌ಗೆ ಪ್ರವೇಶಿಸಿದ್ದು ಅಧಿಕೃತವಾಗಿ ಖಚಿತಗೊಳ್ಳಬೇಕಿದೆ. ಈಗ ಅದರ ಕಣ್ಣು ನಿಶ್ಚಿತವಾಗಿ ಅಗ್ರಸ್ಥಾನದಲ್ಲಿಯೇ ಮುಂದುವರಿಯುವುದು. ಹೀಗಾಗಿ ಇಲ್ಲಿಯವರೆಗೆ ನೀಡಿರುವ ಸಂಘಟಿತ ಪ್ರದರ್ಶನವನ್ನು ಮುಂದುವರಿಸುವತ್ತ ಚಿತ್ತ ನೆಡಲಿದೆ. ಆಡಿರುವ 11 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿರುವ ಜಿಟಿ ತಂಡ ಈಗಾಗಲೇ ಖಾತೆಯಲ್ಲಿ 16 ಅಂಕಗಳನ್ನು ಹೊಂದಿದ್ದು ಉಳಿದ ತಂಡಗಳಿಗಿಂತ ಭಾರೀ ಮುಂದಿದೆ.

ಇನ್ನು ಮುಂಬೈ ಇಂಡಿಯನ್ಸ್ ಆರಂಬಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದರೂ ಮಹತ್ವದ ಘಟ್ಟದಲ್ಲಿ ಯಶಸ್ಸು ಸಾಧಿಸಿ ಮುನ್ನುಗ್ಗುತ್ತಿದೆ. ಪ್ರಮುಖ ಆಟಗಾರರು ಲಯಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ತಂಡದ ನಾಯಕ ರೋಹಿತ್ ಶರ್ಮಾ ಫಾರ್ಮ್ ಮಾತ್ರವೇ ತಂಡಕ್ಕೆ ಸದ್ಯ ಕಳವಳಕಾರಿಯಾಗಿದ್ದು ರೋಹಿತ್ ಯಾವುದೇ ಸಂದರ್ಭದಲ್ಲಿಯೂ ಲಯಕ್ಕೆ ಮರಳುವ ಸಾಮರ್ಥ್ಯವಿರುವ ಆಟಗಾರ ಎಂಬುದರಲ್ಲಿ ಸಂಶಯವಿಲ್ಲ.
ಮುಂಬೈನ ವಾಂಖೆಡೆ ಕ್ರೀಡಾಂಗಣ ಯಾವಾಗಲೂ ಬ್ಯಾಟರ್‌ಗಳ ಪಾಲಿಗೆ ಸ್ವರ್ಗ. ಹಾಗಾಗಿ ಇಲ್ಲಿ ಮತ್ತೊಂದು ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಎರಡು ತಂಡಗಳು 200ಕ್ಕೂ ಅಧಿಕ ರನ್‌ಗಳಿಸಿದರೂ ಇಲ್ಲಿ ಅಚ್ಚರಿಯಿಲ್ಲ. ಉಳಿದ ತಾಣಗಳಿಗೆ ಹೋಲಿಸಿದರೆ ಇಲ್ಲಿ ಬ್ಯಾಟರ್‌ಗಳು ಸುಲಭವಾಗಿ ರನ್‌ಗಳನ್ನು ಗಳಿಸಲು ಅವಕಾಶ ದೊರೆಯಲಿದೆ. ಇಲ್ಲಿ ಬೌಲಿಂಗ್ ವಿಭಾಗಕ್ಕೆ ಕಠಿಣ ಸವಾಲು ಎದುರಾಗಲಿದ್ದು ಯಾವ ತಂಡ ಹೆಚ್ಚಿನ ನಿಯಂತ್ರಣ ಸಾಧಿಸಲಿದೆ ಅವರಿಗೆ ಪಂದ್ಯ ಗೆಲ್ಲುವ ಉತ್ತಮ ಅವಕಾಶವಿದೆ. ಹವಾಮಾನ ವರದಿ ಹೇಗಿದೆ?: ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಪಂದ್ಯ ಆಯೋಜನೆಯಾಗಲಿದ್ದು, 29-34 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ.
ಮುಂಬೈ ಇಂಡಿಯನ್ಸ್ ಆಡುವ ಬಳಗ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ವಿಷ್ಣು ವಿನೋದ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ
ಬೆಂಚ್: ರಮಣದೀಪ್ ಸಿಂಗ್, ಆಕಾಶ್ ಮಧ್ವಲ್, ಡೆವಾಲ್ಡ್ ಬ್ರೆವಿಸ್, ಸಂದೀಪ್ ವಾರಿಯರ್, ಹೃತಿಕ್ ಶೋಕೀನ್, ಟ್ರಿಸ್ಟಾನ್ ಸ್ಟಬ್ಸ್, ರಾಘವ್ ಗೋಯಲ್, ಜೋಫ್ರಾ ಆರ್ಚರ್, ರಿಲೆ ಮೆರೆಡಿತ್, ಶಮ್ಸ್ ಮುಲಾನಿ, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ದುವಾನ್ ಜಾನ್ಸೆನ್, ಅರ್ಷದ್ ಖಾನ್
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ನೂರ್ ಅಹ್ಮದ್
ಬೆಂಚ್: ಶುಬ್ಮನ್ ಗಿಲ್, ಶ್ರೀಕರ್ ಭರತ್, ಶಿವಂ ಮಾವಿ, ರವಿಶ್ರೀನಿವಾಸನ್ ಸಾಯಿ ಕಿಶೋರ್, ಸಾಯಿ ಸುದರ್ಶನ್, ದಾಸುನ್ ಶನಕ, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಜೋಶುವಾ ಲಿಟಲ್, ಓಡಿಯನ್ ಸ್ಮಿತ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ಯಶ್ ದಯಾಳ್