Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

MI vs KKR: ಮುಂಬೈ ಇಂಡಿಯನ್ಸ್‌ಗೆ ಸತತ 2ನೇ ಗೆಲುವು: ವೆಂಕಟೇಶ್ ಐಯ್ಯರ್ ಶತಕ ವ್ಯರ್ಥ

ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡನೇ ಗೆಲುವು ಸಾಧಿಸಿರುವ ಎಂಐ ಪಡೆ ಗೆಲುವಿನ ಹಾದಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಸೋಲು ಅನುಭವಿಸಿದ್ದ ಕಾರಣ ಮುಖಭಂಗ ಅನುಭವಿಸಿತ್ತು.

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಆರಂಭದಲ್ಲಿ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಮುಂಬೈ ಇಂಡಿಯನ್ಸ ಕೆಕೆಆರ್ ತಂಡವನ್ನು 185 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ ತಂಡದ ಪರವಾಗಿ ಪ್ರಮುಖ ಬ್ಯಾಟರ್‌ಗಳೆಲ್ಲ ಮಿಂಚಿದ್ದು ಇನ್ನೂ 14 ಎಸೆತಗಳು ಬಾಕಿಯಿರುವಂತೆಯೇ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ.

IPL 2023 MI vs KKR: Mumbai Indians win against Kolkata Knight Riders By 5 wickets

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಎನ್ ಜಗದೀಶನ್ 4 ಎಸೆತಗಳಲ್ಲಿ ಯಾವುದೇ ರನ್ ಗಳಿಸದೇ ವಿಕೆಟ್ ಕಳೆದುಕೊಂಡರೆ ರಹ್ಮನುಲ್ಲಾ ಗುರ್ಬಾಜ್ 12 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು. ಆದರೆ ನಂತರ ಬಂದ ವೆಂಕಟೇಶ್ ಅಯ್ಯರ್ ಅಬ್ಬರಿಸಿದರು. 51 ಎಸೆತಗಳಲ್ಲಿ 6 ಬೌಂಡರಿ 9 ಭರ್ಜರಿ ಸಿಕ್ಸರ್ ಸಹಿತ 104 ರನ್ ಗಳಿಸಿ ಔಟಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಪರವಾಗಿ ಶತಕ ಸಿಡಿಸಿದ ಕೇವಲ ಎರಡನೇ ಆಟಗಾರ ಎನಿಸಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ವೆಂಕಟೇಶ್ ಅಯ್ಯರ್ ಹೊರತುಪಡಿಸಿ ಉಳಿದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರು. ನಾಯಕ ನಿತೀಶ್ ರಾಣಾ 10 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದರೆ ಶಾರ್ದೂಲ್ ಠಾಕೂರ್ 11 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು. ರಿಂಕು ಸಿಂಗ್ ಕೂಡ 18 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಂಡ್ರೆ ರಸೆಲ್ 10 ಎಸೆತಗಳಲ್ಲಿ 20 ರನ್ ಗಳಿಸಿದರು ಹೀಗಾಗಿ ಕೆಕೆಆರ್ 185 ರನ್‌ಗಳನ್ನು ಗಳಿಸಲು ಶಕ್ತವಾಯಿತು.

ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಆರಂಭ ದೊರೆಯಿತು. ಆರಂಭಿಕ ಆಡುವ ಬಳಗದಿಂದ ಹೊರಗುಳಿದ ರೋಹಿತ್ ಶರ್ಮಾ ಇಂಪಾಕ್ಟ್ ಪ್ಲೇಯರ್ ಆಗಿ ಆರಂಭಿಕನಾಗಿ ಕಣಕ್ಕಿಳಿದು ಮೊದಲ ವಿಕೆಟ್‌ಗೆ 65 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ರೋಹಿತ್ ಶರ್ಮಾ 20 ರನ್‌ಗಳಿಗೆ ಔಟಾದರೂ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು 25 ಎಸೆತಗಳಲ್ಲಿ 58 ರನ್‌ ಬಾರಿಸಿದರು. ಇನ್ನು ಸೂರ್ಯಕುಮಾರ್ ಯಾದವ್ 43 ರನ್‌ಗಳಿಸಿದರೆ ತಿಲಕ್ ವರ್ಮಾ 30 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಟಿಮ್ ಡೇವಿಡ್ 24 ರನ್‌ಗಳಿಸಿ ಇನ್ನೂ 14 ಎಸೆತ ಬಾಕಿಯಿರುವಂತೆಯೇ ಗೆಲುವು ಸಾಧಿಸಲು ನೆರವಾದರು.

ಕೆಕೆಆರ್ ಪ್ಲೇಯಿಂಗ್ 11
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಎನ್ ಜಗದೀಸನ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಶಾರ್ದೂಲ್ ಠಾಕೂರ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಿಂಕು ಸಿಂಗ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ. ಇಂಪ್ಯಾಕ್ಟ್ ಪ್ಲೇಯರ್: ಮಂದೀಪ್ ಸಿಂಗ್, ವೈಭವ್ ಅರೋರಾ, ಅಂಕುಲ್ ರಾಯ್, ಡೇವಿಡ್ ವೀಸೆ, ಸುಯಾಶ್ ಶರ್ಮಾ.

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ಕ್ಯಾಮೆರಾನ್ ಗ್ರೀನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಡುವಾನ್ ಜಾನ್ಸೆನ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ. ಇಂಪ್ಯಾಕ್ಟ್ ಪ್ಲೇಯರ್: ರೋಹಿತ್ ಶರ್ಮಾ, ಕುಮಾರ್ ಕಾರ್ತಿಕೇಯ, ರಮಣ್‌ದೀಪ್ ಸಿಂಗ್, ವಿಷ್ಣು ವಿನೋದ್, ಅರ್ಷದ್ ಖಾನ್.

Story first published: Sunday, April 16, 2023, 19:36 [IST]
Other articles published on Apr 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+