IPL 2023: ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ RCB ತಂಡಕ್ಕೆ ಈ 4 ಆಟಗಾರರ ಪ್ರದರ್ಶನ ನಿರ್ಣಾಯಕ!
ಆರ್‌ಸಿಬಿ ತಂಡ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿರುವ ಕಾರಣ ಅಂಕಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಫಾಫ್ ಡಿ ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡಕ್ಕೆ ಈ ಪಂದ್ಯದ ಗೆಲುವು ಬಹಳ ಮಹತ್ವ ಪಡೆದುಕೊಂಡಿದೆ.
ಮತ್ತೊಂದೆಡೆ ಮುಂಬೈ ಇಂಡಿಯನ್ಸ್‌ಗೂ ಈ ಪಂದ್ಯದ ಗೆಲುವು ಬಹಳ ಮಹತ್ವ ಪಡೆದುಕೊಂಡಿದೆ. ಅಂಕಪಟ್ಟಿಯಲ್ಲಿ ಮುಂಬೈ ಇಮಡಿಯನ್ಸ್ ಕೂಡ ಆಡಿರುವ 10 ಪಂದ್ಯಗಳಲ್ಲಿ 10 ಅಂಕಗಳನ್ನು ಪಡೆದುಕೊಂಡಿರುವ ಕಾರಣ ಎರಡು ತಂಡಗಳು ಕೂಡ ಸಮ ಸಾಧನೆ ಮಾಡಿದೆ. ಹೀಗಾಗಿ ಮುಂದಿನ ಹಂತಕ್ಕೇರಬೇಕಾದೆ ಉಳಿದ ಪಂದ್ಯಗಳ ಪ್ರತಿ ಗೆಲುವು ಕೂಡ ನಿರ್ಣಾಯಕವಾಗಲಿದೆ. ಹಾಗಾಗಿ ಈ ಪಂದ್ಯದಲ್ಲಿ ಗೆಲುವಿಗಾಗಿ ಇತ್ತಂಡಗಳು ಕೂಡ ಶತ ಪ್ರಯತ್ನ ನಡೆಸುವುದರಲ್ಲಿ ಅನುಮಾನವಿಲ್ಲ.

ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಬೇಕಾದರೆ ತಮಡದ ಈ ನಾಲ್ಕವರು ಆಟಗಾರ ಪ್ರದರ್ಶನ ಬಹಳ ನಿರ್ಣಾಯಕ. ಆ ನಾಲ್ವರು ಯಾರು? ಇಂದಿನ ಪಂದ್ಯದಲ್ಲಿ ಈ ನಾಲ್ವರಿಂದ ಯಾವ ರೀತಿಯ ಪ್ರದರ್ಶನ ನಿರೀಕ್ಷಿಸಬಹುದು. ಮುಂದೆ ಓದಿ..
MI vs RCB: ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?
ಫಾಫ್ ಡು ಪ್ಲೆಸಿಸ್
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುವ ಕಾರಣ ರನ್ ಮಳೆ ಹರಿದುಬರುವುದರಲ್ಲಿ ಅನುಮಾನವಿಲ್ಲ. ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅಮೋಘ ಪಾರ್ಮ್‌ನಲ್ಲಿದ್ದು ಈವರೆಗಿನ ಪಂದ್ಯಗಳಲ್ಲಿ ಸಂದರ್ಭಕ್ಕೆ ತಕ್ಕ ಪ್ರದರ್ಶನ ನೀಡಿ ಮಿಂಚಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿಯೂ ಫಾಫ್ ಡು ಪ್ಲೆಸಿಸ್ ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನಕ್ಕೆ ಮುಂದಾಗುವುದು ಅಗತ್ಯ. ಹಾಗಿದ್ದಲ್ಲಿ ಆರ್‌ಸಿಬಿ ದೊಡ್ಡ ಮೊತ್ತದ ರನ್‌ಗಳಿಸುವ ಅವಕಾಶವಿದೆ.
ಗ್ಲೆನ್ ಮ್ಯಾಕ್ಸ್‌ವೆಲ್
ಆರ್‌ಸಿಬಿ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಕೆಲ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನಿಡಿದ್ದರೆ ಕೆಲ ಪಂದ್ಯಗಳಲ್ಲಿ ನೀರಸ ಆಟವಾಡಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ತನ್ನ ಸಹಜ ಶೈಲಿಯ ಬ್ಯಾಟಿಂಗ್ ಪ್ರದರ್ಶನ ನೀಡಲು ಇದು ಮತ್ತೊಂದು ಅದ್ಭುತ ಅವಕಾಶವಾಗಿದೆ. ಬ್ಯಾಟಿಂಗ್‌ಗೆ ನೆರವಾಗುವ ಪಿಚ್‌ನಲ್ಲಿ ಆರ್‌ಸಿಬಿ ಸ್ಪೋಟಕ ಆಟಗಾರ ಸ್ಪೋಟಕ ಪ್ರದರ್ಶನ ನೀಡಬೇಕಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗ ಕೂಡ ಹೇಳಿಕೊಳ್ಳುವಷ್ಟು ಬಲಿಷ್ಠವಾಗಿಲ್ಲ. ಹೀಗಾಗಿ ಇದರ ಲಾಭವನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಬಳಸಿಕೊಳ್ಳುವುದು ತಂಡಕ್ಕೆ ನಿರ್ಣಾಯಕವಾಗಲಿದೆ.
ವನಿಂದು ಹಸರಂಗ
ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನ ಬಹಳ ಮುಖ್ಯ ಪಾತ್ರವಹಿಸಲಿದೆ. ರನ್ ನಿಯಂತ್ರಣ ಹಾಗೂ ವಿಕೆಟ್ ಕಬಳಿಸುವುದು ಅಗತ್ಯವಾಗಿದೆ. ಈ ಪಂದ್ಯ ಹೈಸ್ಕೋರಿಂಗ್ ಪಂದ್ಯವಾಗಿರುವ ಕಾರಣ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರ ವಿರುದ್ಧ ವನಿಂದು ಹಸರಂಗ ಮೇಲುಗೈ ಸಾಧಿಸಬೇಕಿದೆ. ರನ್ ನಿಯಂತ್ರಣದ ಜೊತೆಗೆ ಹಸರಂಗ ವಿಕೆಟ್ ಕೂಡ ಪಡೆಯುವು ಆರ್‌ಸಿಬಿ ತಂಡಕ್ಕೆ ಮಹತ್ವವಾಗಿರಲಿದೆ.
ಮೊಹಮ್ಮದ್ ಸಿರಾಜ್
ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಈ ಬಾರಿಯ ಆವೃತ್ತಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಪವರ್‌ಪ್ಲೇ ಅವಧಿಯಲ್ಲಿ ಸಿರಾಜ್ ಪ್ರದರ್ಶನ ಆರ್‌ಸಿಬಿ ತಂಡಕ್ಕೆ ಬಹಳ ಮುಖ್ಯ. ಮುಂಬೈ ಇಂಡಿಯನ್ಸ್ ತಂಡದ ಸ್ಪೋಟಕ ಆಟಗಾರರಿಗೆ ಕಡಿವಾಣ ಹಾಕಬೇಕಿದ್ದರೆ ಸಿರಾಜ್ ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಬೇಕಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪ್ರದರ್ಶಣ ಮರೆತು ಸಿರಾಜ್ ಮತ್ತೊಂದು ಅದ್ಭುತ ಆಟವನ್ನು ನಿರೀಕ್ಷಿಸಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications