ಐಪಿಎಲ್ 2023 ಮಿನಿ ಹರಾಜು: ಆಟಗಾರರ ಹರಾಜು ಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಗೂ ಮುನ್ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಇದಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ. ಇದೇ ತಿಂಗಳ 23ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಹರಾಜಿನಲ್ಲಿ ಭಾಗಿಯಾಗಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಮಂಗಳವಾರ ಬಿಡುಗಡೆಗೊಳಿಸಿದೆ.
2023ರ ಆವೃತ್ತಿಯ ಐಪಿಎಲ್‌ಗಾಗಿ ನಡೆಯಲಿರುವ ಮಿನಿ ಹರಾಜಿನಲ್ಲಿ ಒಟ್ಟು 405 ಆಟಗಾರರು ಅಂತಿಮ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಒಟ್ಟು 991 ಆಟಗಾರರು ಆರಂಭಿಕ ಪಟ್ಟಿಯಲ್ಲಿದ್ದರು. ಈ ಪೈಕಿ 10 ಫ್ರಾಂಚೈಸಿಗಳು 369 ಆಟಗಾರರನ್ನು ಹರಾಜಿಗಾಗಿ ಆಯ್ಕೆ ಮಾಡಿಕೊಂಡಿದೆ. ತಂಡಗಳ ಒತ್ತಾಯದ ಮೇರೆಗೆ 36 ಆಟಗಾರರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದ್ದು ಒಟ್ಟು 405 ಆಟಗಾರರ ಪಟ್ಟಿ ಅಂತಿಮವಾಗಿದೆ. ಈ ಆಟಗಾರರು ಈ ಬಾರಿಯ ಮಿನಿ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ.

ದೇಶೀಯ ಹಾಗೂ ವಿದೇಶೀ ಆಟಗಾರರು ಎಷ್ಟು?
ಈ ಬಾರಿಯ ಮಿನಿ ಹರಾಜಿನಲ್ಲಿ ಅಂತಿಮ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ 405 ಆಟಗಾರರ ಪೈಕಿ 273 ಆಟಗಾರರ ಭಾರತೀಯರಾಗಿದ್ದು 132 ವಿದೇಶಿ ಆಟಗಾರರಾಗಿದ್ದಾರೆ. ಇವರಲ್ಲಿ ನಾಲ್ವರು ಸದಸ್ಯ ರಾಷ್ಟ್ರಗಳ ಆಟಗಾರರಾಗಿದ್ದಾರೆ.

ಗರಿಷ್ಠ ಹಾಗೂ ಕನಿಷ್ಠ ಪರ್ಸ್ ಮಾಹಿತಿ
ಇನ್ನು ಎಲ್ಲಾ ತಂಡಗಳ ಒಟ್ಟು ಪರ್ಸ್ 206.5 ಕೋಟಿ ಬಾಕಿಯಿದೆ. ಇದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 42.25 ಕೋಟಿ ಮೊತ್ತದ ಪರ್ಸ್‌ನೊಂದಿಗೆ ಗರಿಷ್ಠ ಮೊತ್ತದೊಂದಿಗೆ ಹರಾಜಿಗೆ ಕಣಕ್ಕಿಳಿಯಲಿದೆ. 7.05 ಕೋಟಿ ಮೊತ್ತದ ಪರ್ಸ್ ಹೊಂದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಕನಿಷ್ಠ ಪರ್ಸ್ ಹೊಂದಿದೆ.
PAK Vs ENG : ಗೆಲ್ಲಬೇಕು ಎನ್ನುವ ಉದ್ದೇಶವೇ ಅವರಲ್ಲಿ ಇರಲಿಲ್ಲ ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

ಹರಾಜಿಗೂ ಮುನ್ನ ಕೆಕೆಆರ್ ಡೀಲ್!
ಇನ್ನು ಟ್ರೇಡಿಂಗ್ ವಿಂಡೋದಲ್ಲಿ ಕೆಕೆಆರ್ ತಂಡ ಸಾಕಷ್ಟು ಕುತೂಹಲಕಾರಿ ವ್ಯವಹಾರವನ್ನು ನಡೆಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದರೆ, ಹಾಲಿ ಚಾಂಪಿಯನ್ ಲೂಕಿ ಫರ್ಗ್ಯುಸನ್ ಹಾಗೂ ರಹ್ಮನುಲ್ಲಾ ಗರ್ಬಾಲ್ ಅವರನ್ನು ಗುಜರಾತ್ ಟೈಟನ್ಸ್ ತಂಡದಿಂದ ತಂಡಕ್ಕೆ ಸೇರ್ಪಡೆಗೊಳಿಸಿದೆ. ಇನ್ನು ಕೆಕೆಆರ್ ಅಮನ್ ಖಾನ್ ಅವರನ್ನು ಕೂಡ ಡೆಲ್ಲಿ ಕ್ಯಾಪಿಟಲ್ಸ ತಂಡದಿಂದ ವಶಕ್ಕೆ ಪಡೆದುಕೊಂಡಿದೆ.

ಹರಾಜಿನಲ್ಲಿ ಮಯಾಂಕ್, ಮನೀಶ್
ಇನ್ನು ಪಂಜಾಬ್ ಕಿಂಗ್ಸ್ ತಂಡ ನಾಯಕ ಮಯಾಂಕ್ ಅಗರ್ವಾಲ್ ಅವರನ್ನು ಹರಾಜಿಗೆ ಬಿಡುಗಡೆಗೊಳಿಸಿದ್ದು ಅನುಭವಿ ಆಟಗಾರ ಶಿಖರ್ ಧವನ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ 1 ಕೋಟಿ ರೂಪಾಯಿ ಮೂಲ ಬೆಲೆಯ ಪಟ್ಟಿಯಲ್ಲಿದ್ದಾರೆ. ಡಿಸೆಂಬರ್ 23ರಂದು ಮಧ್ಯಾಹ್ನ 2:30ಕ್ಕೆ ಹರಾಜು ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications