ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಸರಣಿಯನ್ನು ಕಳೆದುಕೊಂಡಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ 26 ರನ್‌ಗಳ ರೋಚಕ ಸೋಲು ಕಂಡ ಬಳಿಕ ಪಾಕಿಸ್ತಾನ ತಂಡವನ್ನು ಕಮ್ರಾನ್ ಅಕ್ಮಲ್ ಟೀಕಿಸಿದ್ದಾರೆ.
ಹೆಚ್ಚಿನ ಬ್ಯಾಟರ್ ಗಳು ಉತ್ತಮವಾಗಿ ಆರಂಭ ಪಡೆದರು ಕೂಡ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾಗಿದ್ದೇ ಸೋಲಿಗೆ ಕಾರಣ ಎಂದು ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ಹೇಳಿದ್ದಾರೆ. ಬಾಬರ್ ಅಜಮ್ ನೇತೃತ್ವದ ತಂಡ ಗೆಲುವು ಸಾಧಿಸುವ ಉದ್ದೇಶದಿಂದ ಆಡಲಿಲ್ಲ ಎಂದು ಹೇಳಿದ್ದಾರೆ.
IND Vs BAN 1st Test: ಬಾಂಗ್ಲಾದೇಶ ತಂಡಕ್ಕೆ ಆಘಾತ, ಆಸ್ಪತ್ರೆ ಸೇರಿದ ಶಕೀಬ್ ಅಲ್ ಹಸನ್
ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನಲ್ಲಿ 94 ರನ್ ಗಳಿಸಿ ಉತ್ತಮವಾಗಿ ಆಡಿದ ಶಕೀಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು ಎಂದು ಅಕ್ಮಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಅವರು ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಓಲಿ ಪೋಪ್ ಹಿಡಿದ ಕ್ಯಾಚ್ ಪೂರ್ಣವಾಗಿರಲಿಲ್ಲ, ಚೆಂಡು ನೆಲಕ್ಕೆ ತಾಗುತ್ತಿತ್ತು, ಅದು ಔಟ್ ಆಗಿರಲಿಲ್ಲ, ಆದರೂ ಔಟ್ ಕೊಡಲಾಯಿತು ಎಂದು ಕಮ್ರಾನ್ ಅಕ್ಮಲ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಗೆಲ್ಲುವ ಉದ್ದೇಶದಿಂದ ಆಡಲಿಲ್ಲ
ಕಮ್ರಾನ್ ಅಕ್ಮಲ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿ, ಬ್ಯಾಟರ್‌ಗಳು 50 ಅಥವಾ 60 ರನ್ ಗಳಿಸುತ್ತಿದ್ದಂತೆ ಔಟಾದರು. ಯಾರೂ ಕೂಡ ಶತಕ ಗಳಿಸಲು ಅಥವಾ ತಂಡವನ್ನು ಗೆಲ್ಲಿಸಬೇಕು ಎನ್ನುವ ಉದ್ದೇಶದಿಂದ ಆಡಲು ಪ್ರಯತ್ನ ಮಾಡಲಿಲ್ಲ. ಸೌದ್ ಶಕೀಲ್ ಒಬ್ಬರೇ ತಂಡವನ್ನು ಗೆಲ್ಲಿಸುವ ಉದ್ದೇಶದಿಂದ ಆಡಿದರು ಎಂದು ಹೇಳಿದರು.
ಆದರೆ, ಸೌದ್ ಶಕೀಲ್ ಕೊನೆಯವರೆಗೂ ಆಡಿ ಪಂದ್ಯವನ್ನು ಮುಗಿಸಬೇಕಿತ್ತು. ಆದರೆ, ಅದು ಆಘಾತಕಾರಿ ನಿರ್ಧಾರಕ್ಕೆ ಅವರು ಬಲಿಯಾದರು. ಶಕೀಲ್ ಅಂತಹ ಹೊಡೆತವನ್ನು ಆಡುವ ಅಗತ್ಯ ಇರಲಿಲ್ಲ ಎಂದು ಹೇಳಿದರು.
ಮುಲ್ತಾನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ 26 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. 355 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ 4ನೇ ದಿನದಂತ್ಯಕ್ಕೆ 328 ರನ್‌ಗಳಿಗೆ ಆಲೌಟ್ ಆಯಿತು.
ಸರಿಯಾದ ಪ್ಲೇಯಿಂಗ್ XI ಆಡಲಿಲ್ಲ
ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಎರಡನೇ ಟೆಸ್ಟ್‌ಗೆ ಬಾಬರ್ ಅಜಮ್ ನೇತೃತ್ವದ ತಂಡವು ಸರಿಯಾದ ಪ್ಲೇಯಿಂಗ್ ಇಲೆವೆನ್ ಅನ್ನು ಆಯ್ಕೆ ಮಾಡಲು ವಿಫಲವಾಗಿದೆ ಎಂದು ಅಕ್ಮಲ್ ಹೇಳಿದರು, ಅಜರ್ ಅಲಿ ಮತ್ತು ನೌಮನ್ ಅಲಿ ಅವರನ್ನು ಆಡಿಸದಿರುವ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಎಡಗೈ ಸ್ಪಿನ್ನರ್ ನೌಮನ್ ಆಡಿದ್ದರೆ ತಂಡಕ್ಕೆ ಪ್ರಯೋಜನಕಾರಿಯಾಗುತ್ತಿತ್ತು. ಅವರ ವಿರುದ್ಧ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
"ಪಾಕಿಸ್ತಾನವು ಅಜರ್ ಅಲಿಯನ್ನು ಬಿಟ್ಟು ಪ್ರಮಾದ ಮಾಡಿದೆ. ಈ ವಿಕೆಟ್‌ನಲ್ಲಿ ಇಬ್ಬರು ವೇಗದ ಬೌಲರ್‌ಗಳನ್ನು ಆಡಿದರು. ಅಬ್ರಾರ್ ಅಹ್ಮದ್ ಅವರೊಂದಿಗೆ ನೌಮನ್ ಇದ್ದಿದ್ದರೆ, ಇಂಗ್ಲೆಂಡ್ ಖಂಡಿತವಾಗಿಯೂ ರನ್ ಗಳಿಸಲು ಕಷ್ಟಪಡುತ್ತಿತ್ತು. ಅಂತಹ ಟ್ರ್ಯಾಕ್‌ಗಳಲ್ಲಿ ನೌಮನ್ ತುಂಬಾ ಅಪಾಯಕಾರಿ ಬೌಲರ್" ಎಂದು ಹೇಳಿದರು.
ಇಂಗ್ಲೆಂಡ್ ವಿರುದ್ಧದ ಸರಣಿಯ ಸೋಲಿನ ನಂತರ, ಪಾಕಿಸ್ತಾನವು ಈಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ಫೈನಲ್ ರೇಸ್‌ನಿಂದ ಹೊರಬಿದ್ದಿದೆ.