For Quick Alerts
ALLOW NOTIFICATIONS  
For Daily Alerts
 

IPL 2023: ರಾಜಸ್ಥಾನ ರಾಯಲ್ಸ್ ವಿರುದ್ದ ಸೋಲಿನ ಬಳಿಕ ಧೋನಿ 9 ವರ್ಷದ ಹಿಂದೆ ಮಾಡಿದ್ದ ಟ್ವೀಟ್ ವೈರಲ್

ಬುಧವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ರನ್‌ಗಳ ರೋಚಕ ಗೆಲುವು ಸಾಧಿಸಿತು. ನಾಯಕ ಧೋನಿ ಕ್ರೀಸ್‌ನಲ್ಲಿದ್ದರೂ, ಕೊನೆಯ ಎಸೆತದಲ್ಲಿ ಬೌಂಡರಿ ಗಳಿಸುವಲ್ಲಿ ವಿಫಲವಾದರು. ಸಂದೀಪ್ ಶರ್ಮಾ ಯಾರ್ಕರ್ ಎಸೆಯುವ ಮೂಲಕ ಧೋನಿ ಬೌಂಡರಿ ಗಳಿಸುವುದನ್ನು ತಪ್ಪಿಸಿದರು. ಸಿಎಸ್‌ಕೆ ಸೋಲಿನ ಬಳಿಕ ಧೋನಿ 9 ವರ್ಷದ ಹಿಂದೆ ಮಾಡಿದ್ದ ಟ್ವೀಟ್ ವೈರಲ್ ಆಗಿದೆ.

ಎಂಎಸ್ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ 200 ಪಂದ್ಯಗಳಲ್ಲಿ ನಾಯಕರಾಗಿ ಮುನ್ನಡೆಸಿದ್ದಾರೆ. ಈ ವಿಶೇಷ ಮೈಲಿಗಲ್ಲಿನ ಪಂದ್ಯದಲ್ಲಿ ಸಿಎಸ್‌ಕೆ ಕೊನೆಯ ಎಸೆತದವರೆಗೂ ಹೋರಾಟ ನಡೆಸಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. 41 ವರ್ಷದ ಧೋನಿ ಕೊನೆಯ ಓವರ್ ನಲ್ಲಿ ಗೆಲುವಿಗೆ 21 ರನ್ ಬೇಕಿದ್ದಾಗ ಎರಡು ಸಿಕ್ಸರ್ ಸಿಡಿಸಿದರು, ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್‌ಗಳ ಅಗತ್ಯವಿದ್ದಾಗ ಸಂದೀಪ್ ಶರ್ಮಾ ಯಾರ್ಕರ್ ಎಸೆಯುವ ಮೂಲಕ ಧೋನಿಗೆ ಒಂದು ರನ್ ಗಳಿಸಲು ಮಾತ್ರ ಅವಕಾಶ ಮಾಡಿಕೊಟ್ಟರು.

MS Dhoni 9 Years Old Tweet

ಕಾಮೆಂಟರಿ ಬಾಕ್ಸ್‌ನಲ್ಲಿದ್ದ ರವಿಶಾಸ್ತ್ರಿ ಸೇರಿದಂತೆ ಎಲ್ಲರೂ ಕೂಡ ಧೋನಿ ಕೊನೆಯ ಎಸೆತದಲ್ಲಿ ಸಿಕ್ಸ್ ಹೊಡೆದು ಪಂದ್ಯವನ್ನು ಗೆಲ್ಲುತ್ತಾರೆ ಎಂದು ಭಾವಿಸಿದ್ದರು. ಆದರೆ ಅಂತ್ಯ ಎಲ್ಲರೂ ನಿರೀಕ್ಷಿಸದಂತೆ ಇರಲಿಲ್ಲ, ಸಂದೀಪ್ ಪರಿಪೂರ್ಣ ಯಾರ್ಕರ್ ಎಸೆದರು, ಧೋನಿ ಜಡೇಜಾ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಪಡೆದುಕೊಂಡರು. ಧೋನಿ 17 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದರು.

ವೈರಲ್ ಆಯ್ತು 9 ವರ್ಷದ ಹಳೆಯ ಟ್ವೀಟ್

ಕೊನೆಯ ಎಸೆತದಲ್ಲಿ ಧೋನಿ ಫಿನಿಶ್ ಮಾಡದಿರುವುದು ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ. ಇದರ ಬೆನ್ನಲ್ಲೇ 9 ವರ್ಷಗಳ ಹಿಂದೆ ಧೋನಿ ಮಾಡಿದ್ದ ಟ್ವೀಟ್ ವೈರಲ್ ಆಗಿದೆ. ಮಾರ್ಚ್ 24, 2014ರಲ್ಲಿ ಧೋನಿ, "ಯಾವ ತಂಡ ಗೆದ್ದರೂ ಪರವಾಗಿಲ್ಲ, ಮನರಂಜನೆಗಾಗಿ ನಾನು ಇಲ್ಲಿದ್ದೇನೆ" ಎಂದು ಟ್ವೀಟ್ ಮಾಡಿದ್ದರು. ಸೋಲು ಗೆಲುವಿನ ಬಗ್ಗೆ ಧೋನಿ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ, ಆಟವನ್ನು ಆನಂದಿಸುವುದು ಮಾತ್ರ ಅವರ ಕೆಲಸ.

ಧೋನಿ ಕೊನೆಯ ಓವರ್ ನಲ್ಲಿ ಬ್ಯಾಟಿಂಗ್ ಮಾಡುವಾಗ ಜಿಯೋ ಸಿನಿಮಾದಲ್ಲಿ 2.2 ಕೋಟಿ ವೀಕ್ಷಕರ ಸಂಖ್ಯೆಯನ್ನು ಮುಟ್ಟಿತು. ಇದು ಈ ಬಾರಿ ಐಪಿಎಲ್‌ನಲ್ಲಿ ಅತ್ಯಧಿಕ ವೀಕ್ಷಕರ ಸಂಖ್ಯೆಯಾಗಿದೆ. ಆದರೆ, ಕೊನೆಯ ಓವರ್ ನಲ್ಲಿ ಧೋನಿ ಫಿನಿಶ್ ಮಾಡಿದ್ದರೆ, ಮತ್ತೊಂದು ಅವಿಸ್ಮರಣೀಯ ಗೆಲುವು ಸಿಎಸ್‌ಕೆ ಪಾಲಾಗುತ್ತಿತ್ತು. ಅವರು ಕೊನೆಯ ಓವರ್ ನಲ್ಲಿ 200 ಸಿಕ್ಸರ್ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಮಾಡಿದರು.

MS Dhoni 9 Years Old Tweet

ತಮ್ಮ ನೆಚ್ಚಿನ ಫುಟ್ಬಾಲ್ ತಂಡಕ್ಕೆ ಬೆಂಬಲ

ಮಾರ್ಚ್ 23, 2014 ರಂದು ನಡೆದ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ನಡುವಿನ ಎಲ್ ಕ್ಲಾಸಿಕೋ ಪಂದ್ಯವನ್ನು ಉಲ್ಲೇಖಿಸಿ ಧೋನಿ ಟ್ವೀಟ್ ಮಾಡಿದ್ದರು. ಪಂದ್ಯದುದ್ದಕ್ಕೂ, ಧೋನಿ ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಮತ್ತು ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಮೆಸ್ಸಿಗಾಗಿ ಬಾರ್ಸಿಲೋನಾ ತಂಡಕ್ಕೆ ಬೆಂಬಲ ನೀಡುತ್ತೇನೆ, ಅತ್ಯುತ್ತಮ ತಂಡ ಗೆಲ್ಲಲಿ ಎಂದು ಹೇಳಿದ್ದರು. ನಾನು ಮನೋರಂಜನೆಗಾಗಿ ಇಲ್ಲಿದ್ದೇನೆ ಎಂದು ಹೇಳಿದ್ದರು.

ಐಪಿಎಲ್ 2023 ರ ಅಂತಿಮ ಓವರ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಧೋನಿ ಇದುವರೆಗೆ 13 ಎಸೆತಗಳಲ್ಲಿ 5 ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ 38 ರನ್ ಗಳಿಸಿದ್ದಾರೆ. ಕೊನೆಯ ಮೂರು ಓವರ್‌ಗಳಲ್ಲಿ 54 ರನ್‌ಗಳ ಅಗತ್ಯವಿದ್ದಾಗ, ಸಿಎಸ್‌ಕೆ ಸೋಲುತ್ತದೆ ಎಂದು ಭಾವಿಸಿದ್ದರು. ರವೀಂದ್ರ ಜಡೇಜಾ ಮತ್ತು ಧೋನಿ 30 ಎಸೆತಗಳಲ್ಲಿ 59 ರನ್ ಗಳಿಸಿದರು. ಆದರೂ ತಂಡ ಗೆಲುವು ಸಾಧಿಸುವಲ್ಲಿ ವಿಫಲವಾಯಿತು.

Story first published: Thursday, April 13, 2023, 17:30 [IST]
Other articles published on Apr 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+