Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಎಸ್ ಧೋನಿ

ಸೋಮವಾರ, ಮೇ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್‌ನ ಫೈನಲ್ ಪಂದ್ಯದಲ್ಲಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅಪರೂಪದ ದಾಖಲೆ ಬರೆದಿದ್ದಾರೆ.

ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಭಾನುವಾರ ಮಳೆ ಸುರಿದು ಅಡ್ಡಿಪಡಿಸಿದ ಕಾರಣ ಮೀಸಲು ದಿನವಾದ ಇಂದು (ಸೋಮವಾರ, ಮೇ 29) ಫೈನಲ್ ಪಂದ್ಯ ನಡೆಯುತ್ತಿದೆ.

CSK Captain MS Dhoni


ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಫೈನಲ್‌ ಪಂದ್ಯದಲ್ಲಿ ಎಂಎಸ್ ಧೋನಿ ತಮ್ಮ ವೃತ್ತಿಜೀವನದ ವಿಶಿಷ್ಟ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಎಂಎಸ್ ಧೋನಿ 250 ಐಪಿಎಲ್ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎನಿಸಿದರು. ಅವರಲ್ಲಿ ಹೆಚ್ಚಿನದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದಾರೆ ಮತ್ತು ಕೆಲವು ಪಂದ್ಯಗಳನ್ನು ರೈಸಿಂಗ್ ಪುಣೆ ಸೂಪರ್‌ಜೈಂಟ್‌ ಪರ ಆಡಿದ್ದಾರೆ. ಎಂಎಸ್ ಧೋನಿ ನಂತರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 243 ಪಂದ್ಯಗಳನ್ನು ಆಡಿದ್ದಾರೆ.

ಒಟ್ಟಾರೆ ಟಿ20 ಪಂದ್ಯಗಳಿಗೆ ಬಂದಾಗ, ಎಂಎಸ್ ಧೋನಿ ಅವರು ರೋಹಿತ್ ಶರ್ಮಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಕೆಟ್ ಕೀಪರ್- ಬ್ಯಾಟರ್ ದಿನೇಶ್ ಕಾರ್ತಿಕ್ ನಂತರ 377 ಪಂದ್ಯಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

CSK Captain MS Dhoni

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸಿಎಸ್‌ಕೆ ನಾಯಕ ಎಂಎಸ್ ಧೋನಿ

ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಬಳಿಕ ಮಾತನಾಡಿದ ಎಂಎಸ್ ಧೋನಿ, "ಮಳೆಯ ಮುನ್ಸೂಚನೆಯೊಂದಿಗೆ ನಾವು ಮೊದಲು ಬೌಲಿಂಗ್ ಮಾಡುತ್ತೇವೆ," ಎಂದರು.

ನಿನ್ನೆ (ಭಾನುವಾರ) ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿದ್ದೇವು. ಕ್ರಿಕೆಟಿಗರಾಗಿ ನಾವು ಯಾವಾಗಲೂ ಆಡಲು ಬಯಸುತ್ತೇವೆ. ಪ್ರೇಕ್ಷಕರು ಹೆಚ್ಚು ಬಳಲಿದ್ದಾರೆ. ಇಂದು ನಾವು ಅವರನ್ನು ಮನರಂಜಿಸಬಹುದು ಎಂದು ಭಾವಿಸುತ್ತೇನೆ.

"ಪಿಚ್ ದೀರ್ಘಕಾಲದವರೆಗೆ ಮುಚ್ಚಿದೆ. ಆದರೆ ಪಂದ್ಯಾವಳಿಯುದ್ದಕ್ಕೂ ಇಲ್ಲಿನ ಪಿಚ್ ಉತ್ತಮವಾಗಿ ವರ್ತಿಸಿದೆ. ನಾವು ಆಡುವ 20 ಓವರ್‌ಗಳ ಪಂದ್ಯವಾಗಿರುವುದು ತುಂಬಾ ಸಂತೋಷವಾಗಿದೆ. ಈ ರೀತಿಯ ಪಂದ್ಯಾವಳಿಗೆ ನ್ಯಾಯ ಸಲ್ಲಿಸುತ್ತದೆ. ಕಳೆದ ಪಂದ್ಯವಾಡಿದ ತಂಡವೆ ಇರಲಿದೆ,"ಎಂದು ಟಾಸ್ ವೇಳೆಯಲ್ಲಿ ಎಂಎಸ್ ಧೋನಿ ಹೇಳಿದರು.

ಆ ಬಳಿಕ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, ನಾನು ಮೊದಲು ಕೂಡ ಬೌಲಿಂಗ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದರು.

"ನಾವು ಮೊದಲು ಬೌಲಿಂಗ್ ಮಾಡುತ್ತೇನೆ, ಆದರೆ ನನ್ನ ಮನಸ್ಸು ಬ್ಯಾಟಿಂಗ್ ಮಾಡಲು ಬಯಸಿತು. ಆದ್ದರಿಂದ ನಾನು ಟಾಸ್ ಸೋಲುವುದು ನನಗಿಷ್ಟವಿಲ್ಲ. ಆದರೆ ಹವಾಮಾನ ನಮ್ಮ ನಿಯಂತ್ರಣದಿಂದ ಹೊರಗಿದೆ ಎಂದು ನಾವು ಮಾತನಾಡಿದ್ದೇವೆ. ಯಾವ ತಂಡವು ಉತ್ತಮವಾಗಿ ಆಡುತ್ತದೆಯೋ ಆ ತಂಡವು ಟ್ರೋಫಿಯ ಮೇಲೆ ಕೈ ಹಾಕುತ್ತದೆ," ಎಂದು ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದರು.

"ನಾನು ನಮ್ಮ ಹುಡುಗರು ಕೂಲ್ ಆಗಿರುವುದನ್ನು ಇಷ್ಟಪಡುತ್ತೇನೆ ಮತ್ತು ಅವರು ನನಗೆ ಮರುಪಾವತಿಸುತ್ತಾರೆ ಎಂದು ಭಾವಿಸಿದ್ದೇನೆ. ಇದು ಸಮತಟ್ಟಾದ ಟ್ರ್ಯಾಕ್, ಹಿಂದಿನ ತಂಡವೇ ಮುಂದುವರೆಯಲಿದೆ," ಎಂದು ಹಾರ್ದಿಕ್ ಪಾಂಡ್ಯ ವಿವರಿಸಿದರು.

Story first published: Monday, May 29, 2023, 20:42 [IST]
Other articles published on May 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+