For Quick Alerts
ALLOW NOTIFICATIONS  
For Daily Alerts
 

IPL 2023: ಈ ಬಾರಿ ನಿವೃತ್ತಿ ಕನ್ಫರ್ಮ್; ಹೈದರಾಬಾದ್ ವಿರುದ್ಧದ ಪಂದ್ಯದ ಬಳಿಕ ಸುಳಿವು ನೀಡಿದ ಧೋನಿ!

IPL 2023: MS Dhoni hints about IPL retirement by saying this is the last phase of my career

ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಜರುಗುತ್ತಿದ್ದು, ಲೀಗ್ ಹಂತದ ಪಂದ್ಯಗಳು ನಡೆಯುತ್ತಿವೆ. ಎರಡು ಸೀಸನ್‌ಗಳ ಬಳಿಕ ತಂಡಗಳು ಹೋಮ್ ಗ್ರೌಂಡ್‌ನಲ್ಲಿ ಪಂದ್ಯಗಳನ್ನು ಆಡುತ್ತಿದ್ದು, ತಮ್ಮ ನೆಲದ ಅಭಿಮಾನಿಗಳ ಬೆಂಬಲದ ಕೂಗು ಕೇಳುತ್ತಾ ಸೆಣಸಾಟ ನಡೆಸುತ್ತಿವೆ.

ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ವಿರುದ್ಧ ಸೋಲನ್ನು ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಂತರದ ಪಂದ್ಯಗಳಲ್ಲಿ ಗೆಲುವು ಕಂಡು ಸದ್ಯ ಉತ್ತಮ ಹಂತದಲ್ಲಿದೆ.

ಇನ್ನು ನಿನ್ನೆ ( ಏಪ್ರಿಲ್ 21 ) ಚೆನ್ನೈನ ಎಂಎ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಹ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿದೆ. ಈ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ನಾಲ್ಕನೇ ಗೆಲುವನ್ನು ದಾಖಲಿಸಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 6 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ 4 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋತಿದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

dhoni

ಹೀಗೆ ಗೆಲುವಿನ ಹಾದಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕ ಎಂ ಎಸ್ ಧೋನಿ ಮುನ್ನಡೆಸುತ್ತಿದ್ದು, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯ ಮುಕ್ತಾಯವಾದ ಬಳಿಕ ಮಾತನಾಡಿದ ಧೋನಿ ಪರೋಕ್ಷವಾಗಿ ನಿವೃತ್ತಿ ಘೋಷಿಸುವ ಸುಳಿವನ್ನು ನೀಡಿದ್ದಾರೆ. ಇಷ್ಟು ದಿನಗಳವರೆಗೆ ನಿವೃತ್ತಿ ಘೋಷಿಸುತ್ತೀರ ಎಂದಾಗ ನೇರವಾಗಿ ಖಂಡಿತವಾಗಿಯೂ ಇಲ್ಲ ಎಂಬ ಉತ್ತರವನ್ನು ನೀಡುತ್ತಿದ್ದ ಎಂ ಎಸ್ ಧೋನಿ ಈ ಬಾರಿ ನಿವೃತ್ತಿ ಕುರಿತ ಪ್ರಶ್ನೆ ಎದುರಾಗದೇ ಇದ್ದರೂ ಸಹ ಆ ಕುರಿತು ಸುಳಿವನ್ನು ನೀಡಿದ್ದಾರೆ.

"ನನಗೆ ಖಂಡಿತವಾಗಿಯೂ ವಯಸ್ಸಾಗಿದೆ. ಅದರಿಂದ ನಾಚಿಕೆಗೊಂಡು ಹೇಳಿಕೊಳ್ಳಲಾಗದೇ ಇರಲು ಆಗುವುದಿಲ್ಲ. ಏನೇ ಹೇಳಿದರೂ, ಮಾಡಿದರೂ ಇದು ನನ್ನ ಕೆರಿಯರ್‌ನ ಕೊನೆಯ ಹಂತ" ಎಂದು ಎಂ ಎಸ್ ಧೋನಿ ಹೇಳಿದರು. ಧೋನಿ ನೀಡಿದ ಈ ಹೇಳಿಕೆ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ತಮ್ಮ ನೆಚ್ಚಿನ ಕ್ರಿಕೆಟಿಗ ಈ ರೀತಿ ಪರೋಕ್ಷವಾಗಿ ನಿವೃತ್ತಿ ಸಮೀಪದಲ್ಲಿದ್ದೇನೆ ಎಂದು ಹೇಳಿಕೆ ನೀಡಿದ್ದನ್ನು ಕಂಡು ನಿರಾಸೆಗೊಳಗಾಗಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ಧೋನಿ "ನಾನು ಎಷ್ಟು ದಿನಗಳವರೆಗೆ ಆಡುತ್ತೇನೋ, ಅಲ್ಲಿಯವರೆಗೂ ಐಪಿಎಲ್ ಅನ್ನು ಎಂಜಾಯ್ ಮಾಡುವುದು ಮುಖ್ಯವಾಗಿರುತ್ತದೆ. ಎರಡು ವರ್ಷಗಳ ಬಳಿಕ ಅಭಿಮಾನಿ ಬಳಗ ಸ್ಟೇಡಿಯಂಗೆ ಬಂದು ಪಂದ್ಯಗಳನ್ನು ವೀಕ್ಷಿಸುತ್ತಿದೆ. ಸ್ಟೇಡಿಯಂ ಹೌಸ್‌ಫುಲ್ ಆಗಿದ್ದು, ಅಭಿಮಾನಿಗಳ ಎದುರು ಆಟವನ್ನಾಡಲು ಸಂತಸ ತಂದಿದೆ" ಎಂದರು.

ಹೀಗೆ ಹೇಳಿಕೆಗಳನ್ನು ನೀಡಿದ ಎಂಎಸ್ ಧೋನಿ ಅಭಿಮಾನಿಗಳು ತಮ್ಮ ಮೇಲೆ ತೋರಿಸುವ ಪ್ರೀತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಐಪಿಎಲ್ ಇತಿಹಾಸದಲ್ಲಿ ನಾವು ಚೆನ್ನೈನಲ್ಲಿ ಕೇವಲ ಆರು ಸೀಸನ್ ಆಡಿದ್ದೇವೆ, ಇಲ್ಲಿ ಬಂದು ಆಡುವುದೇ ಖುಷಿ. ಅಭಿಮಾನಿಗಳು ನಮಗೆ ಸದಾ ಪ್ರೀತಿಯನ್ನು ತೋರಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

Story first published: Saturday, April 22, 2023, 11:10 [IST]
Other articles published on Apr 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+