ಎಂಎಸ್ ಧೋನಿ ವಿಶ್ವದ ಅತ್ಯಂತ ವೇಗದ ವಿಕೆಟ್ ಕೀಪರ್; ಗಿಲ್ ಸ್ಟಂಪ್ ಔಟ್ ಬಗೆಗೆ ಸೈಮನ್ ಡೌಲ್ ಮೆಚ್ಚುಗೆ
ಸೋಮವಾರ, ಮೇ 28ರಂದು ನಡೆದ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಎಸೆದ ಬೌಲಿಂಗ್‌ನಲ್ಲಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಮಿಂಚಿನ ವೇಗದಲ್ಲಿ ಫಾರ್ಮ್‌ನಲ್ಲಿರುವ ಶುಭ್ಮನ್ ಗಿಲ್ ಅವರನ್ನು ಸ್ಟಂಪ್ ಔಟ್ ಮಾಡಿದರು.
ಸ್ಟಂಪ್‌ನ ಹಿಂದೆ ಎಂಎಸ್ ಧೋನಿ ಅವರ ಅದ್ಭುತ ಕೈಚಳಕದಿಂದ 39 ರನ್ ಗಳಿಸಿದ್ದ ಅಪಾಯಕಾರಿ ಬ್ಯಾಟರ್ ಶುಭ್ಮನ್ ಗಿಲ್ ಅನ್ನು ಪೆವಿಲಯನ್‌ಗೆ ಕಳಿಸಲು ಸಿಎಸ್‌ಕೆ ತಂಡಕ್ಕೆ ಸಹಾಯ ಮಾಡಿತು. ಇದು ಏಳನೇ ಓವರ್‌ನಲ್ಲಿ 67 ರನ್‌ಗಳ ಆರಂಭಿಕ ಜೊತೆಯಾಟವನ್ನು ಮುರಿಯಿತು.

ಪವರ್‌ಪ್ಲೇ ಮುಗಿದ ನಂತರ ರವೀಂದ್ರ ಜಡೇಜಾ ಮೊದಲ ಓವರ್ ಬೌಲ್ ಮಾಡಲು ಬಂದರು. ಆ ಓವರ್‌ನ ಅಂತಿಮ ಎಸೆತದಲ್ಲಿ ಶುಭ್ಮನ್ ಗಿಲ್‌ರಿಗೆ ರವೀಂದ್ರ ಜಡೇಜಾ ವೇಗದ ಎಸೆತವನ್ನು ಎಸೆದರು. ಚೆಂಡು ಶುಭ್ಮನ್ ಬ್ಯಾಟ್‌ನ ಹೊರ ಅಂಚಿಗೆ ವಂಚಿಸಿ ಎಂಎಸ್ ಧೋನಿ ಕೈಸೇರಿತು. ಚೆಂಡನ್ನು ಹಿಡಿದು ಕೇವಲ 0.12 ಸೆಕೆಂಡುಗಳಲ್ಲಿ ಧೋನಿ ಬೇಲ್ಸ್ ಹಾರಿಸಿದರು.
ಒಂದು ಹೆಜ್ಜೆ ಮುಂದೆ ಹೋಗಿ ಆಡಲು ಮುಂದಾದ ಶುಭ್ಮನ್ ಗಿಲ್ ವಾಪಸ್ ಕ್ರೀಸ್ ತಲುಪುವಷ್ಟರಲ್ಲಿ ಎಂಎಸ್ ಧೋನಿ ಕ್ಷಣಾರ್ಧದಲ್ಲಿ ಸ್ಟಂಪ್ ಔಟ್ ಮಾಡಿದ್ದರು.
ಗುಜರಾತ್ ಟೈಟನ್ಸ್ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿದ ನಂತರ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸೈಮನ್ ಸೈಮನ್ ಡೌಲ್ ಅವರು ಎಂಎಸ್ ಧೋನಿ ವಿಶ್ವದ ಅತ್ಯಂತ ವೇಗದ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಂಎಸ್ ಧೋನಿ ತಮ್ಮ ಅಮೋಘ ವೃತ್ತಿಜೀವನದಲ್ಲಿ 42 ಐಪಿಎಲ್ ಸ್ಟಂಪಿಂಗ್‌ಗಳ ದಾಖಲೆಯನ್ನು ಹೊಂದಿದ್ದಾರೆ ಮತ್ತು 137 ಕ್ಯಾಚ್‌ಗಳನ್ನು ಒಳಗೊಂಡಂತೆ ಐಪಿಎಲ್‌ನಲ್ಲಿ 179 ಔಟ್‌ಗಳೊಂದಿಗೆ ಲೀಗ್‌ನಲ್ಲಿ ಅತಿ ಹೆಚ್ಚು ಔಟ್ ಮಾಡಿದ ವಿಕೆಟ್ ಕೀಪರ್ ಆಗಿದ್ದಾರೆ.
ಎಂಎಸ್ ಧೋನಿ 250 ಐಪಿಎಲ್ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ತಮ್ಮ ವೃತ್ತಿಜೀವನದ ವಿಶಿಷ್ಟ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಎಂಎಸ್ ಧೋನಿ 250 ಐಪಿಎಲ್ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎನಿಸಿದರು. ಅವರಲ್ಲಿ ಹೆಚ್ಚಿನದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದಾರೆ ಮತ್ತು ಕೆಲವು ಪಂದ್ಯಗಳನ್ನು ರೈಸಿಂಗ್ ಪುಣೆ ಸೂಪರ್‌ಜೈಂಟ್ ಪರ ಆಡಿದ್ದಾರೆ. ಎಂಎಸ್ ಧೋನಿ ನಂತರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 243 ಪಂದ್ಯಗಳನ್ನು ಆಡಿದ್ದಾರೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸಿಎಸ್‌ಕೆ ನಾಯಕ ಎಂಎಸ್ ಧೋನಿ
ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಬಳಿಕ ಮಾತನಾಡಿದ ಎಂಎಸ್ ಧೋನಿ, "ಮಳೆಯ ಮುನ್ಸೂಚನೆಯೊಂದಿಗೆ ನಾವು ಮೊದಲು ಬೌಲಿಂಗ್ ಮಾಡುತ್ತೇವೆ," ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications