Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಚೆಪಾಕ್ ಅಂಗಳದಲ್ಲಿ ಧೋನಿ ಮಿಂಚು: ಬ್ಯಾಟಿಂಗ್ ಜೊತೆ ಬೌಲಿಂಗ್ ಅಭ್ಯಾಸ

IPL 2023: MS Dhoni Returns To Chepauk : Smashes Sixes In The Nets

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನ ಗಣನೆ ಆರಂಭವಾಗಿದ್ದು, ಎಲ್ಲಾ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂಎಸ್ ಧೋನಿ ಚೆಪಾಕ್ ಅಂಗಳಕ್ಕೆ ವಾಪಸಾಗಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಸಾಂಪ್ರದಾಯಿಕ ಶೈಲಿಗೆ ಮರಳಲಿದೆ. ತವರು ಮತ್ತು ಹೊರಗೆ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಚೆಪಾಕ್‌ನಲ್ಲಿ ಸಿಎಸ್‌ಕೆ ಈ ಬಾರಿ ಪಂದ್ಯಗಳನ್ನಾಡುತ್ತಿರುವುದು ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದೆ.

ಎಂಎಸ್‌ ಧೋನಿ ಈ ಆವೃತ್ತಿಯ ನಂತರ ಐಪಿಎಲ್‌ನಿಂದ ನಿವೃತ್ತಿಯಾಗುವುದು ಖಚಿತವಾಗಿದೆ. ಚೆಪಾಕ್‌ ಅಂಗಳದಲ್ಲಿ ಅವರು ಅಭಿಮಾನಿಗಳ ಸಮ್ಮುಖದಲ್ಲಿ ನಿವೃತ್ತಿ ಘೋಷಿಸುವುದಾಗಿ ಫ್ರಾಂಚೈಸಿ ಸ್ಪಷ್ಟಪಡಿಸಿದೆ.

ಗೆಲುವಿನೊಂದಿಗೆ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುವ ಉತ್ಸಾಹದಲ್ಲಿದ್ದಾರೆ ಎಂಎಸ್ ಧೋನಿ, ಅದಕ್ಕಾಗಿ ಸಿದ್ಧತೆಯನ್ನು ಆರಂಭಿಸಿದ್ದಾರೆ. ಪಂದ್ಯಾವಳಿ ಆರಂಭಕ್ಕೆ ಒಂದು ತಿಂಗಳು ಮುಂಚಿತವಾಗಿ ಚೆನ್ನೈಗೆ ಆಗಮಿಸಿರುವ ಅವರು ಅಭ್ಯಾಸವನ್ನು ಆರಂಭಿಸಿದ್ದಾರೆ.

ಎಂಎಸ್ ಧೋನಿ ಮಾತ್ರವಲ್ಲದೆ ಅಜಿಂಕ್ಯ ರಹಾನೆ, ರುತುರಾಜ್ ಗಾಯಕ್ವಾಡ್ ಸೇರಿದಂತೆ ಹಲವು ಕ್ರಿಕೆಟಿಗರು ಚೆಪಾಕ್‌ನಲ್ಲಿ ಅಭ್ಯಾಸದಲ್ಲಿ ಭಾಗವಹಿಸಿದ್ದಾರೆ. ಎಂಎಸ್‌ ಧೋನಿ ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ನೆಟ್ಸ್‌ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ ಧೋನಿ

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವ ವೇಳೆ ಧೋನಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಶನಿವಾರ ರಾತ್ರಿ ನಡೆದ ಅಭ್ಯಾಸದ ಅವಧಿಯಲ್ಲಿ ನೆರೆದಿದ್ದ ಬೆಂಬಲಿಗರನ್ನು ಅವರು ಸಿಕ್ಸರ್ ಸಿಡಿಸುವ ಮೂಲಕ ರಂಜಿಸಿದರು.

ಎಂಎಸ್ ಧೋನಿ ಸಿಕ್ಸರ್ ಹೊಡೆದಿರುವ ವಿಡಿಯೋ ಈಗ ವೈರಲ್ ಆಗಿದೆ. ಧೋನಿಯ ಫಿಟ್‌ನೆಸ್ ಕಂಡು ಅಭಿಮಾನಿಗಳು ಚಕಿತಗೊಂಡಿದ್ದಾರೆ. ಅಲ್ಲದೆ ಕೊನೆಯ ಆವೃತ್ತಿಯನ್ನು ಆಡುತ್ತಿರುವುದರಿಂದ ಧೋನಿ ಮೇಲಿನ ನಿರೀಕ್ಷೆ ಕೂಡ ಹೆಚ್ಚಾಗಿದೆ. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್‌ಕೆ ಈ ಬಾರಿ ಧೋನಿ ನಾಯಕತ್ವದಲ್ಲಿ ವಪಸಾತಿ ಮಾಡುವ ವಿಶ್ವಾಸದಲ್ಲಿದೆ.

ಬೌಲಿಂಗ್ ಅಭ್ಯಾಸ ಮಾಡಿದ ಧೋನಿ

ಅಭ್ಯಾಸದ ಅವಧಿಯಲ್ಲಿ ಧೋನಿ ಅಚ್ಚರಿ ಎನ್ನುವಂತೆ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು. ಐಪಿಎಲ್‌ನಲ್ಲಿ ಅವರು ಇಷ್ಟು ವರ್ಷದಲ್ಲಿ ಒಮ್ಮೆಯೂ ಬೌಲಿಂಗ್ ಮಾಡಿಲ್ಲ, ಆದರೂ 2023ರ ಆವೃತ್ತಿಗೆ ಮುನ್ನ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.

ಒಂದು ಎಸೆತವನ್ನು ಬೌಲಿಂಗ್ ಮಾಡದೆ ನೂರು ಐಪಿಎಲ್ ಪಂದ್ಯಗಳನ್ನಾಡಿರುವ ಕೆಲವೇ ಆಟಗಾರರಲ್ಲಿ ಎಂಎಸ್ ಧೋನಿ ಕೂಡ ಒಬ್ಬರಾಗಿದ್ದಾರೆ. ಆದರೆ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯದಲ್ಲಿ ಮಾತ್ರ ಧೋನಿ ಎರಡು ಓವರ್ ಬೌಲಿಂಗ್ ಮಾಡಿದ್ದರು. ಯಾರ್ಕ್‌ಷೈರ್ ವಿರುದ್ಧದ ಪಂದ್ಯದಲ್ಲಿ ಎರಡು ಓವರ್ ಬೌಲಿಂಗ್ ಮಾಡಿದ್ದ ಅವರು ಯಾವುದೇ ವಿಕೆಟ್ ಪಡೆಯದೆ 25 ರನ್ ಬಿಟ್ಟುಕೊಟ್ಟಿದ್ದರು.

Story first published: Sunday, March 5, 2023, 14:58 [IST]
Other articles published on Mar 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+