For Quick Alerts
ALLOW NOTIFICATIONS  
For Daily Alerts
 

IPL 2023: ಎಲಿಮಿನೇಟರ್‌ನಲ್ಲಿ 5 ವಿಕೆಟ್ ಪಡೆದು ಮುಂಬೈ ಗೆಲ್ಲಿಸಿದ ಆಕಾಶ್ ಮಧ್ವಲ್ ಈ ಹಿಂದೆ ಆರ್‌ಸಿಬಿಯಲ್ಲಿದ್ರು!

IPL 2023: Mumbai Indians Akash Madhwal was part of RCB as net bowler in IPL 2021

ನಿನ್ನೆ ( ಮೇ 25 ) ಚೆನ್ನೈನ ಎಂ ಎ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಡಿದ್ದವು.

ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 81 ರನ್‌ಗಳ ಭರ್ಜರಿ ಗೆಲುವು ಕಂಡ ಮುಂಬೈ ಇಂಡಿಯನ್ಸ್ ನಾಳೆ ( ಮೇ 26 ) ನಡೆಯಲಿರುವ ಗುಜರಾತ್ ಟೈಟನ್ಸ್ ವಿರುದ್ಧದ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಆರಂಭದ ಪಂದ್ಯಗಳಲ್ಲಿ ಸಾಲು ಸಾಲು ಸೋಲುಗಳನ್ನು ಕಂಡು ಮಕಾಡೆ ಮಲಗಿ ಟೂರ್ನಿಯ ಲೀಗ್ ಹಂತದಲ್ಲಿಯೇ ಹೊರಬೀಳಲಿದೆ ಎಂಬ ಅನುಮಾನ ಮೂಡಿಸಿದ್ದ ಮುಂಬೈ ಇಂಡಿಯನ್ಸ್ ಇದೀಗ ಎರಡನೆ ಕ್ವಾಲಿಫಯರ್ ಹಂತದವರೆಗೂ ತಲುಪಿದೆ.

ಲೀಗ್ ಹಂತದಲ್ಲಿ ಕೆಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ನೇಹಲ್ ವಧೆರಾ ಹಾಗೂ ಟಿಮ್ ಡೇವಿಡ್ ರೀತಿಯ ಆಟಗಾರರು ಮುಂಬೈ ಇಂಡಿಯನ್ಸ್ ತಂಡಕ್ಕೆ ವಿವಿಧ ಪಂದ್ಯಗಳಲ್ಲಿ ಆಸರೆಯಾದರೆ, ನಿನ್ನೆ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಪರ ಹೀರೊ ಎನಿಸಿಕೊಂಡಿದ್ದು ಬೌಲರ್ ಆಕಾಶ್ ಮಧ್ವಲ್.

ಹೌದು, ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 183 ರನ್‌ಗಳ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಲಕ್ನೋ ಸೂಪರ್ ಜೈಂಟ್ಸ್ 16.3 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲ್‌ಔಟ್ ಆಯಿತು.

ಹೀಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕಡಿಮೆ ರನ್‌ಗಳಿಗೆ ಕಟ್ಟಿಹಾಕಿ ಇಷ್ಟ ದೊಡ್ಡ ಅಂತರದ ಗೆಲುವನ್ನು ದಾಖಲಿಸಲು ಕಾರಣವಾದದ್ದು ಮುಂಬೈ ಇಂಡಿಯನ್ಸ್ ತಂಡದ ಬೌಲರ್
ಆಕಾಶ್ ಮಧ್ವಲ್.

3.3 ಓವರ್‌ಗಳಲ್ಲಿ ಕೇವಲ 5 ರನ್ ನೀಡಿದ ಆಕಾಶ್ ಮಧ್ವಲ್ 5 ವಿಕೆಟ್‌ಗಳನ್ನು ಪಡೆದರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಪೋಟಕ ಆಟಗಾರರಾದ ಪ್ರೇರಕ್ ಮಂಕಡ್, ನಿಕೋಲಸ್ ಪೂರನ್ ಹಾಗೂ ಆಯುಷ್ ಬದೋನಿ ಅವರ ವಿಕೆಟ್‌ಗಳನ್ನು ಪಡೆದ ಆಕಾಶ್ ಮಧ್ವಲ್ ರವಿ ಬಿಷ್ಣೋಯಿ ಹಾಗೂ ಮೊಹ್ಸಿನ್ ಖಾನ್ ಅವರ ವಿಕೆಟ್‌ಗಳನ್ನೂ ಸಹ ಪಡೆದರು.

ಹೀಗೆ ಐದು ವಿಕೆಟ್‌ಗಳ ಗೊಂಚಲನ್ನು ಪಡೆದ ಆಕಾಶ್ ಮಧ್ವಲ್ ಯಾರು ಎಂದೆಲ್ಲಾ ಹುಡುಕಾಟ ಆರಂಭವಾಗಿದ್ದು, ಈ ವೇಳೆ ಈ ಪ್ರತಿಭೆ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ವಿಷಯ ಬಹಿರಂಗವಾಗಿದೆ. 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ಬೌಲರ್ ಅಗಿ ಆಕಾಶ್ ಮಧ್ವಲ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಆರ್‌ಸಿಬಿ ಇನ್‌ಸೈಡರ್‌ನಲ್ಲಿ ಮಾತನಾಡಿದ್ದ ಆಕಾಶ್ ನಾವೂ ಸಹ ಐಪಿಎಲ್‌ನಲ್ಲಿ ಕಣಕ್ಕಿಳಿದು ಆಡಿವ ಅವಕಾಶ ಪಡೆದುಕೊಳ್ಳಲಿದ್ದೇವೆ ಎಂಬ ಕನಸಿನೊಂದಿಗೆ ಜೀವಿಸುತ್ತಿದ್ದೇವೆ ಎಂದಿದ್ದರು. ಆರ್‌ಸಿಬಿಯಲ್ಲಿ ನೆಟ್ ಬೌಲರ್ ಆಗಿ ಕೆಲಸ ನಿರ್ವಹಿಸಿದ ನಂತರ 2022ರಲ್ಲಿ ಆಕಾಶ್ ಮಧ್ವಲ್ ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್ ಸೇರಿ ಈ ಆವೃತ್ತಿಯಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡಿದ್ದಾರೆ.

Story first published: Thursday, May 25, 2023, 14:07 [IST]
Other articles published on May 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+