IPL 2023 Ticket Booking: ಮುಂಬೈ ಇಂಡಿಯನ್ಸ್ ಪಂದ್ಯಗಳ ವಾಂಖೆಡೆ ಸ್ಟೇಡಿಯಂ ಆನ್‌ಲೈನ್ ಟಿಕೆಟ್ ಬುಕ್ಕಿಂಗ್, ಟಿಕೆಟ್ ಬೆಲೆ

ಬಹು ನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ದಿನಕಳೆದಂತೆ ದೇಶದಲ್ಲಿ ಐಪಿಎಲ್ ಕಾವು ಏರುತ್ತಿದೆ. ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ಹುರಿದುಂಬಿಸಲು ಕಾತರರಾಗಿದ್ದಾರೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 31ರಿಂದ ಅದ್ಧೂರಿ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಹಣಾಹಣಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗುತ್ತಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು (5) ಟ್ರೋಫಿಗಳನ್ನು ಗೆದ್ದಿರುವ ತಂಡವೆಂದರೆ ಅದು ಮುಂಬೈ ಇಂಡಿಯನ್ಸ್. ರೋಹಿತ್ ಶರ್ಮಾ ಪಡೆ ತಮ್ಮ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಏಪ್ರಿಲ್ 8ರಂದು ತವರಿನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಿದೆ. ಹೀಗಾಗಿ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹುರಿದುಂಬಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯಗಳ ವೀಕ್ಷಣೆಗೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಆನ್‌ಲೈನ್ ಟಿಕೆಟ್ ಬುಕ್ಕಿಂಗ್, ಆಫ್‌ಲೈನ್ ಟಿಕೆಟ್ ಖರೀದಿ ಮತ್ತು ಸ್ಟ್ಯಾಂಡ್‌ವಾರು ಟಿಕೆಟ್ ಬೆಲೆಗಳನ್ನು ನಿಗದಿಪಡಿಸಿದ್ದು, ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಆನ್‌ಲೈನ್ ಮತ್ತು ಆಫ್‌ಲೈನ್ ಟಿಕೆಟ್ ಬುಕ್ಕಿಂಗ್
ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯಗಳಿಗಾಗಿ BookMyShow ಮತ್ತು Paytm ಇನ್‌ಸೈಡರ್ ಈ ಬಾರಿಯ ಆನ್‌ಲೈನ್ ಐಪಿಎಲ್ ಟಿಕೆಟ್‌ಗಳ ಬುಕ್ಕಿಂಗ್‌ಗೆ ಎರಡು ವೇದಿಕೆಗಳಾಗಿವೆ. ಮುಂಬೈ ಇಂಡಿಯನ್ಸ್ ಪಂದ್ಯದ ಟಿಕೆಟ್‌ಗಳನ್ನು BookMyShow ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಪಂದ್ಯದ ದಿನ ಸಮೀಪಿಸುತ್ತಿದ್ದಂತೆ ಮುಂಬೈ ಇಂಡಿಯನ್ಸ್ ತಂಡದ ತವರಿನ ಪಂದ್ಯದ ಟಿಕೆಟ್‌ಗಳು BookMyShow ಪ್ಲಾಟ್‌ಫಾರ್ಮ್‌ನಲ್ಲಿ ತೆರೆದಿರುತ್ತವೆ.
ಮುಂಬೈ ಇಂಡಿಯನ್ಸ್ ಪಂದ್ಯದ ಟಿಕೆಟ್‌ಗಳ ಮಾರಾಟದ ಡೇಟಾದ ಪ್ರಕಾರ, ಬೆಲೆ ಶ್ರೇಣಿಯನ್ನು 990 ರೂ.ಗಳಿಂದ 9200 ರೂಪಾಯಿವರೆಗೆ ಶ್ರೇಣಿಕರಿಸಲಾಗಿದೆ. ಬೆಲೆಗಳು ವಿವಿಧ ಸ್ಟ್ಯಾಂಡ್‌ಗಳ ಅನುಗುಣವಾಗಿ ಬದಲಾಗುತ್ತವೆ.
ಇನ್ನು ಆಫ್‌ಲೈನ್‌ನಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಲು ಬಯಸುವ ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಟಿಕೆಟ್ ಕೌಂಟರ್‌ಗಳು ಪಂದ್ಯದ ದಿನಕ್ಕೆ ಒಂದು ವಾರದ ಮೊದಲು ಮಾತ್ರ ತೆರೆದಿರುತ್ತವೆ ಎಂದು ವರದಿಯಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ತವರಿನಲ್ಲಿ ಏಳು ಪಂದ್ಯಗಳನ್ನು ಆಡಲಿದ್ದಾರೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಬೆಂಬಲಿಸುವ ಅಭಿಮಾನಿಗಳು ಈ ಆವೃತ್ತಿಯಲ್ಲಿ ತಮ್ಮ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ತಮ್ಮ ತಂಡವನ್ನು ಪ್ರೋತ್ಸಾಹಿಸಲು ಆಗಮಿಸಲಿದ್ದಾರೆ.

ಸ್ಟ್ಯಾಂಡ್‌ಗಳ ಅನುಗುಣವಾಗಿ ಟಿಕೆಟ್ ಬೆಲೆಗಳು
ಸುನಿಲ್ ಗವಾಸ್ಕರ್ ಸ್ಟ್ಯಾಂಡ್ (G-L, L1) - 990 ರೂ.
ವಿಜಯ್ ಎಂ ಸ್ಟ್ಯಾಂಡ್ (F-L, L1) - 2400 ರೂ.
ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್ (A-F, L3) - 3500 ರೂ.
ದಿಲೀಪ್ ವೆಂಗ್‌ಸರ್ಕರ್ ಸ್ಟ್ಯಾಂಡ್ (I-K, L3) - 3500 ರೂ.
ಗ್ಯಾರೆವೇರ್ ಸ್ಟ್ಯಾಂಡ್ (A-C, L3) - 4150 ರೂ.
ಸುನಿಲ್ ಗವಾಸ್ಕರ್ ಸ್ಟ್ಯಾಂಡ್ (A-F, L3) - 4150 ರೂ.
ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್ (G, Q-V, L3) - 4150 ರೂ.
ದಿಲೀಪ್ ವೆಂಗ್‌ಸರ್ಕರ್ ಸ್ಟ್ಯಾಂಡ್ (H, L3) - 4150 ರೂ.
ದಿಲೀಪ್ ವೆಂಗ್‌ಸರ್ಕರ್ ಸ್ಟ್ಯಾಂಡ್ (W, L1) - 4150 ರೂ.
ದಿಲೀಪ್ ವೆಂಗ್‌ಸರ್ಕರ್ ಸ್ಟ್ಯಾಂಡ್ (X, Y, L1) - 4150 ರೂ.
ವಿಜಯ್ ಎಂ ಸ್ಟ್ಯಾಂಡ್ (A-E, L2) - 4150 ರೂ.
ಗ್ಯಾರೆವೇರ್ ಸ್ಟ್ಯಾಂಡ್ (D, L3) - 4150 ರೂ.
ಗ್ಯಾರೆವೇರ್ ಸ್ಟ್ಯಾಂಡ್ (I-L, L1) - 4950 ರೂ.
ಗ್ರ್ಯಾಂಡ್ ಸ್ಟ್ಯಾಂಡ್ ಹಂತ 4 - 9200 ರೂ.
ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್ (N-P, L2) - 9200 ರೂ.
ದಿಲೀಪ್ ವೆಂಗ್‌ಸರ್ಕರ್ ಸ್ಟ್ಯಾಂಡ್ (L,M, L2) - 9200 ರೂ.

ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಳಾಪಟ್ಟಿ
1) ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ - ಎಪ್ರಿಲ್ 8, ಮುಂಬೈ
2) ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ - ಎಪ್ರಿಲ್ 16, ಮುಂಬೈ
3) ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ - ಎಪ್ರಿಲ್ 22, ಮುಂಬೈ
4) ಮುಂಬೈ ಇಂಡಿಯನ್ಸ್ vs ರಾಜಸ್ಥಾನ ರಾಯಲ್ಸ್ - ಎಪ್ರಿಲ್ 30, ಮುಂಬೈ
5) ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಮೇ 9, ಮುಂಬೈ
6) ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟನ್ಸ್ - ಮೇ 12, ಮುಂಬೈ
7) ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್ - ಮೇ 21, ಮುಂಬೈ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications