MI Jersey for IPL 2023 : ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್; ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಜ್ಜು!

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 31ರಂದು ಅದ್ಧೂರಿ ಚಾಲನೆ ಸಿಗಲಿದೆ. ಈ ಬಾರಿಯ ಐಪಿಎಲ್ ಋತು ಹೆಚ್ಚು ವಿಶೇಷತೆಯನ್ನು ಹೊಂದಿದೆ. ಏಕೆಂದರೆ ತನ್ನ ಮೂಲ ತವರಿನ ಮೈದಾನ ಮತ್ತು ಎದುರಾಳಿ ಮೈದಾನದಲ್ಲಿ ಆಡುವ ಸ್ವರೂಪಕ್ಕೆ ಮರಳಿದೆ.
2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಶ್ರೀಮಂತ ಟಿ20 ಲೀಗ್ ಐಪಿಎಲ್ ಪಂದ್ಯಾವಳಿಯನ್ನು ಸೀಮಿತ ಸ್ಥಳಗಳಲ್ಲಿ ಮತ್ತು ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಆಡಿಸಲಾಗಿತ್ತು.
ಇದೀಗ ಐದು ಬಾರಿಯ ಚಾಂಪಿಯನ್ ಐಪಿಎಲ್ ಮುಂಬೈ ಇಂಡಿಯನ್ಸ್ ತಂಡವು 2023ರ ಋತುವಿಗೆ ಮುನ್ನ ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಶುಕ್ರವಾರ, ಮಾರ್ಚ್ 10ರಂದು ಹೊಚ್ಚ ಹೊಸ ಜರ್ಸಿಯನ್ನು ಹಂಚಿಕೊಂಡಿದೆ. ಇದು ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಇಷ್ಟಪಟ್ಟರು ಮತ್ತು ವೈರಲ್ ಮಾಡಿದರು.
ಹೊಸ ಜೆರ್ಸಿಯಲ್ಲಿ ದೊಡ್ಡದಾದ ಬದಲಾವಣೆಗಳಾಗಿಲ್ಲ. ಏಕೆಂದರೆ, ನೀಲಿ ಮತ್ತು ಚಿನ್ನದ ಪಟ್ಟಿಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಜೆರ್ಸಿಯು ಕಪ್ಪು ಮತ್ತು ತಿಳಿ ನೀಲಿ ಬಣ್ಣಗಳ ಮಿಶ್ರಣವನ್ನು ಹೊಂದಿದ್ದು, ಎರಡೂ ಬದಿಯಲ್ಲಿ ಚಿನ್ನದ ಪಟ್ಟೆಗಳನ್ನು ಹೊಂದಿದೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಜೆರ್ಸಿಯ ಹಿಂದಿನ ಸ್ಫೂರ್ತಿಯಾದ ಮುಂಬೈ ನಗರ, ಸಂಸ್ಕೃತಿ, ಹೋರಾಟ ಮತ್ತು ಪ್ರಯತ್ನ ಮತ್ತು ಶ್ರೇಷ್ಠತೆಯನ್ನು ಮೀರಿದ ಕನಸುಗಳಿಂದ ತುಂಬಿದೆ. ಮುಂಬೈ ನಗರ ಟ್ಯಾಕ್ಸಿ, ಗೇಟ್ ವೇ ಆಫ್ ಇಂಡಿಯಾ ಕಾಣಬಹುದು.

ಕಳೆದ 2022ರ ಆವೃತ್ತಿಯಲ್ಲಿ ತಮ್ಮ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳ ಗೆಲುವುಗಳೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದತ್ತು. ಈ ಬಾರಿ ರೋಹಿತ್ ಶರ್ಮಾ ನಾಯಕತ್ವದ ತಂಡ ಪ್ರಶಸ್ತಿಯತ್ತ ಕಣ್ಣು ನೆಟ್ಟಿದೆ.
ಐಪಿಎಲ್ 16ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ದಾಖಲೆಯ ಆರನೇ ಐಪಿಎಲ್ ಟ್ರೋಫಿಯನ್ನು ಎದುರು ನೋಡುತ್ತಿದ್ದು, ಮಾರ್ಕ್ ಬೌಚರ್ ಮಾರ್ಗದರ್ಶನದಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲು ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದೆ.
ಈ ಬಾರಿಯ ಲೀಗ್‌ನಿಂದ ಹೊರಗುಳಿದಿರುವ ವೇಗಿ ಜಸ್ಪ್ರೀತ್ ಬುಮ್ರಾ, ಝೈ ರಿಚರ್ಡ್ಸನ್ ಅವರ ಗಾಯದ ಸಮಸ್ಯೆ ಹಾಗೂ ಅಲಭ್ಯತೆಯಿಂದಾಗಿ ಅವರ ಸ್ಥಾನವನ್ನು ತುಂಬಲು ರೋಹಿತ್ ಶರ್ಮಾ ನಾಯಕತ್ವದ ತಂಡವು ಕಷ್ಟಪಡಲಿದೆ. ಮತ್ತೊಂದೆಡೆ, ಜೋಫ್ರಾ ಆರ್ಚರ್ ಮತ್ತು ಜೇಸನ್ ಬೆಹ್ರೆನ್ಡಾರ್ಫ್ ಅವರ ವೇಗದ ಬೌಲಿಂಗ್‌ನಲ್ಲಿ ಪರಿಹಾರ ಹುಡುಕಬೇಕಿದೆ.
ಪಿಯೂಷ್ ಚಾವ್ಲಾ ಅವರ ಅನುಭವ, ಕುಮಾರ್ ಕಾರ್ತಿಕೇಯ ಮತ್ತು ಹೃತಿಕ್ ಶೋಕೀನ್ ಅವರ ವೈವಿಧ್ಯತೆಯ ಸ್ಪಿನ್ ಬೌಲಿಂಗ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಪರಿಣಾಮಕಾರಿಯಾಗಿ ನೆರವಾಗಬಹುದು.
ಮುಂಬೈ ಇಂಡಿಯನ್ಸ್ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಜೋಫ್ರಾ ಆರ್ಚರ್, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಲ್, ಕ್ಯಾಮೆರಾನ್ ಗ್ರೀನ್, ಝೈ ರಿಚರ್ಡ್ಸನ್, ಪಿಯೂಷ್ ಚಾವ್ಲಾ, ದುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications